ಬೆಂಗಳೂರು: ಆಂಜನೇಯ ದೇವಾಲಯ ನಿರ್ಮಾಣಕ್ಕೆ ಮುಸ್ಲಿಂ ವ್ಯಕ್ತಿಯಿಂದ 50 ಲಕ್ಷ ರು. ಮೌಲ್ಯದ ಭೂಮಿ ದಾನ!

ಆಂಜನೇಯ ದೇವಾಲಯ ನಿರ್ಮಾಣ ಮಾಡಲು ಮುಸ್ಲಿಂ ವ್ಯಕ್ತಿಯೊಬ್ಬರು 50 ಲಕ್ಷ ರು. ಮೌಲ್ಯದ ಒಂದೂವರೆ ಗುಂಟೆ ಜಮೀನನ್ನು ದಾನ ನೀಡಿದ್ದಾರೆ.
ಆಂಜನೇಯ ದೇವಾಲಯ
ಆಂಜನೇಯ ದೇವಾಲಯ

ಬೆಂಗಳೂರು: ಆಂಜನೇಯ ದೇವಾಲಯ ನಿರ್ಮಾಣ ಮಾಡಲು ಮುಸ್ಲಿಂ ವ್ಯಕ್ತಿಯೊಬ್ಬರು 50 ಲಕ್ಷ ರು ಮೌಲ್ಯದ ಒಂದೂವರೆ ಗುಂಟೆ ಜಮೀನನ್ನು ದಾನ ನೀಡಿದ್ದಾರೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ದೇವಾಲಯ ನಿರ್ಮಾಣಕ್ಕೆ ಎಚ್ಎಂಜಿ ಭಾಷಾ ಎಂಬುವರು  1,089 ಚದರ ಅಡಿ ಭೂಮಿ ನೀಡಿದ್ದಾರೆ. ಹೊಸಕೋಟೆ ಸಮೀಪದ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ದೇವಾಲಯ ನಿರ್ಮಾಣ ಮಾಡಲಾಗುತ್ತಿದೆ.

ನಮ್ಮ ಜನ ಚಿಕ್ಕ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದನ್ನು ನೋಡಿದ್ದೆ,  ಹೀಗಾಗಿ ನನ್ನ ಭೂಮಿ ಒಂದು ಭಾಗವನ್ನು ನೀಡಲು ನಾನು ನಿರ್ಧರಿಸಿದೆ, ನನ್ನ ಎಲ್ಲಾ ಕುಟುಂಬ ಸದಸ್ಯರು ಇದಕ್ಕೆ ಒಪ್ಪಿದರು, ಇದರಿಂದ ಸಮಾಜಕ್ಕೆ ಸಹಾಯವಾಗಲಿದೆ ಎಂದು ಭಾಷಾ ಎಎನ್ ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ದೇವಾಲಯ ನಿರ್ಮಾಣ ಹಂತದಲ್ಲಿದೆ, ಎಚ್ ಎಂಜಿ ಭಾಷಾ ದೇವಾಲಯಕ್ಕಾಗಿ ಭೂಮಿ ನೀಡಿದ್ದಾರೆ, ಇದು ಭಾಷಾ ಅವರ ದೊಡ್ಡಗುಣ ಎಂದು ದೇವಾಲಯ ಟ್ರಸ್ಟಿ ಬೈರೇಗೌಡ ತಿಳಿಸಿದ್ದಾರೆ. ಭಾಷಾ ಅವರ ಈ ದಾನಕ್ಕಾಗಿ ಗ್ರಾಮದ ರಸ್ತೆಗಳಲ್ಲಿ ಭಾಷಾ ಪೋಸ್ಟರ್ ಹಾಕಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com