ಎಸ್ಮಾ ಜಾರಿ ಮಾಡಿ, ಎದುರಿಸಲು ಸಿದ್ಧ; ಸರ್ಕಾರಕ್ಕೆ ಕೋಡಿಹಳ್ಳಿ ಸವಾಲು

ಮುಷ್ಕರ ನಿರತ ಸಾರಿಗೆ ನೌಕರರ ವಿರುದ್ಧ ಸರ್ಕಾರ ಎಸ್ಮಾ ಜಾರಿ ಮಾಡುವುದಾದರೆ ಮಾಡಲಿ, 1.30 ಲಕ್ಷ ನೌಕರರು ಮತ್ತು ಅವರ ಕುಟುಂಬದವರು ಜೈಲಿಗೆ ಹೋಗಲು ಸಿದ್ಧರಾಗಿದ್ದೇವೆ ಎಂದು ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್(ಸಂಗ್ರಹ ಚಿತ್ರ)
ಕೋಡಿಹಳ್ಳಿ ಚಂದ್ರಶೇಖರ್(ಸಂಗ್ರಹ ಚಿತ್ರ)

ಬೆಂಗಳೂರು: ಮುಷ್ಕರ ನಿರತ ಸಾರಿಗೆ ನೌಕರರ ವಿರುದ್ಧ ಸರ್ಕಾರ ಎಸ್ಮಾ ಜಾರಿ ಮಾಡುವುದಾದರೆ ಮಾಡಲಿ, 1.30 ಲಕ್ಷ ನೌಕರರು ಮತ್ತು ಅವರ ಕುಟುಂಬದವರು ಜೈಲಿಗೆ ಹೋಗಲು ಸಿದ್ಧರಾಗಿದ್ದೇವೆ ಎಂದು ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರಿಗೆ ನೌಕರರಿಗೆ ಅರ್ಧ ಕೂಲಿ ಕೊಟ್ಟು ಜೀತ ಮಾಡಿಸುತ್ತಿದ್ದಾರೆ, ಸ್ವಲ್ಪ ತೊಂದರೆಯಾದರೂ, ನೌಕರರ ಮೇಲೆ ಕಾನೂನಿನ ಅಸ್ತ್ರ ಬಳಸಿ, ವೇತನ ಕಡಿತ ಮಾಡುತ್ತಾರೆ.  ಮಾಡಬಾರದ ಹಿಂಸೆಯನ್ನೆಲ್ಲಾ ಮಾಡುತ್ತಾರೆ. ಇವೆಲ್ಲವನ್ನೂ ಸಹಿಸಿಕೊಂಡು ನೌಕರರು ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರು ನ್ಯಾಯ ಕೇಳಿದರೆ ಈ ರೀತಿಯ ನಡವಳಿಕೆಯನ್ನು ಸರ್ಕಾರ ತೋರಿಸುತ್ತಿದೆ, ಇದು ಸರಿಯಲ್ಲ ಎಂದು ಟೀಕಿಸಿದರು.

ನಾಗರಿಕರು ನೌಕರರ ಪರವಾಗಿ ನಿಲ್ಲಬೇಕು. ನೌಕರರ ಕಷ್ಟವನ್ನು ಅರ್ಥಮಾಡಿಕೊಳ್ಳಬೇಕು. ನಿಮಗೆ ಸ್ವಲ್ಪ ಅನಾನುಕೂಲವಾಗಿರಬಹುದು, ಅದಕ್ಕಾಗಿ ತಾವು ಕ್ಷಮೆ ಕೇಳುತ್ತಿದ್ದೇನೆ, ಅರ್ಧ ಸಂಬಳಕ್ಕೆ ದುಡಿಯುವ ನೌಕರರ ಮೇಲೆ ನಾಗರಿಕರು ಸಿಟ್ಟು ಮಾಡಿಕೊಳ್ಳಬಾರದು, ಸರ್ಕಾರದ  ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಎಂದು ಹೇಳಿದರು.

ತಾಕತ್ತಿದ್ದರೆ ಇವತ್ತೆ ದಾಖಲೆ ಬಿಡುಗಡೆ ಮಾಡಿ
ಸಾರಿಗೆ ನೌಕರರ ಪ್ರತಿಭಟನೆಯಲ್ಲಿ ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಭಾಗಿ ಸಚಿವ ಲಕ್ಷ್ಮಣ್ ಸವದಿ ಹೇಳಿಕೆ ಪ್ರತಿಕ್ರಿಯಿಸಿದ ಚಂದ್ರಶೇಖರ್, ತಾಕತ್ತಿದ್ದರೆ ಇವತ್ತೆ ದಾಖಲೆ ಬಿಡುಗಡೆ ಮಾಡಿ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ಸಚಿವ ಲಕ್ಷ್ಮಣ್ ಸವದಿಗೆ  ಸವಾಲು ಹಾಕಿದರು. ಅಂತೆಯೇ ಪ್ರತಿಭಟನಾ ನೌಕರರನ್ನು ಹತ್ತಿಕಲು ಈ ರೀತಿ ಆರೋಪ ಮಾಡಿದ್ದು, ಸಿಬ್ಬಂದಿ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com