ಹಲಸೂರು ಕೆರೆ ಸ್ವಚ್ಛತೆಗೆ ಕೈಜೋಡಿಸಿದ ಎಂಇಜಿ, ಬಿಬಿಎಂಪಿ ಸಿಬ್ಬಂದಿ

ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ಹಾಗೂ ಬಿಬಿಎಂಪಿ ಕೆರೆ ನಿರ್ವಹಣಾ ಸಿಬ್ಬಂದಿ ಜಂಟಿಯಾಗಿ ಹಲಸೂರು ಕೆರೆ ಸ್ವಚ್ಛತಾ ಕಾರ್ಯ ಭರದಿಂದ ನಡೆಯುತ್ತಿದೆ. 
ಹಲಸೂರು ಕೆರೆ ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿಗಳು
ಹಲಸೂರು ಕೆರೆ ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿಗಳು

ಬೆಂಗಳೂರು: ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ಹಾಗೂ ಬಿಬಿಎಂಪಿ ಕೆರೆ ನಿರ್ವಹಣಾ ಸಿಬ್ಬಂದಿ ಜಂಟಿಯಾಗಿ ಹಲಸೂರು ಕೆರೆ ಸ್ವಚ್ಛತಾ ಕಾರ್ಯ ಭರದಿಂದ ನಡೆಯುತ್ತಿದೆ. 

ಒಟ್ಟು 113 ಎಕರೆ ಇರುವ ಹಲಸೂರು ಕೆರೆಯನ್ನು ಕಳೆದ ಒಂದು ವಾರದಿಂದ ಬಿಬಿಎಂಪಿ ಕೆರೆಗಳ ನಿರ್ವಹಣಾ ಸಿಬ್ಬಂದಿ ಹಾಗೂ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಸಿಬ್ಬಂದಿ ಜಂಟಿಯಾಗಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ. ಶನಿವಾರ ಬಿಬಿಎಂಪಿಯ 80 ಮಂದಿ ಸಿಬ್ಬಂದಿ ಹಾಗೂ ಎಂಇಜಿಯ 150 ಸಿಬ್ಬಂದಿ ಐದು ಬೋಟ್ ಬಳಸಿ ಕಳೆಯನ್ನು ತೆರವುಗೊಳಿಸಿದರು. 

ಶನಿವಾರ ಹಲಸೂರು ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಕೆರೆ ಸ್ವಚ್ಛತಾ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿ ಎಂಇಜಿ ತರಬೇತಿ ಸ್ಥಳವಾದ ಹಲಸೂರು ಕೆರೆ ನಗರ ಪ್ರಮುಖ ಸ್ಥಳವಾಗಿದೆ. 

ಸಾರ್ವಜನಿಕ ವಾಯು ವಿಹಾರಕ್ಕೆ ಅನುಕೂಲಕರವಾಗುವಂತೆ ಅಭಿವೃದ್ಧಿ ಮಾಡಬೇಕಿದ್ದು, ಅಭಿವೃದ್ಧಿ ಪಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com