ಮಾಸ್ಕ್ ಧರಿಸುವುದನ್ನು ನಿರ್ವಹಿಸದ ಹೋಟೆಲ್‌, ಥಿಯೇಟರ್‌ಗಳ ದಂಡ 1 ಲಕ್ಷದಿಂದ 10,000 ರೂ.ಗಳಿಗೆ ಇಳಿಕೆ

ಮೂರು ದಿನಗಳ ಹಿಂದೆ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಮೇಲೆ ನಿಗಾವಹಿಸಲು ವಿಫಲವಾಗಿರುವ ಹೋಟೆಲ್‌, ಥಿಯೇಟರ್‌ಗಳು, ಮಾಲ್‌ಗಳು, ಕಲ್ಯಾಣ ಮಂಟಪಗಳ ಮೇಲೆ ಬಿಬಿಎಂಪಿ ವಿಧಿಸಿದ್ದ 1 ಲಕ್ಷ ರೂ. ದಂಡದ ಮೊತ್ತವನ್ನು 10 ಸಾವಿರ ರೂ.ಗಳಿಗೆ ಇಳಿಸಿದೆ.
ಮಾಸ್ಕ್ ಧರಿಸುವುದನ್ನು ನಿರ್ವಹಿಸದ ಹೋಟೆಲ್‌, ಥಿಯೇಟರ್‌ಗಳ ದಂಡ 1 ಲಕ್ಷದಿಂದ 10,000 ರೂ.ಗಳಿಗೆ ಇಳಿಕೆ

ಬೆಂಗಳೂರು:  ಮೂರು ದಿನಗಳ ಹಿಂದೆ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಮೇಲೆ ನಿಗಾವಹಿಸಲು ವಿಫಲವಾಗಿರುವ ಹೋಟೆಲ್‌, ಥಿಯೇಟರ್‌ಗಳು, ಮಾಲ್‌ಗಳು, ಕಲ್ಯಾಣ ಮಂಟಪಗಳ ಮೇಲೆ ಬಿಬಿಎಂಪಿ ವಿಧಿಸಿದ್ದ 1 ಲಕ್ಷ ರೂ. ದಂಡದ ಮೊತ್ತವನ್ನು 10 ಸಾವಿರ ರೂ.ಗಳಿಗೆ ಇಳಿಸಿದೆ.

ಹವಾನಿಯಂತ್ರಿತ ಪಾರ್ಟಿ ಹಾಲ್‌ಗಳು, ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳು, ಬ್ರಾಂಡೆಡ್ ಅಂಗಡಿಗಳು (ಏಕ ಮತ್ತು ಬಹು ಬ್ರಾಂಡ್‌ಗಳು), ಶಾಪಿಂಗ್ ಮಾಲ್‌ಗಳು, ತ್ರೀ-ಸ್ಟಾರ್ ಮತ್ತು ಅದಕ್ಕಿಂತ ಹೆಚ್ಚಿನ ಹೋಟೆಲ್‌ಗಳು, ಕನಿಷ್ಠ 500 ಜನರ ಸಾಮರ್ಥ್ಯವಿರುವ ಮದುವೆ ಅಥವಾ ಸಮಾವೇಶ ಸಭಾಂಗಣಗಳಲ್ಲಿ ಜನರು ಮಾಸ್ಕ್ ಧರಿಸುವುದನ್ನು ಖಚಿತಪಡಿಸಿಕೊಳ್ಳಲು ವಿಫಲವಾದರೆ 10,000 ದಂಡ ವಿಧಿಸಲಾಗುತ್ತದೆ.

ಹವಾನಿಯಂತ್ರಿತವಲ್ಲದ ಪಾರ್ಟಿ ಹಾಲ್‌ ಮತ್ತು ಡಿಪಾರ್ಟ್‌ಮೆಂಟ್‌ ಸ್ಟೋರ್‌ಗಳಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com