ಆಯುಷ್ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಅವಕಾಶ: ಸಮೀಕ್ಷೆಯಲ್ಲಿ ಶೇ.47ರಷ್ಟು ಮಂದಿ ಒಲವು 

ಆಯುಷ್ ಇಲಾಖೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಬಹುದು ಎಂದು ಇತ್ತೀಚೆಗೆ ನಡೆಸಲಾದ ಸಮೀಕ್ಷೆಯೊಂದರಲ್ಲಿ ಶೇಕಡಾ 47ರಷ್ಟು ಮಂದಿ ಒಲವು ತೋರಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆಯುಷ್ ಇಲಾಖೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಬಹುದು ಎಂದು ಇತ್ತೀಚೆಗೆ ನಡೆಸಲಾದ ಸಮೀಕ್ಷೆಯೊಂದರಲ್ಲಿ ಶೇಕಡಾ 47ರಷ್ಟು ಮಂದಿ ಒಲವು ತೋರಿಸಿದ್ದಾರೆ.

ಗ್ರಾಮಾಂತರ ಮತ್ತು ಮೂರನೇ ದರ್ಜೆಯ ನಗರಗಳಲ್ಲಿ ಅಲೋಪತಿ ವೈದ್ಯರ ಕೊರತೆಯಿಂದಾಗಿ ಜನರು ಆಯುರ್ವೋದ ವೈದ್ಯರ ಬಗ್ಗೆ ಒಲವು ತೋರಿಸುತ್ತಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಸಮೀಕ್ಷೆಯಲ್ಲಿ 11 ಸಾವಿರದ 261 ಮಂದಿ ಭಾಗಿಯಾಗಿದ್ದು ಶೇಕಡಾ 47ರಷ್ಟು ಮಂದಿ ಸರ್ಕಾರದ ಅಧಿಸೂಚನೆಯನ್ನು ಬೆಂಬಲಿಸಿದ್ದಾರೆ ಎಂದು ಲೋಕಲ್ ಸರ್ಕಲ್ಸ್ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.

ದೇಶದ 303 ಜಿಲ್ಲೆಗಳಲ್ಲಿ ಈ ಅಧ್ಯಯನ ನಡೆಸಲಾಗಿದ್ದು ಅದರಲ್ಲಿ ಭಾಗವಹಿಸಿದವರು, ಆಯುಷ್ ವೈದ್ಯರು ಐಸಿಯು ಮತ್ತು ಜನರಲ್ ವಾರ್ಡ್ ಗಳ ರೋಗಿಗಳನ್ನು ಹಲವು ಆಸ್ಪತ್ರೆಗಳಲ್ಲಿ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಾರೆ. ಅದರಲ್ಲಾ ಸಣ್ಣ ಪಟ್ಟಣಗಳು ಮತ್ತು ಗ್ರಾಮಾಂತರ ಪ್ರದೇಶಗಳ ಜನರಿಗೆ ಉಪಯೋಗವಾಗುತ್ತದೆ, ಅವರಲ್ಲಿ ಕೂಡ ಕೌಶಲ್ಯ, ಅನುಭವ ಇದೆ ಎಂದು ಹೇಳಿದ್ದಾರೆ. ಈ ಆಯುರ್ವೇದ ವೈದ್ಯರು ಆಂಟಿಬಯೊಟಿಕ್ಸ್ ಮತ್ತು ಅನಸ್ತೇಷಿಯಾ ಬಳಸಬಹುದೇ, ತಾವು ಒಪ್ಪುತ್ತೀರಾ ಎಂದು ಕೇಳಲಾಗಿತ್ತು.

