ಬೆಂಗಳೂರು: ಮಹಿಳೆ ಸೇರಿ ನಾಲ್ವರು ಅಕ್ರಮ ಬೇಟೆಗಾರರ ಸೆರೆ, 1 ಚಿರತೆ, 6 ಹುಲಿ ಉಗುರು ಸೇರಿ ಅಪಾರ ಪ್ರಮಾಣದ ಸ್ವತ್ತು ವಶ

ಚಿರತೆ, ಹುಲಿ ಉಗುರುಗಳನ್ನು ಅಕ್ರಮವಾಗಿ ಮಾರಾಟ ನಡೆಸಿದ್ದ ಓರ್ವ ಮಹಿಳೆ ಸೇರಿದಂತೆ ನಾಲ್ವರು ಅಕ್ರಮ ಕಾಡುಪ್ರಾಣಿ ಬೇಟೆಗಾರರನ್ನು ಬೆಂಗಳೂರು ನಗರ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೋಲೀಸರು ಬಂಧಿಸಿದ್ದಾರೆ. 
ಬೆಂಗಳೂರು: ಮಹಿಳೆ ಸೇರಿ ನಾಲ್ವರು ಅಕ್ರಮ ಬೇಟೆಗಾರರ ಸೆರೆ, 1 ಚಿರತೆ, 6 ಹುಲಿ ಉಗುರು ಸೇರಿ ಅಪಾರ ಪ್ರಮಾಣದ ಸ್ವತ್ತು ವಶ

ಬೆಂಗಳೂರು: ಚಿರತೆ, ಹುಲಿ ಉಗುರುಗಳನ್ನು ಅಕ್ರಮವಾಗಿ ಮಾರಾಟ ನಡೆಸಿದ್ದ ಓರ್ವ ಮಹಿಳೆ ಸೇರಿದಂತೆ ನಾಲ್ವರು ಅಕ್ರಮ ಕಾಡುಪ್ರಾಣಿ ಬೇಟೆಗಾರರನ್ನು ಬೆಂಗಳೂರು ನಗರ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೋಲೀಸರು ಬಂಧಿಸಿದ್ದಾರೆ. 

ಬಂಧಿತರನ್ನು ಮೈಸೂರಿನ ಪ್ರಶಾಂತ್ ಕುಮಾರ್ ಮತ್ತು ಕಾರ್ತಿಕ್, ಆಂಧ್ರಪ್ರದೇಶದ ಎಸ್ ಕುಮಾರ್ ಮತ್ತು ಪ್ರಮೀಳಾ ರೆಡ್ಡಿ ಎಂದು ಗುರುತಿಸಲಾಗಿದೆ.

ಬನಶಂಕರಿಯ ಕತ್ರಿಗುಪ್ಪೆ ಮುಖ್ಯ ರಸ್ತೆಯಲ್ಲಿ ಗ್ರಾಹಕರಿಗಾಗಿ ಕಾಯುತ್ತಿರುವಾಗ ಅವರನ್ನು ಬಂಧಿಸಲಾಗಿದೆ. ಅವರಿಂದ 400 ಕ್ಕೂ ಹೆಚ್ಚು ಚಿರತೆ ಉಗುರುಗಳು, ಆರು ಹುಲಿ ಉಗುರುಗಳು ಮತ್ತು ಜಿಂಕೆ, ನರಿ, ಏಳು ಪ್ಯಾಂಗೊಲಿನ್ ಉಗುರುಗಳು, ಎರಡು ಕಾಡು ಬೆಕ್ಕಿನ ಉಗುರುಮತ್ತು ಮೂರು ಕರಡಿ ಉಗುರುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಬೆಂಗಳೂರು ದಕ್ಷಿಣ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ವಶಪಡಿಸಿಕೊಂಡ ಈ ಎಲ್ಲಾ ವಸ್ತುಗಳನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ನಾಗರಹೋಲ್ ರಾಷ್ಟ್ರೀಯ ಉದ್ಯಾನವನದಿಂದ ತರಲಾಗಿದೆ ಮತ್ತು ವಿಚಾರಣೆ ವೇಳೆ ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು. ಆರೋಪಿಗಳ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com