ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಟ್ವೀಟ್ ಫಲಶೃತಿ: ತುಮಕೂರು ಬಾಲಕಿ ನೆರವಿಗೆ ಬಂದ ಅಧಿಕಾರಿಗಳು

ವಿದ್ಯುತ್ ಸಂಪರ್ಕವಿಲ್ಲದೆ ತನ್ನ ಗುಡಿಸಲಿನಲ್ಲಿ ವ್ಯಾಸಂಗ ಮಾಡಲು ಕಷ್ಟ ಪಡುತ್ತಿದ್ದ  5 ನೇ ತರಗತಿಯ ಬಾಲಕಿಯ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರ ಮಾಡಿದ್ದ ಟ್ವೀಟ್ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಿತು. ಶೀಘ್ರವೇ ನೆರವಿಗೆ ಧಾವಿಸಿರುವ ಅಧಿಕಾರಿಗಳು ತಾತ್ಕಾಲಿಕ ಪರಿಹಾರವಾಗಿ ಸೋಲಾರ್ ಲ್ಯಾಂಪ್ ನೀಡಿದ್ದಾರೆ.
ಬಾಲಕಿಗೆ ಸೋಲಾರ್ ಲ್ಯಾಂಪ್ ಹಸ್ತಾಂತರ
ಬಾಲಕಿಗೆ ಸೋಲಾರ್ ಲ್ಯಾಂಪ್ ಹಸ್ತಾಂತರ

ತುಮಕೂರು: ವಿದ್ಯುತ್ ಸಂಪರ್ಕವಿಲ್ಲದೆ ತನ್ನ ಗುಡಿಸಲಿನಲ್ಲಿ ವ್ಯಾಸಂಗ ಮಾಡಲು ಕಷ್ಟ ಪಡುತ್ತಿದ್ದ  5 ನೇ ತರಗತಿಯ ಬಾಲಕಿಯ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರ ಮಾಡಿದ್ದ ಟ್ವೀಟ್ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಿತು. ಶೀಘ್ರವೇ ನೆರವಿಗೆ ಧಾವಿಸಿರುವ ಅಧಿಕಾರಿಗಳು ತಾತ್ಕಾಲಿಕ ಪರಿಹಾರವಾಗಿ ಸೋಲಾರ್ ಲ್ಯಾಂಪ್ ನೀಡಿದ್ದಾರೆ.

ತಿಪಟೂರು ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಾಣಿ ಜಿ. ಬಿದರೇಗುಡಿ, ತಮ್ಮ ಮನೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ತಾನು ಓದಲು ಪಕ್ಕದ ಮನೆಗೆ ಹೋಗುತ್ತಿರುವುದಾಗಿ ತಿಳಿಸಿದ್ದಳು.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಟ್ವೀಟ್ ಅನ್ನು ಗಂಭೀರವಾಗಿ ಪರಿಗಣಿಸಿದ ಆರ್ ಡಿ ಪಿಆರ್ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್  ದಾಸ್ ಗುಪ್ತಾ ತುಮಕೂರು ಜಿಲ್ಲಾ ಪಂಚಾಯತ್ ಸಿಇಓ ಶುಭ ಕಲ್ಯಾಣ್ ಅವರ ಜೊತೆ ಮಾತನಾಡಿ ಬಾಲಕಿಗೆ ಸಹಾಯ ಮಾಡುವಂತೆ ಸೂಚಿಸಿದ್ದಾರೆ.ಮಂಗಳವಾರ ತಾಲೂಕು ಪಂಚಾಯಿತಿ ಇಒ ಮತ್ತು ಪಿಡಿಒ ದಿನೇಶ್ ಸ್ಥಳಕ್ಕಾಗಮಿಸಿ ವಾಣಿಗೆ ಸೋಲಾರ್ ಲ್ಯಾಂಪ್ ಸೆಟ್ ನೀಡಿದ್ದಾರೆ.

ನನ್ನ ಮಗಳು ತುಂಬಾ ಖುಷಿಯಾಗಿದ್ದಾಳೆ, ರಾತ್ರಿ ಹೊತ್ತು ಆಕೆ ಓದಬಹುದಾಗಿದೆ, ವಾಣಿ ತಂದೆ ಗೌತಮ್ ಹೇಳಿದ್ದಾರೆ. ಗೌತಮ್ ಹಳ್ಳಿ ಹಳ್ಳಿಗೆ ತೆರಳ ಬೆಡ್ ಶೀಟ್ ಮಾರಾಟ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com