ಅದಕ್ಕೆ ಶೇಕಡಾ 35ರಷ್ಟು ನಾಗರಿಕರು ಮೊದಲ ಹಂತದಲ್ಲಿ ಆಯುಷ್ ವೈದ್ಯರನ್ನು ಸರ್ಜರಿ ಮಾಡಲು ಬಿಡಬಾರದು ಎಂದು ಹೇಳಿದರೆ ಶೇಕಡಾ 27ರಷ್ಟು ಮಂದಿ ಆಯುಷ್ ವೈದ್ಯರು ಏನು ಬೇಕಾದರೂ ಬಳಸಿ ಚಿಕಿತ್ಸೆ ನೀಡಲಿ ಎಂದಿದ್ದಾರೆ. ಶೇಕಡಾ 20 ಮಂದಿ ಆಯುಷ್ ಆಧಾರಿತ ಚಿಕಿತ್ಸೆಗೆ ಮತ್ತು ಶೇಕಡಾ 13ರಷ್ಟು ಮಂದಿ ಅಲೋಪತಿ ಆಧಾರಿತ ಚಿಕಿತ್ಸೆಗೆ ಒಲವು ತೋರಿಸಿದ್ದಾರೆ. 

ಗ್ರಾಮೀಣ ಪ್ರದೇಶಗಳಲ್ಲಿ ತರಬೇತಿ ಪಡೆದ ಸರ್ಕಾರಿ ವೈದ್ಯರ ಕೊರತೆ ನಿರಂತರ ಸವಾಲು ಎಂದು ಬೆಂಗಳೂರಿನ ಕೆಲವು ವೈದ್ಯರು ಹೇಳುತ್ತಾರೆ. "ಶಸ್ತ್ರಚಿಕಿತ್ಸಕರು ಸೇರಿದಂತೆ ತಜ್ಞ ವೈದ್ಯರ ತೀವ್ರ ಕೊರತೆಯಿದೆ, ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶೇಕಡಾ 81.8ರಷ್ಟು ಹುದ್ದೆಗಳು ಖಾಲಿ ಇವೆ ಎಂದು ಹಿರಿಯ ವೈದ್ಯರೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಅದೇ ಸಮಯದಲ್ಲಿ, ತರಬೇತಿ ಪಡೆದ ಆಯುರ್ವೇದ ತಜ್ಞರು ಈ ಅಂತರವನ್ನು ತುಂಬಬಹುದೆಂದು ಭಾವಿಸಿ ಕೆಲಸ ಮಾಡದಿರಬಹುದು. ಸಾಂಪ್ರದಾಯಿಕ ಮತ್ತು ನಂಬಿಕೆ ಗುಣಪಡಿಸುವವರನ್ನು ಹೊರತುಪಡಿಸಿ - ಆರೋಗ್ಯ ವರ್ಗದ ಪ್ರತಿಯೊಂದು ವರ್ಗದವರು ನಗರ ಪ್ರದೇಶಗಳಲ್ಲಿ ಅಭ್ಯಾಸ ಮಾಡಲು ಬಯಸುತ್ತಾರೆ, ಅಲ್ಲಿ ಭಾರತದ ಜನಸಂಖ್ಯೆಯ ಕೇವಲ 35% ಮಾತ್ರ ವಾಸಿಸುತ್ತಿದ್ದಾರೆ ಎಂದು 2016 ರ WHO ವರದಿಯು ಹೇಳುತ್ತದೆ. ಆದ್ದರಿಂದ ಆಯುರ್ವೇದ ವೈದ್ಯರು ಮತ್ತು ಐಎಂಎ ವೈದ್ಯರು ಒಮ್ಮತವನ್ನು ತಲುಪಿದರೂ, ಭಾರತದ ಶೇಕಡಾ 65ರಷ್ಟು ನಿವಾಸಿಗಳು ತರಬೇತಿ ಪಡೆದ ವೈದ್ಯರನ್ನು ಪ್ರವೇಶಿಸಲು ಸಾಧ್ಯವಾಗದ ಸಮಸ್ಯೆ ಇನ್ನೂ ಅಸ್ತಿತ್ವದಲ್ಲಿದೆ. ಎಂದು ವೈದ್ಯರು ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com