ಕೋವಿಡ್-19 ಎರಡನೇ ಅಲೆಯನ್ನು ಎದುರಿಸಲು ಸರ್ಕಾರ ಸಿದ್ದವಾಗಿದೆ, ಪ್ರತಿಯೊಬ್ಬರಿಗೂ ಲಸಿಕೆ ಅಗತ್ಯವಿಲ್ಲ: ಡಾ ಕೆ ಸುಧಾಕರ್ 

ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಚಳಿ, ಶೀತ ಹವಾಮಾನ ನಿಧಾನವಾಗಿ ಕಾಲಿಡುತ್ತಿದೆ. ಕರ್ನಾಟಕದಲ್ಲಿ ಕೋವಿಡ್-19 ಎರಡನೇ ಅಲೆ ಏಳುವ ಎಲ್ಲಾ ಸಾಧ್ಯತೆಗಳಿವೆ. 
ಡಾ ಕೆ ಸುಧಾಕರ್
ಡಾ ಕೆ ಸುಧಾಕರ್

ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಚಳಿ, ಶೀತ ಹವಾಮಾನ ನಿಧಾನವಾಗಿ ಕಾಲಿಡುತ್ತಿದೆ. ಕರ್ನಾಟಕದಲ್ಲಿ ಕೋವಿಡ್-19 ಎರಡನೇ ಅಲೆ ಏಳುವ ಎಲ್ಲಾ ಸಾಧ್ಯತೆಗಳಿವೆ. 

ಈ ಸಮಯದಲ್ಲಿ ಎದುರಾಗಬಹುದಾದ ಎಲ್ಲಾ ಆರೋಗ್ಯ ಸಂಬಂಧಿ ಸವಾಲುಗಳನ್ನು ಎದುರಿಸಲು ಸರ್ಕಾರ ಸಿದ್ದವಿದೆ ಎಂದು ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ. ಇನ್ನು ಕೋವಿಡ್-19 ಲಸಿಕೆ ರಾಜ್ಯದ ಎಲ್ಲಾ ಜನತೆಗೆ ನೀಡುವ ಅಗತ್ಯವಿಲ್ಲ ಎಂದಿದ್ದಾರೆ. ಅವರ ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ: 

ಕೋವಿಡ್-19 ಎರಡನೇ ಅಲೆ ಏಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಅದು ಈಗಾಗಲೇ ಸಾಧ್ಯವಾಗಿದೆಯೇ, ಇದಕ್ಕೆ ಏನೆಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ?
-ಎರಡನೇ ಅಲೆ ಏಳುವ ಸಾಧ್ಯತೆಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯಿಂದ ಸಿದ್ಧವಾಗಿದೆ. ಆಕ್ಸಿಜನ್ ಜನರೇಟರ್ಸ್ ಮತ್ತು ಇತರ ಉಪಕರಣಗಳನ್ನು ಸಂಗ್ರಹಿಸಲು 10 ಜಿಲ್ಲೆಗಳಲ್ಲಿ ಮತ್ತು 30 ತಾಲ್ಲೂಕು ಆಸ್ಪತ್ರೆಗಳಲ್ಲಿ 37.72 ಕೋಟಿ ರೂಪಾಯಿ ನೀಡಲಾಗಿದೆ. ಕಾರ್ಯಪಡೆ ಸಮಿತಿಯೊಳಗೆ ವಿಸ್ತೃತ ಚರ್ಚೆಯನ್ನು ನಡೆಸಲಾಗಿದ್ದು ಮುಂದಿನ ಮೂರು ತಿಂಗಳಲ್ಲಿ ಕೊರೋನಾ ಅಲೆಯೆದ್ದರೆ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ರ್ಯಾಪಿಡ್ ಆಂಟಿಜೆನ್ ಕಿಟ್ಸ್ ಗಳ ಖರೀದಿಗೆ 11.32 ಕೋಟಿ ರೂಪಾಯಿ ಇರಿಸಲಾಗಿದೆ ಹಾಗೂ ಮುಂದಿನ 90 ದಿನಗಳಲ್ಲಿ ಔಷಧಿಗಳ ಖರೀದಿಗೆ 22.50 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ ಎಂದರು.

ಲಸಿಕೆ ಬಗ್ಗೆ ಏನು ನಿರೀಕ್ಷಿಸಬಹುದು, ಅದರ ಪೂರೈಕೆಗೆ ಸಮಯ ನಿಗದಿ ಇದೆಯೇ ಮತ್ತು ಮುಂಚೂಣಿ ಕೊರೋನಾ ವಾರಿಯರ್ಸ್ ಗೆ ಆರಂಭದಲ್ಲಿ ಸಿಗಲಿದೆಯೇ, ನಂತರ ರಾಜ್ಯದ ಪ್ರತಿಯೊಬ್ಬರಿಗೂ ಸಿಗಲಿದೆಯೇ?
-ಹಲವು ಲಸಿಕೆಗಳು ಅಭಿವೃದ್ಧಿ ಹಂತಗಳಲ್ಲಿವೆ. ಜಾಗತಿಕ ಮಟ್ಟದಲ್ಲಿ ಸುಮಾರು 50 ಲಸಿಕಾ ಪ್ರಯೋಗಗಳು ವಿವಿಧ ಕ್ಲಿನಿಕಲ್ ಶೋಧನಾ ಹಂತಗಳಲ್ಲಿದ್ದು 25 ಲಸಿಕೆಗಳು ಸುಧಾರಿತ ಕ್ಲಿನಿಕಲ್ ಪ್ರಯೋಗ ಹಂತಗಳಲ್ಲಿವೆ. ಭಾರತದಲ್ಲಿ 5 ಇವೆ. ಯಾರಿಗೆ ಅನುಮತಿ ಸಿಗುತ್ತದೆಯೋ ಗೊತ್ತಿಲ್ಲ.

