ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಮೊಟ್ಟೆ, ಹಾಲು ನೀಡಲು ಬೆಂಗಳೂರು ವಿವಿ ನಿರ್ಧಾರ!

ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಬೆಂಗಳೂರು ವಿಶ್ವವಿದ್ಯಾಲಯವು, ಪ್ರತೀನಿತ್ಯ ಹಾಲು, ಮೆಟ್ಟೆ, ಕಷಾಯ ಹಣ್ಣು ನೀಡಲು ಮುಂದಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಬೆಂಗಳೂರು ವಿಶ್ವವಿದ್ಯಾಲಯವು, ಪ್ರತೀನಿತ್ಯ ಹಾಲು, ಮೆಟ್ಟೆ, ಕಷಾಯ ಹಣ್ಣು ನೀಡಲು ಮುಂದಾಗಿದೆ. 

ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲುಪತಿ ವೇಣುಗೋಪಾಲ್ ಅವರು, ಜ್ಞಾನಭಾರತಿ ಆವರಣದಲ್ಲಿರುವ ಸ್ನಾತಕೋತ್ತರ ಪದವಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರತೀನಿತ್ಯ ಮೊಟ್ಟೆ, ಹಾಲು, ಕಷಾಯ, ಹಣ್ಣಿನ ಜ್ಯೂಸ್ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. 

ಅನುದಾನಿತ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೂ ಪೌಷ್ಟಿಕಾಂಶ ಆಹಾರ ನೀಡುವಂತೆ ಸೂಚಿಸಲಾಗಿದೆ. ಆದರೆ, ಮೇಲ್ವಿಚಾರಣೆ ಮಾಡುವ ಹಾಗೂ ನಿರ್ವಹಣೆ ಮಾಡಲು ಕೆಲ ಸಮಸ್ಯೆಗಳು ಎದುರಾಗಿರುವುದರಿಂದ ಯಾರನ್ನು ಒತ್ತಾಯ ಮಾಡಿಲ್ಲ. ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಅಫ್ ಇಂಜಿನಿಯರಿಂಗ್'ನಲ್ಲಿ 100 ವಿದ್ಯಾರ್ಥಿಗಳು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 500 ವಿದ್ಯಾರ್ಥಿಗಳಿದ್ದೂ, ಇವರಲ್ಲಿ ಸಾಕಷ್ಟು ಜನರು ಹಾಸ್ಟೆಲ್ ನಲ್ಲಿಯೇ ಇದ್ದಾರೆ. 

ಸರ್ಕಾರಿ ಒಬಿಸಿ ಹಾಸ್ಟೆಲ್‌ಗಳು ಇನ್ನೂ ಆರಂಭಗೊಂಡಿಲ್ಲವಾದ್ದರಿಂದ ಶೇ.40 ರಷ್ಟು ವಿದ್ಯಾರ್ಥಿಗಳಿಗೂ ಬೆಂಗಳೂರು ವಿವಿ ಹಾಸ್ಟೆಲ್ ನಲ್ಲಿಯೇ ಆಶ್ರಯ ನೀಡಲಾಗಿದೆ. ದಿನದ ಕಳೆದಂತೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಕ್ಯಾಂಪಸ್'ಗೆ ಶೇ.50 ರಷ್ಟು ವಿದ್ಯಾರ್ಥಿಗಳು ಆಗಮಿಸಿದ್ದಾರೆಂದು ವೇಣುಗೋಪಾಲ್ ಅವರು ಹೇಳಿದ್ದಾರೆ. 

ಡಿಸೆಂಬರ್ 18 ರಂದು ಸಿಂಡಿಕೇಟ್ ಸಭೆ ನಡೆಯಲಿದ್ದು, ಈ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಪ್ರತೀ ವಿದ್ಯಾರ್ಥಿಗೆ ದಿನಕ್ಕೆ ರೂ.75 ವೆಚ್ಚವಾಗಲಿದ್ದು, ಇದರಲ್ಲಿ ರಾಜ್ಯ ಸರ್ಕಾರ ರೂ.22 ಪಾವತಿ ಮಾಡುತ್ತಿದೆ. ಉಳಿದ ಹಣದ ವಿಂಗಡಣೆ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com