ಭದ್ರತೆಯೊಂದಿಗೆ ಕೆಲವೆಡೆ ಕೆಎಸ್ ಆರ್ ಟಿಸಿ ಬಸ್ ಸಂಚಾರ

ಮೂರು ದಿನಗಳಿಂದ ಸಾರಿಗೆ ನೌಕರರ ಮುಷ್ಕರದ ನಡುವೆಯೂ ಇಂದು ಕೆಲವು ಮಾರ್ಗಗಳಲ್ಲಿ 210 ಬಸ್ ಗಳು ಭದ್ರತೆಯ ನಡುವೆ ಸಂಚರಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮೂರು ದಿನಗಳಿಂದ ಸಾರಿಗೆ ನೌಕರರ ಮುಷ್ಕರದ ನಡುವೆಯೂ ಇಂದು ಕೆಲವು ಮಾರ್ಗಗಳಲ್ಲಿ 210 ಬಸ್ ಗಳು ಭದ್ರತೆಯ ನಡುವೆ ಸಂಚರಿಸಿವೆ.

ಬೆಂಗಳೂರು ವಿಭಾಗದಲ್ಲಿ 23, ಮೈಸೂರು ಗ್ರಾಮಾಂತರ 10, ಮೈಸೂರು ನಗರ 1, ಕೋಲಾರ 2, ಮಂಡ್ಯ 1, ಶಿವಮೊಗ್ಗ 5, ದಾವಣಗೆರೆ 3, ಪುತ್ತೂರು 1, ಮಂಗಳೂರು ವಿಭಾಗದಲ್ಲಿ 163 ಬಸ್ ಗಳು ಸಂಚರಿಸುತ್ತಿವೆ.

ಬೆಂಗಳೂರಿನಲ್ಲಿ ಕೂಡ ಇಂದು ಕೆಲವು ಬಿಎಂಟಿಸಿ ಬಸ್ಗಳು ಸಂಚಾರ ನಡೆಸತೊಡಗಿವೆ. ಬಿಎಂಟಿಸಿ ಬಸ್ಗಳ ಚಾಲಕರು, ಕಂಡಕ್ಟರ್ ಗೆ ಮುಷ್ಕರ ನಿರತರಿಂದ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು ಬೆಳಗ್ಗೆ ಪೊಲೀಸ್ ವಾಹನಗಳ  ಭದ್ರತೆಯೊಂದಿಗೆ ಬಿಎಂಟಿಸಿ ಬಸ್ಗಳು ಸಂಚಾರ ಆರಂಭಿಸಿವೆ  ಎಂದು ಕೆಎಸ್​ಆರ್​ಟಿಸಿ ಮಾಹಿತಿ ನೀಡಿದೆ.

ಸಂಚಾರ ಆರಂಭಿಸಿದ ಬಿಎಂಟಿಸಿ
ಇಂದು ಮುಂಜಾನೆ ಬೆಂಗಳೂರಿನ ಮೆಜೆಸ್ಟಿಕ್​ನಿಂದ ಎಜಿಎಸ್ ಲೇಔಟ್ ಕಡೆಗೆ ಸಂಚರಿಸುವ 45D ಸಂಖ್ಯೆಯ ಬಸ್ ಸಂಚಾರ ಆರಂಭಿಸಿದೆ. ಪೊಲೀಸ್ ಸರ್ಪಗಾವಲಿನಲ್ಲಿ ಬಸ್ ಸಂಚಾರ ಆರಂಭಿಸಿದೆ. ಮತ್ತೊಂದು ಬಸ್​ ಎಜಿಎಸ್ ಲೇಔಟ್ ನಿಂದ ಮೆಜೆಸ್ಟಿಕ್​ಗೆ ಆಗಮಿಸಿದೆ. 7-8  ಪ್ರಯಾಣಿಕರನ್ನು ಹೊತ್ತು ಸಾಗಿದ ಬಿಎಂಟಿಸಿ ಬಸ್​ಗೆ ಸಾರಿಗೆ ಇಲಾಖೆಯಿಂದ ಎಸ್ಕಾರ್ಟ್​ ವ್ಯವಸ್ಥೆ ಕಲ್ಪಿಸಲಾಯಿತು. ಎಜಿಎಸ್​ ಲೇಔಟ್​ನ ಡಿಪೋದಿಂದ ಬಸ್ ಹೊರ ಬರುವಾಗ ಯಾರೂ ತಡೆಯಲಿಲ್ಲ. ಪೊಲೀಸರು ಸ್ವಲ್ಪ ದೂರ ಎಸ್ಕಾರ್ಟ್ ಮಾಡಿದರು. ಮಾರ್ಗ ಮಧ್ಯದಲ್ಲಿ ಯಾರೂ  ತಡೆದಿಲ್ಲ. ಜನರು ಕೂಡ ಬರುತ್ತಿದ್ದಾರೆ. ಸಾರಿಗೆ ನೌಕರರಿಗೆ ಒಳ್ಳೆಯದಾಗಲಿ ಅಂತ ಮುಷ್ಕರ ಮಾಡುತ್ತಿದ್ದಾರೆ. ಮುಷ್ಕರದ ನಡುವೆ ಡ್ಯೂಟಿ ಕೂಡ ಮುಖ್ಯ. ಜನರಿಗೆ ಅನುಕೂಲವಾಗಬೇಕು ಎಂಬ ಕಾರಣಕ್ಕೆ ಬಸ್ ಸಂಚಾರ ಆರಂಭಿಸಿದ್ದೇವೆ ಎಂದು ಬಿಎಂಟಿಸಿ ಬಸ್​ ಕಂಡಕ್ಟರ್ ಹೇಳಿದ್ದಾರೆ. 


ಬೆಳಗ್ಗೆಯಿಂದ ಸಂಚಾರ ಆರಂಭಿಸಿರುವ ಮತ್ತೊಂದು ಬಿಎಂಟಿಸಿ ಬಸ್​ಗೂ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ. ವಿಜಯನಗರದಿಂದ ಮೆಜೆಸ್ಟಿಕ್​ಗೆ ಬಂದ ಬಿಎಂಟಿಸಿ ಬಸ್ ಹಿಂದೆ ಸಾರಿಗೆ ಇಲಾಖೆಯ ಜೀಪ್​ನಿಂದ ಎಸ್ಕಾರ್ಟ್ ಆಗಮಿಸಿತು. ಬೆಂಗಳೂರಿನಲ್ಲಿ ನಿಧಾನವಾಗಿ ಬಿಎಂಟಿಸಿ ಬಸ್​  ಸಂಚಾರ ಆರಂಭವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com