ವಿಶ್ವ ಆರೋಗ್ಯ ಸಂಘಟನೆ ಮಾರ್ಗಸೂಚಿ ಪ್ರಕಾರ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿರುವ ಮುಂಚೂಣಿ ಕಾರ್ಯಕರ್ತರು, 65 ವರ್ಷಕ್ಕಿಂತ ಮೇಲ್ಪಟ್ಟವರು, 65 ವರ್ಷಕ್ಕಿಂತ ಕೆಳಗಿನವರು ಆರೋಗ್ಯ ಸಮಸ್ಯೆ ಹೊಂದಿರುವವರು ಅಂತವರು ಕೊರೋನಾ ಸೋಂಕಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಲಸಿಕೆಯ ಮೊದಲ ಹಂತದಲ್ಲಿ, ಕೇಂದ್ರ ಸರ್ಕಾರ 30 ಕೋಟಿ ಜನರಿಗೆ ಲಸಿಕೆ ನೀಡಲು ನಿರ್ಧರಿಸಿದೆ. ಅವರಲ್ಲಿ ಆರೋಗ್ಯ ವಲಯ ಕಾರ್ಯಕರ್ತರು, 2 ಕೋಟಿ ಫ್ರಂಟ್ ಲೈನ್ ಕಾರ್ಯಕರ್ತರು, 26 ಕೋಟಿ ಮಂದಿ 50 ವರ್ಷಕ್ಕಿಂತ ಮೇಲ್ಪಟ್ಟವರು, 1 ಕೋಟಿ ಮಂದಿ 50 ವರ್ಷಕ್ಕಿಂತ ಕೆಳಗಿನವರು ತೀವ್ರ ಆರೋಗ್ಯ ಸಮಸ್ಯೆ ಹೊಂದಿರುವವರು ಸೇರುತ್ತಾರೆ. ಪ್ರತಿಯೊಬ್ಬರಿಗೂ ಲಸಿಕೆ ಬೇಕಾಗಲಿಕ್ಕಿಲ್ಲ. ಲಸಿಕೆ ಎಷ್ಟು ಸಮಯಗಳವರೆಗೆ ದೇಹಕ್ಕೆ ರಕ್ಷಣೆ ಕೊಡುತ್ತದೆ ಎಂಬುದು ಕೂಡ ನಿಶ್ಚಯವಾಗಿಲ್ಲ. ಲಸಿಕೆ ತೆಗೆದುಕೊಂಡ ಕೆಲ ಸಮಯಗಳ ನಂತರ ಬೂಸ್ಟರ್ ಬೇಕಾಗಬಹುದು.

ಲಸಿಕೆ ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ್ದು ಎಂದು ಹೇಗೆ ಹೇಳುತ್ತೀರಿ?
-ಅಭಿವೃದ್ಧಿ ಹಂತದಲ್ಲಿರುವ ಲಸಿಕೆಗಳು ನಿಯಂತ್ರಣ ಪ್ರಾಧಿಕಾರಗಳ ಕ್ಲಿನಿಕಲ್ ಪ್ರಯೋಗಗಳಿಗೆ ಒಳಗಾಗಬೇಕಾಗುತ್ತದೆ. ನಾಗರಿಕರ ಸುರಕ್ಷತೆ ಸರ್ಕಾರಕ್ಕೆ ಬಹಳ ಮುಖ್ಯ. ನಿಯಂತ್ರಕ ಅವಶ್ಯಕತೆಗಳನ್ನು ಪೂರೈಸುವಲ್ಲಿ ಯಾವುದೇ ರಾಜಿ ಇರುವುದಿಲ್ಲ.

ಲಸಿಕೆಗಳಿಗೆ ಯಾರು ಹಣ ನೀಡುವುದು, ಕೇಂದ್ರ ಸರ್ಕಾರವೇ, ರಾಜ್ಯ ಸರ್ಕಾರಗಳೇ?
-ಯಾವ ಲಸಿಕೆಗೆ ಅನುಮತಿ ಸಿಗುತ್ತದೆ, ಅದರ ವೆಚ್ಚವೇನು ಎಂದು ಗೊತ್ತಾಗಿಲ್ಲ, ಹೀಗಾಗಿ ಯಾರು ಪಾವತಿ ಮಾಡುವುದು ಎಂಬ ಪ್ರಶ್ನೆ ಬಂದಿಲ್ಲ.

