ರಾಜ್ಯದಲ್ಲಿ ಕೊರೋನಾ ರೋಗಿಗಳ ಸಾವಿನ ಪ್ರಮಾಣ ಶೇ.1ಕ್ಕೆ ಇಳಿಕೆ

ಕಳೆದ ಹಲವು ತಿಂಗಳುಗಳಿಂದರೂ ರಾಜ್ಯದಲ್ಲಿ ಭೀತಿ, ಅಭದ್ರತೆಗೆ ಕಾರಣವಾಗಿದ್ದ ಕೊರೋನಾ ಸೋಂಕು ಇಳಿಯುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ. ರಾಜ್ಯದಲ್ಲಿ ಇದೀಗ ಕೊರೋನಾ ಸಾವಿನ ಪ್ರಮಾಣ ಶೇ.1ಕ್ಕೆ ಇಳಿದಿದೆ. 

Published: 12th December 2020 09:52 AM  |   Last Updated: 12th December 2020 12:43 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ಕಳೆದ ಹಲವು ತಿಂಗಳುಗಳಿಂದರೂ ರಾಜ್ಯದಲ್ಲಿ ಭೀತಿ, ಅಭದ್ರತೆಗೆ ಕಾರಣವಾಗಿದ್ದ ಕೊರೋನಾ ಸೋಂಕು ಇಳಿಯುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ. ರಾಜ್ಯದಲ್ಲಿ ಇದೀಗ ಕೊರೋನಾ ಸಾವಿನ ಪ್ರಮಾಣ ಶೇ.1ಕ್ಕೆ ಇಳಿದಿದೆ. 

ಬಿಬಿಎಂಪಿ ವಾರ್ ರೂಮ್ ನೀಡಿರುವ ಅಂಕಿಅಂಶಗಳ ಪ್ರಕಾರ ಕಳೆದ ವಾರದಲ್ಲಿ ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಶೇ.1.2ಕ್ಕೆ ಇಳಿದಿದೆ. ಆದರೆ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿಯೇ ಇರುವುದು ತಿಳಿದುಬಂದಿದೆ. 

ಬೀದರ್ (12.5%), ದಕ್ಷಿಣ ಕನ್ನಡ (5.1%), ಬಳ್ಳಾರಿ (2.8%), ಧಾರವಾಡ (2.3%) ಮತ್ತು ಕೋಲಾರ (2.1%) ಇರುವುದು ವರದಿಗಳು ತಿಳಿಸಿವೆ. 

ಜಿಲ್ಲಾ ಮಟ್ಟದಲ್ಲಿ ಪರೀಕ್ಷೆ ಸಂಖ್ಯೆಯನ್ನು ಹೆಚ್ಚಳ ಮಾಡಿದರೆ, ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡುವ ಮೂಲಕ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಬೆಂಗಳೂರು ನಗರದಲ್ಲಿ ಪ್ರತೀನಿತ್ಯ 30,000 ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಇತರೆ ಜಿಲ್ಲೆಗಳಲ್ಲಿ ಕೇವಲ 4,000 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 


Stay up to date on all the latest ರಾಜ್ಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp