ಸಾರಿಗೆ ಸಚಿವರ ಸಭೆ ಅಪೂರ್ಣ: ಮುಂದುವರಿದ ಬಿಕ್ಕಟ್ಟು

ಸಾರಿಗೆ ಸಚಿವ ಲಕ್ಷ್ಮಣ ಸವದಿ ಜೊತೆ ನೌ    ಕರರ ಸಂಘಟನೆ ನಾಯಕರು ನಡೆಸಿದ ಮಾತುಕತೆ ಅಪೂರ್ಣಗೊಂಡಿದ್ದು, ನೌಕರರ ಮುಷ್ಕರ ಮುಂದುವರಿದಿದೆ.
ಸಾರಿಗೆ ಸಚಿವ ಲಕ್ಷ್ಮಣ ಸವದಿ
ಸಾರಿಗೆ ಸಚಿವ ಲಕ್ಷ್ಮಣ ಸವದಿ

ಬೆಂಗಳೂರು: ಸಾರಿಗೆ ಸಚಿವ ಲಕ್ಷ್ಮಣ ಸವದಿ ಜೊತೆ ನೌಕರರ ಸಂಘಟನೆ ನಾಯಕರು ನಡೆಸಿದ ಮಾತುಕತೆ ಅಪೂರ್ಣಗೊಂಡಿದ್ದು, ನೌಕರರ ಮುಷ್ಕರ ಮುಂದುವರಿದಿದೆ.

ವಿಕಾಸಸೌಧದಲ್ಲಿಂದು ನಡೆದ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ಉಭಯ ಕಡೆಯವರಿಗೂ ಸಾಧ್ಯವಾಗಿಲ್ಲ. ಮುಷ್ಕರ ನಡೆಸುತ್ತಿರುವ ಸಿಬ್ಬಂದಿಗಳೇ ಬೇರೆ. ಸಚಿವರ ಜೊತೆ ಮಾತುಕತೆಗೆ ತೆರಳಿದವರು ಬೇರೆ. ಹೀಗಾಗಿ ಸಂಧಾನ ಸಭೆ ಅಪೂರ್ಣಗೊಂಡಿದೆ. ಒಂದೂವರೆ ಗಂಟೆ ನಡೆದ ಸಭೆ ವ್ಯರ್ಥಗೊಂಡಿದೆ ಎಂದು ತಿಳಿದುಬಂದಿದೆ.

ರಾಜ್ಯಾದ್ಯಂತ ಉಪವಾಸ ಮುಷ್ಕರಕ್ಕೆ ನೌಕರರು ಮುಂದಾಗಿದ್ದು, ಬೆಂಗಳೂರಿನಲ್ಲಿ ನೌಕರರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಸಾರಿಗೆ ಸಿಬ್ಬಂದಿ ಬೇಡಿಕೆ ಈಡೇರಿಸುವ ಭರವಸೆ ನೀಡಲಿ...
ಸಭೆ ನಂತರ ಮಾತನಾಡಿದ ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್, ಸಾರಿಗೆ ಸಿಬ್ಬಂದಿ ಬೇಡಿಕೆ ಈಡೇರಿಸುವ ಭರವಸೆ ನೀಡಲಿ. ಸರ್ಕಾರ ಭರವಸೆ ನೀಡಿದರೆ ಬಸ್ ಓಡಿಸಲು ಹೇಳುತ್ತೇವೆ ಎಂದು ಹೇಳಿದರು.

ಸಂಬಳ ಹೆಚ್ಚಳದ ಬಗ್ಗೆ ನಾವು ಒಪ್ಪುವ ನಿರ್ಧಾರ ಮಾಡಲಿ. ರಾಜ್ಯ ಸರ್ಕಾರ ಈ ಸಂಬಂಧ ನಿರ್ಧಾರ ಮಾಡಬೇಕು ಎಂದು ಅನಂತ ಸುಬ್ಬರಾವ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com