ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರೈಲಿನ ಹಳಿ ಮೇಲೆ ಸಾಯಲು ಹೊರಟಿದ್ದ ಉಪನ್ಯಾಸಕಿ, ವಿದ್ಯಾರ್ಥಿಯನ್ನು ರಕ್ಷಿಸಿದ ಪೊಲೀಸರು

ಎರಡು ಪ್ರತ್ಯೇಕ ಘಟನೆಗಳಲ್ಲಿ ರೈಲು ಹಳಿಗಳ ಮೇಲೆ ಸಾಯಲು ಹೊರಟಿದ್ದ ಇಬ್ಬರನ್ನು ರೈಲ್ವೆ ಸಂರಕ್ಷಣಾ ಸಿಬ್ಬಂದಿ ರಕ್ಷಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಎರಡು ಪ್ರತ್ಯೇಕ ಘಟನೆಗಳಲ್ಲಿ ರೈಲು ಹಳಿಗಳ ಮೇಲೆ ಸಾಯಲು ಹೊರಟಿದ್ದ ಇಬ್ಬರನ್ನು ರೈಲ್ವೆ ಸಂರಕ್ಷಣಾ ಸಿಬ್ಬಂದಿ ರಕ್ಷಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಹಿಳಾ ಉಪನ್ಯಾಸಕಿ ಮತ್ತು ವಿದ್ಯಾರ್ಥಿ ರೈಲು ಹಳಿಗೆ ಸಿಲುಕಿ ಸಾಯಲು ಹೊರಟಿದ್ದರು, ಆದರೆ ಸಿಬ್ಬಂದಿ ಈ ಸಂಬಂಧ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರನ್ನು ರಕ್ಷಿಸಲಾಯಿತು ಎಂದು ರೈಲ್ವೆ ಸಂರಕ್ಷಣಾ ಪಡೆಯ ಹಿರಿಯ ರಕ್ಷಣಾ ಆಯುಕ್ತ ದೇಬಶ್ಮಿತಾ ಚಟ್ಟೋಪಾದ್ಯಾಯ ತಿಳಿಸಿದ್ದಾರೆ.

ಮೊದಲ ಘಟನೆಯಲ್ಲಿ 19 ವರ್ಷದ ಕಾಲೇಜು ವಿದ್ಯಾರ್ಥಿ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಮಧ್ಯಾಹ್ನ 2.30ರ ವೇಳೆಗೆ ಪ್ಲಾಟ್ ಫಾರಂ ನಲ್ಲಿ ರೈಲು ಹತ್ತುವ ವೇಳೆ ಕಾಲು ಜಾರಿ ಹಳಿ ಮೇಲೆ ಬಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಮುಖ್ಯ ಪೇದೆ ಎಸ್ ಎಂ ಜಾಲಿಹಾಳ್ ಅವರು, ಮೇರಿ ಸಹೇಲಿ ತಂಡದ ನೆರವಿನೊಡನೆ ರೈಲು ಹಳಿ ಮೇಲೆ ಬಿದ್ದಿದ್ದ ವಿದ್ಯಾರ್ಥಿ ಜೀವವನ್ನು ಅಪಾಯದಿಂದ ರಕ್ಷಿಸಿದ್ದಾರೆ. ಈತ ಹುಬ್ಬಳ್ಳಿ ಮೂಲದ ವಿದ್ಯಾರ್ಥಿಯಾಗಿದ್ದಾನೆ.

ಮತ್ತೊಂದು ಪ್ರಕರಣದಲ್ಲಿ ಮಹಿಳೆಯೊಬ್ಬರು ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದರು, ಇದನ್ನು ನೋಡಿದ ಆರ್ ಪಿಎಫ್ ಸಿಬ್ಬಂದಿ ಆಕೆಯನ್ನು ಹಳಿಯಿಂದ ದೂರ ಸರಿಯುವಂತೆ ಕೂಗಿಕೊಂಡಿದ್ದಾರೆ. ಆದರೆ ಆಕೆ ಕೇಳಿಯೂ ಕೇಳದಂತೆ ಇದ್ದುದ್ದನ್ನು ನೋಡಿದ ಪೊಲೀಸರು ಹಳಿ ಮೇಲೆ ಜಿಗಿದು, ಆಕೆಯನ್ನು ರಕ್ಷಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

29 ವರ್ಷದ ಮಹಿಳೆ ನಗರದ ಕಾಲೇಜೊಂದರಲ್ಲಿ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದು, ವೈಯಕ್ತಿಕ ಸಮಸ್ಯೆ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರು, ಹೀಗಾಗಿ ಸಾಯಲು ಹೊರಟಿದ್ದರು, ನಂತರ ಆಕೆಗೆ ಕೌನ್ಸೆಲಿಂಗ್ ಮಾಡಿ ಮನೆಗೆ ಕಳುಹಿಸಲಾಗಿದೆ. ಆಕೆಯನ್ನು ಮನೆಗೆ ಕರೆದು ಕೊಂಡು ಹೋಗಲು ಬಂದ ಆಕೆಯ ತಂದೆ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com