ಕೊರೋನಾ ತಡೆಗಟ್ಟಲು 3ಡಬ್ಲ್ಯೂ ಜಾಗೃತಿ ಕಾರ್ಯಕ್ರಮಕ್ಕೆ ಬಿಬಿಎಂಪಿ ಚಾಲನೆ

ಮಹಾಮಾರಿ ಕೊರೋನಾ ವೈರಸ್ ತಡೆಗಟ್ಟುವ ಸಲುವಾಗಿ ವೇರ್, ವಾಶ್, ವಾಚ್ (3ಡಬ್ಲ್ಯೂ) ಹೆಸರಿನ ಜಾಗೃತಿ ಕಾರ್ಯಕ್ರಮಕ್ಕೆ ಬಿಬಿಎಂಪಿ ಚಾಲನೆ ನೀಡಿದೆ. 
ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ, ಆಯುಕ್ತ ಮಂಜುನಾಥ್ ಪ್ರಸಾದ್
ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ, ಆಯುಕ್ತ ಮಂಜುನಾಥ್ ಪ್ರಸಾದ್

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ತಡೆಗಟ್ಟುವ ಸಲುವಾಗಿ ವೇರ್, ವಾಶ್, ವಾಚ್ (3ಡಬ್ಲ್ಯೂ) ಹೆಸರಿನ ಜಾಗೃತಿ ಕಾರ್ಯಕ್ರಮಕ್ಕೆ ಬಿಬಿಎಂಪಿ ಚಾಲನೆ ನೀಡಿದೆ. 

ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ, ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಗೌರವ್ ಗುಪ್ತಾ ಅವರು, ಪರಿಸ್ಥಿತಿಯನ್ನು ಯಾರೂ ಹಗುರವಾಗಿ ತೆಗೆದುಕೊಳ್ಳಬಾರದು, ವಿಶ್ವ ಆರೋಗ್ಯ ಸಂಸ್ಥೆಯ ಸಲಹೆ ಹಾಗೂ ಸೂಚನೆಗಳನ್ನು ಕಠಿಣವಾಗಿ ಪಾಲನೆ ಮಾಡಬೇಕಿದೆ. ಕೋವಿಡ್-19 ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಾಂಕ್ರಾಮಿಕ ರೋಗವು ದಿನಕಳೆದಂತೆ ವಿಶ್ವದಾದ್ಯಂತ ಹರಡುತ್ತಿದೆ. 2ನೇ ಅಲೆ ಆರಂಭವಾಗಿದ್ದೇ ಆದರೆ, ಆರೋಗ್ಯ ಮತ್ತು ಆರ್ಥಿಕತೆ ಎರಡೂ ಆಪಾಯಕ್ಕೆ ಸಿಲುಕಲಿದೆ. ಹೀಗಾಗಿ ವೇರ್, ವಾಶ್, ವಾಚ್ (3ಡಬ್ಲ್ಯೂ) ಪ್ರತೀಯೊಬ್ಬರೂ ಅನುಸರಿಸಬೇಕೆಂದು ಹೇಳಿದ್ದಾರೆ. 

ಈ ಮೂರು ಸೂತ್ರ ಅಳವಡಿಸಿಕೊಳ್ಳುವುದರಿಂದ ಕೊರೋನಾ ರೋಗವನ್ನು ತಡೆಗಟ್ಟಬಹುದು. ಈ ಬಗ್ಗೆ ಜನರಲ್ಲಿ ಜಾಗೃತಿ ಕೂಡ ಮೂಡಿಸಬೇಕಿದೆ. ಪ್ರತಿನಿತ್ಯ ಕಸ ಸಂಗ್ರಹ ಮಾಡುವ ಕಸದ ಆಟೋಗಳಿಗೆ ಜಾಗೃತಿ ಫಲಕ ಅಳವಡಿಕೆ ಮಾಡುವುದರಿಂದ ಪ್ರತಿಯೊಬ್ಬರಿಗೂ ಅರಿವು ಮೂಡಿಸಿದಂತಾಗುತ್ತದೆ. ಕೊರೋನಾಗೆ ಇನ್ನೂ ಲಸಿಕೆ ದೊರೆತಿಲ್ಲ. ಲಸಿಕೆ ಬರುವವರೆಗೂ ಜಾಗೃತಿ ಮೂಲಕವೇ ಅದನ್ನು ನಿಯಂತ್ರಿಸಬೇಕಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com