ಮೊದಲ‌ ಹಂತದಲ್ಲಿ‌ 30 ಕೋಟಿ ‌ಜನರಿಗೆ ಕೊರೋನಾ ಲಸಿಕೆ: ಬಿ. ಶ್ರೀರಾಮುಲು

ಕೊರೋನಾ ಲಸಿಕೆ ಅಭಿಯಾನಕ್ಕೆ ಭಾರತವನ್ನು ಬಿಜೆಪಿ ಸಿದ್ಧಪಡಿಸುತ್ತಿದೆ. ಆರೋಗ್ಯ ಸಚಿವಾಲಯವು ದಿನಕ್ಕೆ 100 ಜನರಿಗೆ ಲಸಿಕೆ ನೀಡಲು ಅನುಮತಿ ನೀಡಿದ್ದು, ಅಗತ್ಯಕ್ಕೆ ತಕ್ಕಂತೆ 200 ಜನರವರೆಗೂ ನೀಡಬಹುದಾಗಿದೆ.
ಬಿ. ಶ್ರೀರಾಮುಲು
ಬಿ. ಶ್ರೀರಾಮುಲು

ಬೆಂಗಳೂರು: ಕೊರೋನಾ ಲಸಿಕೆ ಅಭಿಯಾನಕ್ಕೆ ಭಾರತವನ್ನು ಬಿಜೆಪಿ ಸಿದ್ಧಪಡಿಸುತ್ತಿದೆ. ಆರೋಗ್ಯ ಸಚಿವಾಲಯವು ದಿನಕ್ಕೆ 100 ಜನರಿಗೆ ಲಸಿಕೆ ನೀಡಲು ಅನುಮತಿ ನೀಡಿದ್ದು, ಅಗತ್ಯಕ್ಕೆ ತಕ್ಕಂತೆ 200 ಜನರವರೆಗೂ ನೀಡಬಹುದಾಗಿದೆ. 

ಮೊದಲ‌ ಹಂತದಲ್ಲಿ‌ ಜುಲೈ 2021ರ ಒಳಗೆ ಕೊರೋನಾ ಯೋಧರನ್ನು ಆದ್ಯತೆಯಲ್ಲಿರಿಸಿಕೊಂಡು ಒಟ್ಟು 30 ಕೋಟಿ ‌ಜನರಿಗೆ ಲಸಿಕೆ ನೀಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಶ್ರೀರಾಮುಲು ಮೊದಲ‌ ಹಂತದಲ್ಲಿ‌ 30 ಕೋಟಿ ‌ಜನರಿಗೆ ಕೊರೋನಾ ಲಸಿಕೆ ನೀಡುವುದಾಗಿ ಮಾಹಿತಿ ನೀಡಿದ್ದಾರೆ.

ಕೊರೋನಾ ಲಸಿಕೆ ಅಭಿಯಾನಕ್ಕೆ ಭಾರತವನ್ನು ಬಿಜೆಪಿ ಸಿದ್ಧಪಡಿಸುತ್ತಿದೆ. ಆರೋಗ್ಯ ಸಚಿವಾಲಯವು ದಿನಕ್ಕೆ 100 ಜನರಿಗೆ ಲಸಿಕೆ ನೀಡಲು ಅನುಮತಿ ನೀಡಿದ್ದು, ಅಗತ್ಯಕ್ಕೆ ತಕ್ಕಂತೆ 200 ಜನರವರೆಗೂ ನೀಡಬಹುದಾಗಿದೆ. ಮೊದಲ‌ ಹಂತದಲ್ಲಿ‌ ಜುಲೈ 2021ರ ಒಳಗೆ ಕೊರೋನಾ ಯೋಧರನ್ನು ಆದ್ಯತೆಯಲ್ಲಿರಿಸಿಕೊಂಡು ಒಟ್ಟು 30 ಕೋಟಿ ‌ಜನರಿಗೆ ಲಸಿಕೆ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com