ಬೆಂಗಳೂರು: ಡಿಸೆಂಬರ್ 7 ರಿಂದ 17ರವರೆಗೆ ಸಬ್ ಅರ್ಬನ್ ರೈಲು ಓಡಾಟ

ಲಾಕ್ ಡೌನ್ ಬಳಿಕ ಇದೇ ಮೊದಲ ಬಾರಿಗೆ 6 ಸಬ್ ಅರ್ಬನ್ ರೈಲುಗಳ ಓಡಾಟ ಆರಂಭವಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಲಾಕ್ ಡೌನ್ ಬಳಿಕ ಇದೇ ಮೊದಲ ಬಾರಿಗೆ 6 ಸಬ್ ಅರ್ಬನ್ ರೈಲುಗಳ ಓಡಾಟ ಆರಂಭವಾಗುತ್ತಿದೆ.

ಇದೇ ಡಿಸೆಂಬರ್ 7 ರಿಂದ 17ರವರೆಗೆ ಬೆಂಗಳೂರಿನಿಂದ ನಾಲ್ಕೂ ದಿಕ್ಕುಗಳಲ್ಲಿ ಸಬ್ ಅರ್ಬನ್ ರೈಲು ಓಡಾಡಲಿದ್ದು, ಈ ಬಗ್ಗೆ ನೈರುತ್ಯ ರೈಲ್ವೆ (ಎಸ್‌ಡಬ್ಲ್ಯುಆರ್) ಗುರುವಾರ ಘೋಷಣೆ ಮಾಡಿದೆ. 

ಮಾರ್ಚ್ 25ರ ಬಳಿಕ ಅಂದರೆ ಲಾಕ್ ಡೌನ್ ಹೇರಿಕೆ ಬಳಿಕ ಇದೇ ಮೊದಲ ಬಾರಿಗೆ ನಗರದಲ್ಲಿ ರಿಸರ್ವೇಷನ್ ರಹಿತ ರೈಲುಗಳಿಗೆ ಚಾಲನೆ ನೀಡಲಾಗುತ್ತಿದೆ. ಈ ರೈಲುಗಳು ಈ ಹಿಂದೆ ಕೇಂದ್ರ ಸರ್ಕಾರ ಸೌಥ್ ವೆಸ್ಟ್ ರೈಲ್ವೇಗೆ ಘೋಷಣೆ ಮಾಡಲಾಗಿದ್ದ 26 ರೈಲುಗಳ ಯೋಜನೆಯ  ಭಾಗವಾಗಿದೆ. 

ರೈಲುಗಳ ವಿವರಗಳು, ಸಮಯಗಳು
ಯಶವಂತಪುರ-ಹಾಸನ-ಯಶವಂತಪುರ ಡೆಮು (06579/06580): ಬೆಳಿಗ್ಗೆ 9.30 ಕ್ಕೆ ವೈಪಿಆರ್ (ಯಶವಂತಪುರ ರೈಲ್ವೇ ನಿಲ್ದಾಣ) ನಿಂದ ನಿರ್ಗಮಿಸಿ, ಮಧ್ಯಾಹ್ನ 1 ಗಂಟೆಗೆ ಹಾಸನ ತಲುಪುತ್ತದೆ; ಮಧ್ಯಾಹ್ನ 1.30 ಕ್ಕೆ ಹಾಸನದಿಂದ ಹೊರಟು, ಅದೇ ದಿನ ಸಂಜೆ 5 ಗಂಟೆಗೆ  ಯಶವಂತಪುರಕ್ಕೆ ಆಗಮಿಸುತ್ತದೆ.

ಯಶವಂತಪುರ-ತುಮಕೂರು-ಯಶವಂತಪುರ ಡೆಮು (06553/06554): ಸಂಜೆ 6.35 ಕ್ಕೆ ಯಶವಂತಪುರದಿಂದ ಹೊರಟು ರಾತ್ರಿ 8 ಗಂಟೆಗೆ ತುಮಕೂರು ತಲುಪುತ್ತಾರೆ; ಬೆಳಿಗ್ಗೆ 7.30 ಕ್ಕೆ ತುಮಕೂರು ನಿಂದ ಹೊರಟು, ಬೆಳಿಗ್ಗೆ 9 ಗಂಟೆಗೆ ಯಶವಂತಪುರ ತಲುಪುತ್ತದೆ.

