ಕೋವಿಡ್-19: ಪರೀಕ್ಷೆಗೊಳಗಾಗದಿದ್ದರೂ ಕ್ವಾರಂಟೈನ್'ನಲ್ಲಿರುವಂತೆ ಮಹಿಳೆಗೆ ಬಿಬಿಎಂಪಿ ಸೂಚನೆ

ಕೊರೋನಾ ಪರೀಕ್ಷೆಗೇ ಒಳಗಾಗದ ಮಹಿಳೆಯೊಬ್ಬರಿಗೆ ಬಿಬಿಎಂಪಿ ಅಧಿಕಾರಿಗಳು ಕ್ವಾರಂಟೈನ್'ಗೆ ಒಳಗಾಗುವಂತೆ ಆದೇಶಿಸಿರುವ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಪರೀಕ್ಷೆಗೇ ಒಳಗಾಗದ ಮಹಿಳೆಯೊಬ್ಬರಿಗೆ ಬಿಬಿಎಂಪಿ ಅಧಿಕಾರಿಗಳು ಕ್ವಾರಂಟೈನ್'ಗೆ ಒಳಗಾಗುವಂತೆ ಆದೇಶಿಸಿರುವ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. 

ಬಿಬಿಎಂಪಿ ಅಧಿಕಾರಿಗಳ ಕೆಲ ನಿರ್ಲಕ್ಷ್ಯ ವರ್ತನೆಗಳು ಇದೀಗ ಕೊರೋನಾ ಪರೀಕ್ಷೆಯ ನಿಖರತೆಗಳ ಬಗ್ಗೆ ಸಂಶಯಗಳು ಮೂಡುವಂತೆ ಮಾಡಿದೆ. 

ಬೆಂಗಳೂರು ರೈಲ್ವೇ ನಿಲ್ದಾಣಕ್ಕೆ ಶುಕ್ರವಾರ ಭೇಟಿ ನೀಡಿದ್ದ ಇಂಜಿನಿಯರ್ ಒಬ್ಬರ ಮೊಬೈಲ್ ಸಂಖ್ಯೆಯೆ ಬಿಬಿಎಂಪಿ ಅಧಿಕಾರಿಗಳು ಸಂದೇಶ ರವಾನೆ ಮಾಡಿದ್ದು, ಸಂದೇಶದಲ್ಲಿ ತಮ್ಮ ತಾಯಿಯ ವೈದ್ಯಕೀಯ ವರದಿ ಬರುವವರೆಗೂ ಕ್ವಾರಂಟೈನ್ ನಲ್ಲಿರಿಸುವಂತೆ ತಿಳಿಸಿದ್ದಾರೆ. 

ಬಹುರಾಷ್ಟ್ರೀಯ ಕಂಪನಿಯಲ್ಲಿ ಇಂಜಿನಿಯರ್ ಆಗಿ ಅಭಿಷೇಖ್ ಸಿ ರಾವ್ ಎಂಬುವವರಿಗೆ ಬಿಬಿಎಂಪಿ ಈ ಸಂದೇಶವನ್ನು ರವಾನಿಸಿದೆ ಎಂದು ತಿಳಿದುಬಂದಿದೆ. 

ಡಬಲ್ ಡೆಕ್ಕಲ್ ರೈಲಿನಲ್ಲಿ ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ನನ್ನ ತಾಯಿ ಚೆನ್ನೈಗೆ ತೆರಳುತ್ತಿದ್ದರು. ತಾಯಿಯನ್ನು ರೈಲ್ವೇ ನಿಲ್ದಾಣಕ್ಕೆ ಬಿಡಲು ಹೋಗಿದ್ದೆ. ಈ ವೇಳೆ ನಿಲ್ದಾಣದಲ್ಲಿ ಪಿಪಿಇ ಸೂಟ್ ಹಾಕಿದ್ದ ವೈದ್ಯಕೀಯ ಸಿಬ್ಬಂದಿಗಳು ನಮ್ಮ ಬಳಿಗೆ ಬಂದು ಪರೀಕ್ಷೆಗೊಳಗಾಗುವಂತೆ ತಿಳಿಸಿದರು. ರೈಲು ಹತ್ತಲು ಸಮಯವಾಗಿದೆ ಎಂದು ನಾನು ಅವರಿಗೆ ತಿಳಿಸಿದ್ದೆ. ಈ ವೇಳೆ ಅವರು ಮೊಬೈಲ್ ಸಂಖ್ಯೆ ನೀಡುವಂತೆ ತಿಳಿಸಿದರು. ಬಳಿಕ ನಾನು ನನ್ನ ಮೊಬೈಲ್ ಸಂಖ್ಯೆಯನ್ನು ನೀಡಿ, ತಾಯಿಯನ್ನು ರೈಲು ಹತ್ತಿಸಿ, ಮನೆಗೆ ತೆರಳುತ್ತಿದ್ದೆ. ತಾಯಿಗೆ ಯಾವುದೇ ರೀತಿಯ ಪರೀಕ್ಷೆಗಳನ್ನೂ ಮಾಡಿರಲಿಲ್ಲ. ಆದರೆ, ಮನೆಗೆ ತೆರಳುವ ವೇಳೆ ಮೊಬೈಲ್ ಸಂಖ್ಯೆಗೆ ಬಿಬಿಎಂಪಿ ಅಧಿಕಾರಿಗಳಿಂದ ಸಂದೇಶ ಬಂದಿತ್ತು. ಪರೀಕ್ಷೆಯ ವರದಿ ಬರುವವರೆಗೂ ಕ್ವಾರಂಟೈನ್ ನಲ್ಲಿರಿಸುವಂತೆ ತಿಳಿಸಲಾಗಿತ್ತು ಎಂದು ಅಭಿಷೇಕ್ ಅವರು ಹೇಳಿದ್ದಾರೆ. 

2020 ಡಿಸೆಂಬರ್ 4 ರಂದು ಸುಕಾಂತ ಅವರ ಆರ್'ಟಿ-ಪಿಸಿಆರ್ ಮಾದರಿ ಸಂಗ್ರಹಿಸಲಾಗಿದ್ದು, ಪರೀಕ್ಷೆಯ ವರದಿ ಬರುವವರೆಗೂ ಐಸೋಲೇಷನ್ ನಲ್ಲಿರುವಂತೆ ಸಲಹೆ ನೀಡಲಾಗಿಗೆ. ನಿಮ್ಮ ಮಾದರಿಯನ್ನು ಕಿದ್ವಾಯಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದ್ದರು ಎಂದು ತಿಳಿಸಿದ್ದಾರೆ. 

ಈ ನಡುವೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈಲ್ವೇ ಅಧಿಕಾರಿಗಳು, ಕೆಲವರು ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಪರೀಕ್ಷೆಗೊಳಗಾಗುವಂತೆ ಬಲವಂತ ಮಾಡುತ್ತಿರುವುದಾಗಿ ಹಲವು ದೂರುಗಳು ಬರುತ್ತಿವೆ. ಈ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com