ಆರ್ ಆರ್ ನಗರ, ಶಿರಾ ಉಪ ಚುನಾವಣೆಗಳಲ್ಲಿ ಪ್ರಚಾರದಲ್ಲಿ ಭಾಗಿಯಾದವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಗ್ರಾಮ ಪಂಚಾಯತ್ ಚುನಾವಣೆಗಳಿಂದ ಗ್ರಾಮಾಂತರ ಪ್ರದೇಶಗಳಲ್ಲಿನ ಜನರಿಗೆ ಕೊರೋನಾ ವ್ಯಾಪಕವಾಗಿ ಹರಡುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರಲ್ಲವೇ?
-ಗ್ರಾಮ ಪಂಚಾಯತ್ ಸಮೀಕ್ಷೆಗಳು ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಮನೆಗಳಿಗೆ ಅನೇಕ ಬಾರಿ ಭೇಟಿ ನೀಡುವ ತೀವ್ರ ಪ್ರಚಾರವನ್ನು ಒಳಗೊಂಡಿರುತ್ತವೆ. ಚಳಿಗಾಲವು ಪ್ರಾರಂಭವಾಗುತ್ತಿರುವುದರಿಂದ, ಮುಂದಿನ ಮೂರು ತಿಂಗಳುಗಳು ನಿರ್ಣಾಯಕ. ಈ ಅಂಶಗಳನ್ನು ಪರಿಗಣಿಸಿ, ತಾಂತ್ರಿಕ ಸಲಹಾ ಸಮಿತಿಯು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಲು ಶಿಫಾರಸು ಮಾಡಿತ್ತು, ಆದರೆ ರಾಜ್ಯ ಚುನಾವಣಾ ಆಯೋಗವು ಚುನಾವಣೆ ನಡೆಸಲು. ಸಮೀಕ್ಷೆಗಳು ಸೋಂಕನ್ನು ಹರಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತದೆ. ಮುನ್ನೆಚ್ಚರಿಕೆಗಳನ್ನು ಅನುಸರಿಸಿ ಮತ್ತು ಸರ್ಕಾರದೊಂದಿಗೆ ಸಹಕರಿಸಬೇಕೆಂದು ನಾನು ಎಲ್ಲಾ ಪಕ್ಷಗಳು, ಅಭ್ಯರ್ಥಿಗಳು ಮತ್ತು ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ.

ಹೊಸ ವರ್ಷ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ. ಜನದಟ್ಟಣೆಯನ್ನು ಹೇಗೆ ಎದುರಿಸುತ್ತೀರಿ?
-ಹೊಸ ವರ್ಷದ ಸಂಭ್ರಮಾಚರಣೆಯ ಸಾರ್ವಜನಿಕ ಆಚರಣೆಯನ್ನು ಬೆಂಗಳೂರಿನ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಅಥವಾ ರಾಜ್ಯದ ಬೇರೆಲ್ಲಿಯೂ ಅನುಮತಿಸಲಾಗುವುದಿಲ್ಲ. ಹೊಸ ವರ್ಷ, ಧಾರ್ಮಿಕ ಮತ್ತು ಇತರ ಕಾರ್ಯಕ್ರಮಗಳಿಗೆ ಡಿಸೆಂಬರ್ 20 ಮತ್ತು ಜನವರಿ 2 ರ ನಡುವೆ ಸರ್ಕಾರವು 200 ಕ್ಕಿಂತ ಕಡಿಮೆ ಇರುವ ಜನರನ್ನು ಮಾತ್ರ ಸೇರಿಸಬಹುದು ಎಂದು ನಿರ್ಬಂಧ ವಿಧಿಸಲಾಗಿದೆ. ಪಬ್‌ಗಳು, ಬಾರ್‌ಗಳು ಮತ್ತು ಹೋಟೆಲ್‌ಗಳು ಹೊಸ ವರ್ಷಕ್ಕೆ ತಮ್ಮ ಆಸನ ಸಾಮರ್ಥ್ಯದ ಅರ್ಧದಷ್ಟು ಮಾತ್ರ ಬಳಸಬೇಕು ಎಂಬ ನಿಯಮ ಹೊರಡಿಸಲಾಗಿದೆ.

ಹಲವರು ನಿಯಮಗಳನ್ನು ಗಾಳಿಗೆ ತೂರಿ ಮದುವೆ ಸಮಾರಂಭ ಮತ್ತು ಇತರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರಲ್ಲವೇ?
-ಹೋಟೆಲ್‌ಗಳು, ಮಾಲ್‌ಗಳು, ಚಿತ್ರಮಂದಿರಗಳು, ರೆಸ್ಟೋರೆಂಟ್‌ಗಳು ಮತ್ತು ಅಂಗಡಿಗಳಂತಹ ವ್ಯವಹಾರಗಳಿಗೆ ತಮ್ಮ ಆವರಣದಲ್ಲಿ ಕೋವಿಡ್ ಶಿಷ್ಠಾಚಾರಗಳ ಉಲ್ಲಂಘನೆಯಾದರೆ ದಂಡ ವಿಧಿಸಲಾಗುವುದು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com