ಹೃದಯ 'ಸ್ಪರ್ಶಿ' ಪರಿಸ್ಥಿತಿ: ಕಣ್ಣಿನ ದೃಷ್ಟಿ ಸಮಸ್ಯೆ ಇರುವವರಿಗೆ ಕೋವಿಡ್-19 ನಿಂದಾದ ಅನನುಕೂಲಗಳು

ಮನುಕುಲ ಪರಸ್ಪರ ಸ್ಪರ್ಶಿಸುವುದಕ್ಕೂ ಹಿಂದೆ ಮುಂದೆ ಯೋಚಿಸುವಂತಹ ಪರಿಸ್ಥಿತಿ ತಂದೊಡ್ಡಿರುವ ಕೋವಿಡ್-19 ನಿಂದಾಗಿ ಜೀವನ ಶೈಲಿ ಬದಲಾಗಿದೆ. ಇದು ಕಣ್ಣಿನ ಸಮಸ್ಯೆ ಎದುರಿಸುತ್ತಿರುವವರಿಗೆ ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. 
ಕೋವಿಡ್-19 ಪರೀಕ್ಷೆ (ಸಂಗ್ರಹ ಚಿತ್ರ)
ಕೋವಿಡ್-19 ಪರೀಕ್ಷೆ (ಸಂಗ್ರಹ ಚಿತ್ರ)

ಬೆಂಗಳೂರು: ಮನುಕುಲ ಪರಸ್ಪರ ಸ್ಪರ್ಶಿಸುವುದಕ್ಕೂ ಹಿಂದೆ ಮುಂದೆ ಯೋಚಿಸುವಂತಹ ಪರಿಸ್ಥಿತಿ ತಂದೊಡ್ಡಿರುವ ಕೋವಿಡ್-19 ನಿಂದಾಗಿ ಜೀವನ ಶೈಲಿ ಬದಲಾಗಿದೆ. ಇದು ಕಣ್ಣಿನ ಸಮಸ್ಯೆ ಎದುರಿಸುತ್ತಿರುವವರಿಗೆ ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. 

ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಿರುವವರುಗೆ 'ಸ್ಪರ್ಶ ಜ್ಞಾನ'ವೇ ಪ್ರತಿಯೊಂದಕ್ಕೂ ಆಧಾರ. ಈಗ ಕೋವಿಡ್-19 ಎದುರಾದಾಗಿನಿಂದಲೂ ಸಾಮಾಜಿಕ ಅಂತರದ ಪರಿಕಲ್ಪನೆ ಈ ವಿಶೇಷ ಚೇತನರಿಗೆ ಆಧಾರವಾಗಿದ್ದನ್ನೇ ದೂರಗೊಳಿಸಿದೆ. 

ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿರುವ ಹಲವು ಮಂದಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ತಮ್ಮ ಸಂಕಷ್ಟ ಪರಿಸ್ಥಿತಿಯನ್ನು ಹಂಚಿಕೊಂಡಿದ್ದಾರೆ. ದರ್ಶನ್ ಕೆ.ಬಿ. ಮೈಸೂರಿನ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನ ಉದ್ಯೋಗಿ. ತಮ್ಮಂತೆಯೇ ಸಮಸ್ಯೆ ಎದುರಿಸುತ್ತಿರುವ ಅನೇಕರಿಗೆ ಉದ್ಯೋಗಕ್ಕೆ ತೆರಳುವುದಕ್ಕೆ ಆಧಾರವಾಗಿರುವುದು ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಈಗಂತೂ ಸಾಮಾಜಿಕ ಅಂತರವನ್ನು ಪಾಲಿಸಲಾಗುತ್ತಿದ್ದು, ಬಸ್ ಹತ್ತುವುದು, ರಸ್ತೆ ದಾಟುವುದು ತಮ್ಮ ರೀತಿಯ ಅದೆಷ್ಟೋ ಮಂದಿಗೆ ಹಿಂದೆಂದಿಗಿಂತಲೂ ಸವಾಲಿನ ಸಂಗತಿಯಾಗಿದೆ ಎಂದು ಹೇಳುತ್ತಾರೆ. 

ಕಚೇರಿಗೆ ಹೋದಾಗ ಡೆಸ್ಕ್ ಬಳಿ ತೆರಳುವುದಕ್ಕೆ ಸಹಾಯಕರು ಬೇಕಾಗುತ್ತಾರೆ, ಅಷ್ಟೇ ಅಲ್ಲದೇ ಡೆಸ್ಕ್ ಸ್ವಚ್ಛವಾಗಿದೆಯೇ ಇಲ್ಲವೇ ಎಂಬುದನ್ನು ಅರಿಯುವುದಕ್ಕೂ ಸ್ಪರ್ಶಿಸುವುದು ಅತ್ಯಗತ್ಯ ಎನ್ನುತ್ತಾರೆ ದರ್ಶನ್.

ಒಂದು ವೇಳೆ ದೃಷ್ಟಿ ದೋಷ ಎದುರಿಸುತ್ತಿರುವವರ ಕೋವಿಡ್-19 ಸೋಂಕು ತಗುಲಿಸಿಕೊಂಡರೆ ಮನೆಯಲ್ಲಿ ಐಸೊಲೇಷನ್ ಗೆ ಒಳಪಡಬೇಕಾದರೂ ಮತ್ತೊಬ್ಬರ ಸಹಾಯ ಅಗತ್ಯವಾಗಿರುತ್ತದೆ. ತಮಗೆ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ದೊರೆತಿದ್ದರೂ ಎಲ್ಲಾ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳೂ ಈ ರೀತಿಯ ಸೌಲಭ್ಯ ನೀಡಿಲ್ಲ ಎನ್ನುತ್ತಾರೆ ದರ್ಶನ್.

