ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ: ತಮಿಳುನಾಡಿನಲ್ಲಿ ಪ್ರಮುಖ ಆರೋಪಿ ಬಂಧನ

ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 
ವರ್ತೂರು ಪ್ರಕಾಶ್
ವರ್ತೂರು ಪ್ರಕಾಶ್

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 

ಕವಿರಾಜ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ಇದರಂತೆ ಇಂದು ಬೆಳಿಗ್ಗೆ ಪ್ರಕರಣದ ಕಿಂಗ್ ಪಿನ್ ಎಂದೇ ಹೇಳಲಾಗುತ್ತಿರುವ ಕವಿರಾಜ್'ನನ್ನು ತಮಿಳುನಾಡಿನಲ್ಲಿ ಬಂಧನಕ್ಕೊಳಪಡಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಕವಿರಾಜ್ ವರ್ತೂರ್ ಪ್ರಕಾಶ್ ಪರಿಚಯಸ್ಥ ಎಂದು ಹೇಳಲಾಗುತ್ತಿದೆ. ಕವಿರಾಜ್​ ಬಂಧನದ ಬಗ್ಗೆ ಕೇಂದ್ರ ವಲಯದ‌ ಐಜಿಪಿ ಸೀಮಂತ್ ಕುಮಾರ್‌ ಮಾಹಿತಿ ನೀಡಿದ್ದಾರೆ.

ನ,25ರಂದು ಸಂಜೆ 7 ಗಂಟೆ ಸುಮಾರಿಗೆ ಕೋಲಾರದ ಬೆಗ್ಲಿಹೊಸಹಳ್ಳಿ ಗ್ರಾಮದ ಬಳಿ ಇರುವ ನನ್ನ ಫಾರಂ ಹೌಸ್'ನಿಂದ ಕಾರಿನಲ್ಲಿ ನಗರಕ್ಕೆ ವಾಪಸ್ ಆಗುತ್ತಿದ್ದೆ. ಕಾರು ಚಾಲಕ ಸುನೀಲ್ ಕಾರು ಚಾಲನೆ ಮಾಡುತ್ತಿದ್ದ. ಫಾರಂಹೌಸ್'ನಿಂದ ಒಂದು ಕಿ.ಮೀ ದೂರದಲ್ಲಿ ಎರಡು ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಮ್ಮ ಕಣ್ಣಿಗೆ ಬಟ್ಟೆಕಟ್ಟಿ ಕಾರಿನಲ್ಲಿ ಅಪಹರಣ ಮಾಡಿದ್ದರು. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ರೂ.30 ಕೋಟಿ ಬೇಡಿಕೆ ಇಟ್ಟಿದ್ದರು. ಹಣ ತರಿಸಿಕೊಡಲು ನಿರಾಕರಿಸಿದಾಗ ಕೈಕಾಲುಗಳನ್ನು ಕಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. 

ಚಾಲಕ ಸುನೀಲ್'ಗೆ ಹಣ ಎಲ್ಲಿಟ್ಟಿದ್ದಾರೆಂದೆ ಹೇಳಿ ಎಂದು ಚಿತ್ರಹಿಂಸೆ ನೀಡಿದರು. ಅಪಹರಣಕಾರರ ಹಿಂಸೆ ತಾಳಲಾರದೆ ನ.26ರಂದು ನಯಾಜ್ ಎಂಬ ಹುಡುಗನಿಗೆ ಕರೆ ಮಾಡಿದ್ದೆ. ಆತನ ಕೋಲಾರದ ಕಾಫಿ ಡೇ ಶಾಪ್ ಬಳಿ ರೂ.48 ಲಕ್ಷ ಹಣವನ್ನು ಅಪಹರಣಕಾರರಿಗೆ ಕೊಟ್ಟು ಹೋಗಿದ್ದ. ಆ ಬಳಿಕವೂ ಅಪರಹಣಕಾರರು ಹೆಚ್ಚಿನ ಹಣಕ್ಕಾಗಿ ಹಿಂಸೆ ನೀಡಿ, ಕೊಲೆ ಮಾಡುವುದಾಗಿ ಬೆದರಿಕೆವೊಡ್ಡಿದ್ದರು. 

ಮಾರಕಾಸ್ತ್ರಗಳಿಂದ ಹೆಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಚಾಲಕ ಸುನೀಲ್'ನನ್ನು ಅಪಹರಣಕಾರರು ಮೃತಪಟ್ಟಿರಬಹುದು ಎಂದು ಭಾವಿಸಿದ್ದರು, ಪ್ರಜ್ಞೆ ಬಂದು ಚಾಲಕ ಸುನೀಲ್ ತಪ್ಪಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದ. ದುಷ್ಕರ್ಮಗಿಲು ಎರಡು ತಾಸು ಸುನೀಲ್'ಗಾಗಿ ಹುಡುಕಾಟ ನಡೆಸಿದ್ದರು. ಆದರೆ, ಪೊಲೀಸರಿಗೆ ದೂರು ನೀಡಬಹುದು ಎಂದು ಅಪಹರಣಕಾರರು ನ.26 ರಂದು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಹೊಸಕೋಟೆ ಬಳಿಕ ಶಿವನಾಪುರ ಗ್ರಾಮದ ಬಳಿಯಿರುವ ಖಾಲಿ ಮೈದಾನದಲ್ಲಿ ನನ್ನನ್ನು ತಳ್ಳಿದರು. ಪೊಲೀಸರಿಗೆ ದೂರು ನೀಡಿದರೆ. ನಿನ್ನ ಮತ್ತು ನಿನ್ನ ಮಕ್ಕಳನ್ನು ಮುಗಿಸುವುದಾಗಿ ಬೆದರಿಕೆ ಹಾಗಿ ನನ್ನ ಕಾರಿನ ಸಮೇತ ಪರಾರಿಯಾದರು. 

ಬಳಿಕ ನಾನು ಅಪರಿಚಿತ ಕಾರನ್ನು ಅಡ್ಡಹಾಕಿ ಕೆ.ಆರ್.ಪುರಂನಲ್ಲಿರುವ ಸತ್ಯಸಾಯಿ ಆಸ್ಪತ್ರೆವರೆಗೆ ಡ್ರಾಪ್ ಪಡೆದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇ. ಹೀಗಿರುವಾಗ ಮಂಗಳವಾರ ನನ್ನ ಕಾರು ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಗಾಯಗೊಂಡಿದ್ದ ಕಾರಣ ತಡವಾಗಿ ಬಂದು ದೂರು ನೀಡುತ್ತಿದ್ದೇನೆಂದು ವರ್ತೂರು ಪ್ರಕಾಶ್ ದೂರಿನಲ್ಲಿ ಹೇಳಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com