ಪದೇ ಪದೇ ವಿಚಾರಣೆ ಪ್ರಶ್ನಿಸಿದ್ದ ಸಿ.ಪಿ.ಯೋಗೇಶ್ವರ್'ಗೆ ಹೈಕೋರ್ಟ್ ದಂಡ

ವಂಚನೆ ಪ್ರಕರಣಗಳ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿರುವುದನ್ನು ಪ್ರಶ್ನಿಸಿ ವಿಧಾನಪರಿಷತ್ತಿನ ಸದಸ್ಯ ಸಿ.ಪಿ.ಯೋಗೇಶ್ವರ್ ಮತ್ತು ಇತರರು ಸಲ್ಲಿಸಿರುವ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಾಲಯ, ಪದೇ ಪದೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ವಿಚಾರಣೆ ಪ್ರಶ್ನಿಸಿದಕ್ಕಾಗಿ ದಂಡ ವಿಧಿಸಿದೆ. 
ಸಿ.ಪಿ.ಯೋಗೇಶ್ವರ್
ಸಿ.ಪಿ.ಯೋಗೇಶ್ವರ್

ಬೆಂಗಳೂರು: ವಂಚನೆ ಪ್ರಕರಣಗಳ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿರುವುದನ್ನು ಪ್ರಶ್ನಿಸಿ ವಿಧಾನಪರಿಷತ್ತಿನ ಸದಸ್ಯ ಸಿ.ಪಿ.ಯೋಗೇಶ್ವರ್ ಮತ್ತು ಇತರರು ಸಲ್ಲಿಸಿರುವ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಾಲಯ, ಪದೇ ಪದೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ವಿಚಾರಣೆ ಪ್ರಶ್ನಿಸಿದಕ್ಕಾಗಿ ದಂಡ ವಿಧಿಸಿದೆ. 

ಕಂಪನಿ ಕಾಯ್ದೆ ಮತ್ತು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ನವದೆಹಲಿಯ ಗಂಭೀರ ವಂಚನೆಗಳ ತನಿಖಾ ತಂಡ ನಡೆಸುತ್ತಿರುವ ವಿಚಾರಣೆ ಪ್ರಶ್ನಿಸಿ, ಯೋಗೇಶ್ವರ,  ಯೋಗೇಶ್ವರ ಪತ್ನಿ ಮಂಜು ಕುಮಾರಿ, ಅರುಣ್ ಚರಂತಿಮಠ, ಸುಜಾತಾ ಚರಂತಿಮಠ, ಸಿ.ಪಿ. ಗಂಗಾಧರೇಶ್ವರ, ಪಿ. ಮಹಾದೇವಯ್ಯ, ಎಚ್‌.ಆರ್. ರಮೇಶ್‌ ಮತ್ತು ಸಾಂಬಶಿವ ರಾವ್ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ವ್ಯವಹಾರ ನಡೆಸುವಾಗ ಕಂಪನಿ ಕಾಯ್ದೆಗಳನ್ನು ಉಲ್ಲಂಘಿಸಲಾಗಿದೆ. ತಂದೆಯ ಹೆಸರು ಮತ್ತು ವಿಳಾಸಗಳನ್ನು ಮೂರು ವಿಭಿನ್ನ ರೀತಿಯಲ್ಲಿ ನಮೂದಿಸಿ ಸುಳ್ಳು ದಾಖಲೆ ಸಲ್ಲಿಸಲಾಗಿದೆ ಎಂಬುದು ಯೋಗೇಶ್ವರ ಮತ್ತು ಇತರರ ವಿರುದ್ಧ ಇರುವ ಆರೋಪವಾಗಿದೆ. ತನಿಖೆಗೆ ವಿನಾಯಿತಿ ಕೋರಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ವಜಾಗೊಳಿಸಿದರು. ಅಲ್ಲದೆ, ಪದೇ ಪದೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಕ್ಕಾಗಿ ರೂ.3 ಸಾವಿರ ದಂಡ ವಿಧಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com