ಇತ್ತೀಚೆಗಷ್ಟೇ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡಿದಿರುವ ಕುಮಾರ್ ನಾಯಕ್ ಸಹ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆನ್ ತರಗತಿಗಳನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳಲಾಗುತ್ತಿದೆಯಾದರೂ ದೃಷ್ಟಿ ದೋಷ ಎದುರಿಸುತ್ತಿರುವವರಿಗೆ ಎಲ್ಲಾ ಕಾಲೇಜುಗಳಲ್ಲಿ ಅಗತ್ಯ ಸೌಲಭ್ಯವಿರುವುದಿಲ್ಲ, ಅದು ಕಾರಣ ಕಾಲೇಜಿಗೇ ಹೋಗಿ ತರಗತಿಗಳಿಗೆ ಹಾಜರಾಗಬೇಕಾಗುತ್ತದೆ. ಇದರಿಂದ ಕೋವಿಡ್-19 ಸೋಂಕಿಗೆ ಗುರಿಯಾಗುವ ಅಪಾಯ ಹೆಚ್ಚು ಎಂದು ಹೇಳಿದ್ದಾರೆ.

ಇನ್ನು ಆನ್ ಲೈನ್ ತರಗತಿಗಳಿಗೆ ಸಹಕಾರಿಯಾಗುವಂತೆ ತಯಾರಾಗಿರುವ ವಿಕಲ ಚೇತನ ಸ್ನೇಹಿ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ಫೋನ್ ಒಂದು ವರ್ಷದ ಹಿಂದಷ್ಟೇ ಮಾರುಕಟ್ಟೆ ಪ್ರವೇಶಿಸಿದ್ದು, ಅದನ್ನು ತರಗತಿಗಳಿಗೆ, ಅಸೈನ್ಮೆಂಟ್ ಗಳನ್ನು ನೀಡುವುದಕ್ಕಾಗಿ ಬಳಕೆ ಮಾಡುವ ತಾಂತ್ರಿಕ ತಿಳಿವಳಿಕೆ ಹೆಚ್ಚಿನವರಲ್ಲಿ ಇಲ್ಲದಾಗಿದೆ ಎನ್ನುತ್ತಾರೆ ಕುಮಾರ್ ನಾಯಕ್

ಕುಮಾರ್ ಅವರ ಸ್ನೇಹಿತ, ದಿವಾಕರ್ ಬಿ.ಆರ್ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿಯಲ್ಲಿ 2 ನೇ ವರ್ಷದ ವ್ಯಾಸಂಗ ಮಾಡುತ್ತಿದ್ದು, ತಂತ್ರಜ್ಞಾನ ಮತ್ತು ಅಪ್ಲಿಕೇಶನ್‌ಗಳು ತರಗತಿಗಳಿಗೆ ಪ್ರವೇಶ ಕಲ್ಪಿಸಿಕೊಟ್ಟಿವೆಯಾದರೂ ನೆಟ್ವರ್ಕ್ ಸಮಸ್ಯೆಗಳು ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆಗಳು ಎದುರಾಗುತ್ತದೆ ಎನ್ನುತ್ತಾರೆ. 

ವಿಶೇಷ ಚೇತನರಿಗೆ ಬದುಕು ಕಟ್ಟಿಕೊಳ್ಳುವುದಕ್ಕೆ ಸಹಾಯ ಮಾಡುತ್ತಿರುವ ಬೆಂಗಳೂರು ಮೂಲದ ಎನ್ ಜಿಒ ಎನೇಬಲ್ ಇಂಡಿಯಾದ ನಿರ್ದೇಶಕರಾಗಿರುವ ಪ್ರಾಣೇಶ್ ನಗ್ರಿ "ವಿಕಲಚೇತನರಿಗೆ ಈ ಪ್ಯಾಂಡಮಿಕ್ ಅವಧಿಯಲ್ಲಿ ಹೆಚ್ಚಿನ ಸಂಕಷ್ಟ ತಂದೊಡ್ಡಿದೆ" ಎನ್ನುತ್ತಾರೆ.

ದೃಷ್ಟಿ ದೋಷ ಹೊಂದಿರುವವರಿಗೆ ಲಾಕ್ ಡೌನ್ ಅವಧಿಯಲ್ಲಿ ಔಷಧಗಳನ್ನು ತರುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಸಾಮಾನ್ಯ ಜನತೆ ತಮಗೆ ಅಗತ್ಯವಿದ್ದದ್ದನ್ನು ಆನ್ ಲೈನ್ ಮೂಲಕ ಮಾಡಿಕೊಳ್ಳುತ್ತಿದ್ದರು, ಆದರೆ ದೃಷ್ಟಿ ಸಮಸ್ಯೆ ಹೊಂದಿರುವವರಿಗೆ ಅದೂ ಸಾಧ್ಯವಾಗುತ್ತಿರಲಿಲ್ಲ. ಆ ಅವಧಿಯಲ್ಲಿ ಆಹಾರದ ಕೊರತೆ ಎದುರಿಸುತ್ತಿದ್ದವರಿಂದಲೂ ನಮಗೆ ಕರೆ ಬಂದಿತ್ತು, ನಮ್ಮ ಎನ್ ಜಿಒ ಮೂಲಕ ಔಷಧಗಳು, ಸ್ಪ್ರೇ, ಕೈಗವುಸು ಸೇರಿದಂತೆ ಅಗತ್ಯ ಸರಕುಗಳನ್ನು ಪೂರೈಸಿದ್ದೆವು ಎನ್ನುತ್ತಾರೆ ಪ್ರಾಣೇಶ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com