ಕೆ.ಎಸ್.ಆರ್ ಬೆಂಗಳೂರು-ಮಾರಿಕಪ್ಪಂ-ಕೆ.ಎಸ್.ಆರ್ ಮೆಮು (06555/06556): ಸಂಜೆ 6.05 ಕ್ಕೆ ಕೆ.ಎಸ್.ಆರ್ ನಿಂದ ಹೊರಟು, ಅದೇ ದಿನ ರಾತ್ರಿ 8.30 ಕ್ಕೆ ಮಾರಿಕಪ್ಪಂಗೆ ಆಗಮಿಸುತ್ತದೆ; ಬೆಳಿಗ್ಗೆ 6.35 ಕ್ಕೆ ಮಾರಿಕಪ್ಪಂನಿಂದ ಹೊರಟು, ಬೆಳಿಗ್ಗೆ 9.10 ಕ್ಕೆ  ಕೆಎಸ್‌ಆರ್ ತಲುಪುತ್ತದೆ.

ಬಂಗಾರಪೇಟೆ-ಮೈಸೂರು ಎಂಇಎಂಯು (06557/06558): ಸಂಜೆ 6.40 ಕ್ಕೆ ಬಂಗಾರಪೇಟೆಯಿಂದ ಹೊರಟು, ರಾತ್ರಿ 10.25 ಕ್ಕೆ ಮೈಸೂರು ತಲುಪುತ್ತದೆ; ಬೆಳಿಗ್ಗೆ 5 ಗಂಟೆಗೆ ಮೈಸೂರಿನಿಂದ ಹೊರಟು, ಬೆಳಿಗ್ಗೆ 10.40 ಕ್ಕೆ ಬಂಗಾರಪೇಟೆಗೆ ಆಗಮಿಸುತ್ತದೆ. ಹಿಂದೂಪುರ-ಯಶವಂತಪುರ  -ಹಿಂದೂಪುರ ಮೆಮು (06563/06564): ಬೆಳಿಗ್ಗೆ 6 ಗಂಟೆಗೆ ಹಿಂದೂಪುರದಿಂದ ಹೊರಟು, ಬೆಳಿಗ್ಗೆ 8.25 ಕ್ಕೆ ಯಶವಂತಪುರ ತಲುಪುತ್ತದೆ; ಸಂಜೆ 6 ಗಂಟೆಗೆ ಯಶವಂತಪುರದಿಂದ ನಿರ್ಗಮಿಸಿ, ರಾತ್ರಿ 8.25 ಕ್ಕೆ ಹಿಂದೂಪುರಕ್ಕೆ ಆಗಮಿಸುತ್ತದೆ. 

ಕೆಎಸ್‌ಆರ್ ಬೆಂಗಳೂರು-ಹೊಸೂರು-ಬೆಂಗಳೂರು ಎಂಇಎಂಯು (06547/06547): ಕೆಎಸ್‌ಆರ್ ಅನ್ನು ಬೆಳಿಗ್ಗೆ 7.15 ಕ್ಕೆ ಹೊರಟು, ಬೆಳಿಗ್ಗೆ 8.35 ಕ್ಕೆ ಹೊಸೂರಿಗೆ ಆಗಮಿಸುತ್ತದೆ; ಬೆಳಿಗ್ಗೆ 8.45 ಕ್ಕೆ ಹೊಸೂರಿನಿಂದ ಹೊರಟು, ಅದೇ ದಿನ ಬೆಳಿಗ್ಗೆ 10.10 ಕ್ಕೆ  ಕೆಎಸ್‌ಆರ್‌ಗೆ ಆಗಮಿಸುತ್ತದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com