ಬೆಂಗಳೂರು: ಲ್ಯಾಪ್ ಟಾಪ್ ಬಾಡಿಗೆ ಪಡೆದು ಮಾರಾಟ, ಮೂವರ ಬಂಧನ

ಲ್ಯಾಪ್ ಟಾಪ್ ಬಾಡಿಗೆ ಪಡೆದು ಬೇರೊಬ್ಬರಿಗೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಲ್ಯಾಪ್ ಟಾಪ್ ಬಾಡಿಗೆ ಪಡೆದು ಬೇರೊಬ್ಬರಿಗೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. 

ಸೈಪ್ ಪಾಷ(25) ಮೊಹಿನುದ್ದೀನ್(26) ಪ್ರತೀಕ್ ನಗರಕರ್(31) ಬಂಧಿತ ಆರೋಪಿಗಳು.

ಬಂಧಿತರಿಂದ 45 ಲಕ್ಷ ರೂ. ಮೌಲ್ಯದ 96 ಲ್ಯಾಪ್ ಟಾಪ್​ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು ನಗರದಾದ್ಯಂತ ನಕಲಿ ಖಾಸಗಿ ಕಂಪನಿಗಳನ್ನು ಆರಂಭಿಸಿ ನಂತರ ಕಂಪನಿ ಉಪಯೋಗಕ್ಕಾಗಿ ಲ್ಯಾಪ್ ಟಾಪ್ ​ಗಳನ್ನು ಬಾಡಿಗೆಗೆ ಪಡೆಯುತ್ತಿದ್ದರು. ಅದೇ ಲ್ಯಾಪ್ ಟಾಪ್​ಗಳನ್ನು ಜಸ್ಟ್ ಡಯಲ್ ಮೂಲಕ ಸೆಕೆಂಡ್ ಹ್ಯಾಂಡ್ ಗ್ರಾಹಕರನ್ನು ಸಂಪರ್ಕಿಸಿ ನಮ್ಮ ಕಂಪನಿ‌ ನಷ್ಟದಲ್ಲಿದ್ದು ಕಂಪನಿಯನ್ನು ಮುಚ್ಚುತ್ತಿದ್ದೇವೆ ಎಂದು ನಂಬಿಸಿ ಬಾಡಿಗೆಗೆ ಪಡೆದಿದ್ದ ಲ್ಯಾಪ್ ಟಾಪ್ ಅನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸೈಫ್ ಹಾಗೂ ತಲೆಮರೆಸಿಕೊಂಡ ಅಷ್ಪಕ್ ವಿರುದ್ಧ ಹೈದರಾಬಾದ್ ಸಿಸಿಎಸ್ ಸೇರಿ ಬೆಂಗಳೂರಿನ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ಪಕ್‌ ಎಂಬಾತ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com