ಜನ್ಮ ದಿನ ಆಚರಿಸದಿರಲು ಎಚ್.ಡಿ. ಕುಮಾರಸ್ವಾಮಿ ನಿರ್ಧಾರ
ನಾಡಿದ್ದು ಬುಧವಾರ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರ 62 ನೇ ಹುಟ್ಟುಹಬ್ಬ. ಈ ಬಾರಿ ತಮ್ಮ ಜನ್ಮದಿನಾಚರಣೆಯನ್ನು ಆಚರಿಸದಿರಲು ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
Published: 14th December 2020 06:04 PM | Last Updated: 14th December 2020 06:13 PM | A+A A-

ಎಚ್. ಡಿ. ಕುಮಾರಸ್ವಾಮಿ
ಬೆಂಗಳೂರು: ನಾಡಿದ್ದು ಬುಧವಾರ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರ 62 ನೇ ಹುಟ್ಟುಹಬ್ಬ. ಈ ಬಾರಿ ತಮ್ಮ ಜನ್ಮದಿನಾಚರಣೆಯನ್ನು ಆಚರಿಸದಿರಲು ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
ಕೊರೋನಾ ಸಂಕಷ್ಟವು ಜನರನ್ನು ಬಾಧಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಹುಟ್ಟುಹಬ್ಬ ಆಚರಿಸದಿರಲು ನಿರ್ಧರಿಸಿದ್ದು, ಜನ್ಮದಿನದಂದು ಬೆಂಗಳೂರಿನಲ್ಲಿ ಇರುವುದಿಲ್ಲ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ತಾವಿರುವ ಕಡೆಯಿಂದಲೇ ಹಾರೈಸಿ, ಅಭಿಮಾನ ತೋರಬೇಕೆಂದು ಎಚ್ ಡಿಕೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಡಿ.16 ನನ್ನ ಜನ್ಮದಿನ. ಕೊರೋನಾ ಸಂಕಷ್ಟವು ಜನರನ್ನು ಬಾಧಿಸುತ್ತಿರುವ ಈ ಹೊತ್ತಿನಲ್ಲಿ ಜನ್ಮದಿನ ಆಚರಿಸದಿರಲು ನಿರ್ಧರಿಸಿದ್ದೇನೆ.
— H D Kumaraswamy (@hd_kumaraswamy) December 14, 2020
ಆ ದಿನ ಬೆಂಗಳೂರಿನಲ್ಲಿ ನಾನು ಲಭ್ಯವಿರುವುದಿಲ್ಲ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ನೀವಿರುವಲ್ಲಿಂದಲೆ ನನ್ನನ್ನು ಹಾರೈಸಿ. ನಿಮ್ಮ ಪ್ರೀತಿ ಅಭಿಮಾನ ದೊಡ್ಡದು.
1/2
ಪ್ರತಿ ಜನ್ಮದಿನಗಳು ನಮ್ಮ ಇರುವಿಕೆಯನ್ನು ನೆನಪಿಸುತ್ತವೆ ನಿಜ, ಆದರೆ ಬದುಕಿದ್ದಷ್ಟು ದಿನ ಕಷ್ಟದಲ್ಲಿರುವ ಜನರ ಒಳಿತಿಗೆ ನಿಸ್ವಾರ್ಥವಾಗಿ, ಕಾರುಣ್ಯಭರಿತವಾಗಿ ದುಡಿದಾಗ ನಮ್ಮಹುಟ್ಟು ಸಾರ್ಥಕವಾಗುತ್ತದೆ ಎಂಬುದು ತಮ್ಮ ನಂಬಿಕೆ ಮತ್ತು ನಡೆಯಾಗಿರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.