ಟೆಡ್ಡಿ ಬೇರ್​ನಲ್ಲಿಟ್ಟು ಮಾದಕ ವಸ್ತು ಮಾರಾಟ: ಅಂತಾರಾಜ್ಯ ಡ್ರಗ್‌ ಪೆಡ್ಲರ್​ ಬಂಧನ

ಮಕ್ಕಳಾಡುವ ಟೆಡ್ಡಿ ಬೇರ್​ನಲ್ಲಿ ಮಾದಕ ವಸ್ತುವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಅಂತರ್ ರಾಜ್ಯ ಡ್ರಗ್‌ ಪೆಡ್ಲರ್​ನನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: ಮಕ್ಕಳಾಡುವ ಟೆಡ್ಡಿ ಬೇರ್​ನಲ್ಲಿ ಮಾದಕ ವಸ್ತುವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಅಂತರ್ ರಾಜ್ಯ ಡ್ರಗ್‌ ಪೆಡ್ಲರ್​ನನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಶಾಕೀರ್ ಹುಸೇನ್(34) ಬಂಧಿತ ಡ್ರಗ್‌ ಪೆಡ್ಲರ್. ಈತನಿಂದ 28 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 2200 ಎಂಡಿಎಂಎ ಟ್ಯಾಬ್ಲೆಟ್ಸ್, 71 ಗ್ರಾಂ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ. ಒಂದು ಎಂಡಿಎಂಎ ಮಾತ್ರೆ 3-4 ಸಾವಿರಕ್ಕೆ ಮಾರಾಟ ಮಾಡುತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಯಾರಿಗೂ ಅನುಮಾನ ಬರದಂತೆ ಡ್ರಗ್ಸ್ ಅನ್ನು ರೈಲಿನಲ್ಲಿ ಅಸ್ಸಾಂನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಈತ ಬೆಂಗಳೂರಿನ ಕೊತ್ತನೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಕಳೆದ 5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಈತ ವಾಹನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ನಂತರ ದುಶ್ಚಟಗಳಿಗೆ ದಾಸನಾದ ಈತ ಬಾಂಗ್ಲಾದ ಗಡಿಭಾಗದಿಂದ ಮಾದಕ ವಸ್ತು ಖರೀದಿಸಿ ಅಸ್ಸಾಂ ರಾಜ್ಯದಿಂದ ರಸ್ತೆ ಮಾರ್ಗವಾಗಿ ಕಾರಿನಲ್ಲಿ ತನ್ನ ಹೆಂಡತಿ ಮಕ್ಕಳೊಂದಿಗೆ ಸಂಚರಿಸಿಕೊಂಡು ಬಂದು ನಗರದಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ .

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com