ಗೋಹತ್ಯೆ ನಿಷೇಧ ಕಾಯ್ದೆಗೆ ವಿಧಾನ ಪರಿಷತ್ ನಲ್ಲಿ ತಡೆ: ಅಧಿವೇಷನ ಅನಿರ್ದಿಷ್ಟಾವಧಿ ಮುಂದೂಡಿಕೆ

ಸಭಾಪತಿ ಕುರಿತ ಅವಿಶ್ವಾಸ ನಿರ್ಣಯ ಮತ್ತು ಸದನ ಮುಂದುವರಿ ಸುವ ಬಗ್ಗೆ ಉಂಟಾದ ಗದ್ದಲದಿಂದಾಗಿ ಸದನವನ್ನು ಅನಿರ್ಧಿ ಷ್ಟಾ ವಧಿವರೆಗೆ ಮುಂದೂಡಿ ಹಿನ್ನೆಲೆ ಯಲ್ಲಿ,ಈ ಬಾರಿಯ ಅಧಿವೇಶನದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯ ಕಕ್ಕೆ ವಿಧಾನ ಪರಿಷತ್‌ನಲ್ಲಿ ಬ್ರೇಕ್ ಹಾಕಿದೆ.ಆಮೂಲಕ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ವಿಧೇಯಕಕ್ಕೆ ಹಿನ್ನಡೆಯುಂಟಾಗಿದೆ.
ಗೋಹತ್ಯೆ ನಿಷೇಧ ಕಾಯ್ದೆಗೆ ವಿಧಾನ ಪರಿಷತ್ ನಲ್ಲಿ ತಡೆ: ಅಧಿವೇಷನ ಅನಿರ್ದಿಷ್ಟಾವಧಿ ಮುಂದೂಡಿಕೆ

ಬೆಂಗಳೂರು: ಸಭಾಪತಿ ಕುರಿತ ಅವಿಶ್ವಾಸ ನಿರ್ಣಯ ಮತ್ತು ಸದನ ಮುಂದುವರಿ ಸುವ ಬಗ್ಗೆ ಉಂಟಾದ ಗದ್ದಲದಿಂದಾಗಿ ಸದನವನ್ನು ಅನಿರ್ಧಿ ಷ್ಟಾ ವಧಿವರೆಗೆ ಮುಂದೂಡಿ ಹಿನ್ನೆಲೆ ಯಲ್ಲಿ,ಈ ಬಾರಿಯ ಅಧಿವೇಶನದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯ ಕಕ್ಕೆ ವಿಧಾನ ಪರಿಷತ್‌ನಲ್ಲಿ ಬ್ರೇಕ್ ಹಾಕಿದೆ.ಆಮೂಲಕ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ವಿಧೇಯಕಕ್ಕೆ ಹಿನ್ನಡೆಯುಂಟಾಗಿದೆ.

ವಿಧಾನಪರಿಷತ್‌ನಲ್ಲಿ ಗುರುವಾರ ಸಭಾಪತಿಗಳ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯ ಕುರಿತು ಚರ್ಚೆಗೆ ತರುವಂತೆ ಬಿಜೆಪಿಯ ಆಯನೂರು ಮಂಜುನಾಥ್ ಪ್ರಸ್ತಾಪಿಸಿದರು.ಅದರ ನಡುವೆಯೇ, ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸಂಬಂಧಪಟ್ಟ ಸಚಿವರು ಸಭೆಗೆ ಹಾಜರಾಗದ ಹಿನ್ನಲೆಯಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವನ್ನು ಶುಕ್ರವಾರ ಸದನದಲ್ಲಿ ಮಂಡಿಸುವುದಾಗಿ ತಿಳಿಸಿದರು.ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವು ಅಜೆಂಡಾದಲ್ಲಿದ್ದು,ವಿಧೇಯಕವನ್ನು ಇಂದೇ ಮಂಡಿಸುವಂತೆ ಆಗ್ರಹಿಸಿದರು.ಶುಕ್ರವಾರದಿಂದ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಕೆಲಸ ಮಾಡಬೇಕಿದ್ದು,ಸದನ ಇಂದೇ ಅಂತ್ಯಗೊಳಿಸುವಂತೆಯೂ ಸಭಾಪತಿಯವರನ್ನು ಒತ್ತಾಯಿಸಿದರು. ಇದರಿಂದಾಗಿ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ; ಶೇ.90ಕ್ಕೂ ಹೆಚ್ಚು ಕಾರ್ಯಕಲಾಪ ಪೂರ್ಣ : ಸ್ಪೀಕರ್

ನಾಲ್ಕು ದಿನ ನಡೆದ ಚಳಿಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.ಡಿ.7 ರಿಂದ ಪ್ರಾರಂಭವಾದ ಚಳಿಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಸ್ಪೀಕರ್ ಕಾಗೇರಿ‌ ಕಲಾಪದ ಸಂಕ್ಷಿಪ್ತ ವರದಿ ನೀಡಿದರು.ನಾಲ್ಕು ದಿನಗಳ ವಿಧಾನಸಭೆ ಅಧಿವೇಶನದಲ್ಲಿ ಒಟ್ಟು 20 ಗಂಟೆಗಳ ಕಾಲ ಕಾರ್ಯಕಲಾಪ ನಡೆಯಿತು. ಈ ಅವಧಿಯಲ್ಲಿ ಸದನವೂ ಶೇ. 90ಕಿಂತ ಹೆಚ್ಚಿನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿದೆ‌ ಎಂದು ಸ್ಪೀಕರ್ ತಿಳಿಸಿದರು.

ಕರ್ನಾಟಕ ವಿಧಾನಮಂಡಲ, ವಿಧಾನಸಭೆಯ ಸಮಿತಿಗಳ ಹಾಗೂ ಜಂಟಿ ಪರಿಶೀಲನಾ ಸಮಿತಿಯ ವರದಿಯು ಸೇರಿದಂತೆ ಒಟ್ಟು 14 ವರದಿಗಳು, 09 ಅಧಿಸೂಚನೆಗಳು,04 ಅಧ್ಯಾದೇಶ ಗಳು,46 ವಾರ್ಷಿಕ ವರದಿಗಳು, 18 ಲೆಕ್ಕ ಪರಿಶೋಧನಾ ವರದಿ, 02 ಅನುಪಾಲನಾ ವರದಿ ಹಾಗೂ 02 ತಪಾಸಣಾ ವರದಿಗಳನ್ನು ಮಂಡಿಸಲಾಗಿದೆ.

ಭೂ ಸೂಧಾರಣಾ ತಿದ್ದುಪಡಿ ಮಸೂದೆ ಹಾಗೂ ಗೋ ಹತ್ಯೆ ನಿಷೇಧ ವಿಧೇಯಕ ಸೇರಿದಂತೆ ಒಟ್ಟು 8 ವಿಧೇಯಕಗಳ ಅಂಗೀಕಾರ ಸೇಇ ಮಹತ್ವದ ವಿಧೇಯಕ ಮಂಡನೆಯಾಗಿದೆ. ಪ್ರತಿಪಕ್ಷಗಳ  60 ಪ್ರಶ್ನೆಗೆ ಸರ್ಕಾರ ಉತ್ತರ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com