ಬೆಂಗಳೂರು: ತ್ರಿವೇಣಿ ಥಿಯೇಟರ್ ನಲ್ಲಿ ಪೋಸ್ಟರ್ ಬದಲಿಸುವಾಗ ಮೇಲಿನಿಂದ ಕೆಳಗೆ ಬಿದ್ದು ಸೆಕ್ಯುರಿಟಿ ಗಾರ್ಡ್ ಸಾವು 

ಪೋಸ್ಟರ್ ಬದಲಿಸುವಾಗ ಮೇಲಿನಿಂದ ಕೆಳಗೆ ಬಿದ್ದು ಸೆಕ್ಯುರಿಟಿ ಗಾರ್ಡ್ ಮೃತಪಟ್ಟ ಘಟನೆ ಬೆಂಗಳೂರಿನ ತ್ರಿವೇಣಿ ಥಿಯೇಟರ್ ನಲ್ಲಿ ನಡೆದಿದೆ. 
ತ್ರಿವೇಣಿ ಥಿಯೇಟರ್
ತ್ರಿವೇಣಿ ಥಿಯೇಟರ್

ಬೆಂಗಳೂರು: ಪೋಸ್ಟರ್ ಬದಲಿಸುವಾಗ ಮೇಲಿನಿಂದ ಕೆಳಗೆ ಬಿದ್ದು ಸೆಕ್ಯುರಿಟಿ ಗಾರ್ಡ್ ಮೃತಪಟ್ಟ ಘಟನೆ ಬೆಂಗಳೂರಿನ ತ್ರಿವೇಣಿ ಥಿಯೇಟರ್ ನಲ್ಲಿ ನಡೆದಿದೆ. 

ಕೋವಿಡ್-19 ಕಾರಣದಿಂದ ಸ್ಥಗಿತಗೊಂಡಿದ್ದ ಚಿತ್ರೋದ್ಯಮ ಚಟುವಟಿಕೆ ಮತ್ತೆ ಪುನರಾರಂಭಗೊಂಡಿದ್ದು ಕಳೆದ ತಿಂಗಳು. ಥಿಯೇಟರ್ ಗಳಲ್ಲಿ ಚಿತ್ರ ಪ್ರದರ್ಶನ ಕೂಡ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಸೆಕ್ಯುರಿಟಿ ಗಾರ್ಡ್ ಸಿನೆಮಾ ಪೋಸ್ಟರ್ ನ್ನು ಬದಲಿಸುತ್ತಿದ್ದರು. 

ಆದರೆ ಥಿಯೇಟರ್ ಮಾಲೀಕರು ಹೇಳುವುದು ಬೇರೆ, ಪೋಸ್ಟರ್ ಬದಲಾಯಿಸುವುದು ಅವರ ಕೆಲಸವಾಗಿರಲಿಲ್ಲ ಎನ್ನುತ್ತಾರೆ. 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪಶ್ಚಿಮ ವಲಯದ ಡಿಸಿಪಿ ಘಟನೆ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com