ವಿಕಲಚೇತನೆಯ ಸೋಗಿನಲ್ಲಿ ಕಳವು ಮಾಡುತ್ತಿದ್ದವಳ ಬಂಧನ: 27 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ವಿಕಲಚೇತನೆಯ ಸೋಗಿನಲ್ಲಿ ರಾತ್ರೋರಾತ್ರಿ ಬೀಗ ಹಾಕಿದ‌‌ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಮನೆಗಳ್ಳಿಯನ್ನು ತಲಘಟ್ಟಪುರ‌ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಂಜುಶ್ರೀ ಹಾಗೂ ಆಕೆ ಕಳವು ಮಾಡಿದ ಸ್ವತ್ತುಗಳು
ಆರೋಪಿ ಮಂಜುಶ್ರೀ ಹಾಗೂ ಆಕೆ ಕಳವು ಮಾಡಿದ ಸ್ವತ್ತುಗಳು

ಬೆಂಗಳೂರು: ವಿಕಲಚೇತನೆಯ ಸೋಗಿನಲ್ಲಿ ರಾತ್ರೋರಾತ್ರಿ ಬೀಗ ಹಾಕಿದ‌‌ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಮನೆಗಳ್ಳಿಯನ್ನು ತಲಘಟ್ಟಪುರ‌ ಪೊಲೀಸರು ಬಂಧಿಸಿದ್ದಾರೆ.

ಮಂಜುಶ್ರೀ (45) ಬಂಧಿತ ಆರೋಪಿ.‌ ಬಂಧಿತಳಿಂದ 27 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತೆ‌ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳ ಹಿಂದೆ‌ ಗಂಡನನ್ನು ಬಿಟ್ಟು, ಇಬ್ಬರು ಹೆಣ್ಣು ಮಕ್ಕಳನ್ನು ಟ್ರಸ್ಟ್ ಒಂದಕ್ಕೆ‌ ಸೇರಿಸಿದ್ದಳು. 

ಜೀವನಕ್ಕಾಗಿ ಕೆ.ಆರ್. ಪುರಂ ಮಾರ್ಕೆಟ್ ನಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಮಂಜುಶ್ರೀಗೆ ನ್ಯಾಯೋಚಿತ ಸಂಪಾದನೆ ಐಷಾರಾಮಿ ಜೀವನ ನಡೆಸಲು ಸಾಲುವುದಿಲ್ಲ ಎಂಬ ಕಾರಣಕ್ಕೆ ಕಳ್ಳತನದ ಮಾರ್ಗ ಹಿಡಿದಿದ್ದಳು. 

ತಾನೇ ಕಾರು ಚಲಾಯಿಸಿಕೊಂಡು ಬರುವ ಮಂಜುಶ್ರೀ ಕಳ್ಳತನಕ್ಕೆಂದು ನಿರ್ಧರಿಸಿದ್ದ ಮನೆಯಿಂದ ಸ್ವಲ್ಪ ದೂರದಲ್ಲೇ ಕಾರು ನಿಲ್ಲಿಸಿ ವಿಕಲಚೇತನೆಯಂತೆ ನಟಿಸುತ್ತಾ, ಕುಂಟುತ್ತಾ ಬಂದು ಮನೆಯ ಬೀಗ ತೆರೆದು ಚಿನ್ನಾಭರಣಗಳನ್ನೆಲ್ಲಾ ದೋಚಿ ಪರಾರಿಯಾಗುತ್ತಿದ್ದಳು. ಸಧ್ಯ ಈ ಖತರ್ ನಾಕ್ ಕಳ್ಳಿಯನ್ನು ಬಂಧಿಸಿರುವ ಪೋಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com