ಐಟಿ ಉದ್ಯೋಗಿಗಳು ಸದ್ಯಕ್ಕೆ ಆಫೀಸ್ ಗೆ ಹೋಗುವ ಅಗತ್ಯವಿಲ್ಲ, ಮನೆಯಿಂದಲೇ ಕೆಲಸ ಆಯ್ಕೆ: ರಾಜ್ಯ ಸರ್ಕಾರ 

ಕೋವಿಡ್-19 ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ ಐಟಿ ಕಂಪೆನಿಗಳು ಕಚೇರಿಗಳನ್ನು ತೆರೆಯಬೇಕೆಂದು ಹೇಳುವುದಿಲ್ಲ, ಮನೆಯಿಂದಲೇ ಕೆಲಸ ಮಾಡುವ ಈಗಿನ ವ್ಯವಸ್ಥೆ ಇನ್ನು ಕೆಲ ತಿಂಗಳುಗಳವರೆಗೆ ಮುಂದುವರಿಯಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಐಟಿ ಬಿಟಿ ಖಾತೆ ಉಸ್ತುವಾರಿ ಹೊತ್ತಿರುವ ಡಾ ಸಿ ಎನ್ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಡಾ ಸಿ ಎನ್ ಅಶ್ವಥ್ ನಾರಾಯಣ್
ಡಾ ಸಿ ಎನ್ ಅಶ್ವಥ್ ನಾರಾಯಣ್

ಬೆಂಗಳೂರು: ಕೋವಿಡ್-19 ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ ಐಟಿ ಕಂಪೆನಿಗಳು ಕಚೇರಿಗಳನ್ನು ತೆರೆಯಬೇಕೆಂದು ಹೇಳುವುದಿಲ್ಲ, ಮನೆಯಿಂದಲೇ ಕೆಲಸ ಮಾಡುವ ಈಗಿನ ವ್ಯವಸ್ಥೆ ಇನ್ನು ಕೆಲ ತಿಂಗಳುಗಳವರೆಗೆ ಮುಂದುವರಿಯಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಐಟಿ ಬಿಟಿ ಖಾತೆ ಉಸ್ತುವಾರಿ ಹೊತ್ತಿರುವ ಡಾ ಸಿ ಎನ್ ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಕಚೇರಿಗಳನ್ನು ತೆರೆಯಿರಿ ಎಂದು ಸದ್ಯದ ಪರಿಸ್ಥಿತಿಯಲ್ಲಿ ಐಟಿ ಕಂಪೆನಿಗಳಿಗೆ ಕಡ್ಡಾಯ ಮಾಡಲು ಸಾಧ್ಯವಿಲ್ಲ, ಅದರ ಬದಲು ಉದ್ಯೋಗಿಗಳು ತಾವಿರುವಲ್ಲಿಂದಲೇ ಅಥವಾ ತಮ್ಮ ತಮ್ಮ ಮನೆಗಳಿಂದ ಕೆಲಸ ಮಾಡುವ ಸೌಲಭ್ಯವನ್ನು ಇನ್ನು ಕೆಲ ತಿಂಗಳುಗಳ ಮಟ್ಟಿಗೆ ಮುಂದೂಡಲಾಗುವುದು ಎಂದರು.

ನನ್ನೆ ವಿಧಾನಸಭೆಯಲ್ಲಿ ಹೊಸಕೋಟೆಯ ಸ್ವತಂತ್ರ ಶಾಸಕ ಶರತ್ ಬಚ್ಚೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದರು. 
ಈ ಕೊರೋನಾ ಸಾಂಕ್ರಾಮಿಕ ರೋಗ ಕಡಿಮೆಯಾದ ನಂತರ ಪರಿಸ್ಥಿತಿ ನೋಡಿಕೊಂಡು ಐಟಿ-ಬಿಟಿ ಕಂಪೆನಿಗಳೇ ಕಚೇರಿಗಳನ್ನು ತೆರೆಯಲಿವೆ. ಸದ್ಯದ ಪರಿಸ್ಥಿತಿಯಲ್ಲಿ ಇನ್ನೂ ಕೂಡ ಉದ್ಯೋಗಿಗಳು ಕಚೇರಿಗೆ ಹೋಗಿ ಕೆಲಸ ಮಾಡಬಹುದಾದ ವಾತಾವರಣವಿಲ್ಲ ಎಂದರು.

ಇನ್ನೂ ಬಹುತೇಕ ಐಟಿ ಕಂಪೆನಿಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದು ಇದರಿಂದ ಕಾರ್ಯವೈಖರಿ ಮೇಲೆ, ಕೆಲಸದ ಉತ್ಪನ್ನದ ಮೇಲೆ ಪರಿಣಾಮ ಬೀರುತ್ತಿದೆ, ಹೀಗಾಗಿ ಐಟಿ-ಬಿಟಿ ಕಂಪೆನಿಗಳನ್ನು ಆರಂಭಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಶರತ್ ಬಚ್ಚೇಗೌಡ ಒತ್ತಾಯಿಸಿದರು. 

ಐಟಿ ಕಂಪೆನಿಗಳು ತೆರೆಯದಿರುವುದರಿಂದ ಉದ್ಯೋಗಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಕ್ಯಾಬ್ ಸಾರಿಗೆಗಳು, ಕ್ಯಾಂಟೀನ್ ಗಳ ಮೂಲಕ ಜೀವನ ನಿರ್ವಹಣೆಗೆ ನಂಬಿಕೊಂಡಿದ್ದವರ ಮೇಲೆ ಪರಿಣಾಮ ಬೀರಿದೆ ಎಂದು ಉಡುಪಿ ಶಾಸಕ ಕೆ ರಘುಪತಿ ಭಟ್ ಕೂಡ ಹೇಳಿದರು. 

ಅದಕ್ಕೆ ಉತ್ತರಿಸಿದ ಅಶ್ವಥ್ ನಾರಾಯಣ್, ಒಂದು ಸಲ ಕಚೇರಿ ತೆರೆದರೆ ಇತರ ಸೇವೆಗಳು ಸಹ ಮೊದಲಿನ ಸ್ಥಿತಿಗೆ ಬರುತ್ತವೆ, ಆದರೆ ಇನ್ನೂ ಕೊರೋನಾ ಸೋಂಕು ಸಂಪೂರ್ಣವಾಗಿ ಇಳಿಮುಖವಾಗದಿರುವುದರಿಂದ ಮನೆಯಿಂದಲೇ ಕೆಲಸ ಮಾಡುವುದು ಸುರಕ್ಷಿತ ಎಂದರು. 

ಕೋವಿಡ್-19 ಸೋಂಕು ಒಕ್ಕರಿಸಿದ ಮೇಲೆ ಕಳೆದ ಮಾರ್ಚ್ ತಿಂಗಳಿನಿಂದ ಬಹುತೇಕ ಐಟಿ ಕಂಪೆನಿಗಳು ತಮ್ಮ ಕಚೇರಿಗಳನ್ನು ಮುಚ್ಚಿದ್ದು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನು ನೀಡುತ್ತಿವೆ. 

ಕೇಂದ್ರ ಸರ್ಕಾರ ಡಿಸೆಂಬರ್ 31ರವರೆಗೆ ತನ್ನ ಮಾರ್ಗಸೂಚಿಯಲ್ಲಿ ಐಟಿ ಮತ್ತು ಬಿಪಿಒ ಕಂಪೆನಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನು ಒದಗಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com