ಕಾಫಿ ಡೇ ನೂತನ ಸಿಇಒ ಆಗಿ ಮಾಳವಿಕಾ ಸಿದ್ದಾರ್ಥ್ ಹೆಗ್ಡೆ ನೇಮಕ

ಕೆಫೆ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್, ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ದಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ನೇಮಕಗೊಂಡಿದ್ದಾರೆ.
ಮಾಳವಿಕಾ ಸಿದ್ದಾರ್ಥ್
ಮಾಳವಿಕಾ ಸಿದ್ದಾರ್ಥ್

ಬೆಂಗಳೂರು: ಕೆಫೆ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್, ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ದಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ನೇಮಕಗೊಂಡಿದ್ದಾರೆ.

ದೇಶದಾದ್ಯಂತ ಇರುವ ಕೆಫೆ ಕಾಫಿ ಡೇ ರೆಸ್ಟಾರೆಂಟ್‌ಗಳ ಮಾಲೀಕತ್ವವು ಸಿಡಿಇಎಲ್‌ ಕೈಯಲ್ಲಿ ಇದೆ. ‘ಕಂಪನಿಯ ನಿರ್ದೇಶಕಿ ಆಗಿರುವ ಮಾಳವಿಕಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಿಇಒ ಆಗಿ ನೇಮಕ ಮಾಡಲಾಗಿದೆ’ ಎಂದು ಕಂಪನಿಯು ತಿಳಿಸಿದೆ.

ಕಾಫಿ ಉದ್ಯಮದ ಟೈಕೊನ್ ಆಗಿದ್ದ ವಿಜಿ ಸಿದ್ದಾರ್ಥ ಅವರ ಶವ ಮಂಗಳೂರು ಬಳಿಯ ನದಿಯಲ್ಲಿ ಪತ್ತೆಯಾದ ಒಂದು ವರ್ಷದ ನಂತರ ಸಿದ್ದಾರ್ಥ್ ಅವರ ಪತ್ನಿ ಮಾಳವಿಕಾ ಹೆಗ್ಡೆ ಕಾಫೀಡೇ ಎಂಟರ್ಪ್ರೈಸಸ್ ನ ನೂತನ ಸಿಇಒ ಆಗಿ ನೇಮಕಗೊಂಡಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ಆರ್ಥಿಕ ಒತ್ತಡಗಳ ಕಾರಣ ಕಾಫಿ ಡೇ ಸಂಸ್ಥಾಪಕ ಅಧ್ಯಕ್ಷರಾಗಿದ್ದ .ವಿ .ಜಿ ಸಿದ್ದಾರ್ಥ ಅವರು ಮಂಗಳೂರು ಬಳಿಯ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಸಂಸ್ಥೆಯ ಸ್ವತಂತ್ರ ನಿರ್ದೇಶಕರಾಗಿದ್ದ ಎಸ್ ವಿ ರಂಗನಾಥ್ ಅವರು ರವರು ಮಧ್ಯಂತರ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com