ಮಂಗಳೂರು: ಅಪ್ರಾಪ್ತೆಗೆ ಖಾಸಗಿ ಶಾಲಾ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳ, ಅಮಾನತು

ಖಾಸಗಿ ಶಾಲೆಯ ಸಿಬ್ಬಂದಿಯೋರ್ವ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಸುಳ್ಯ ತಾಲೂಕಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಖಾಸಗಿ ಶಾಲೆಯ ಸಿಬ್ಬಂದಿಯೋರ್ವ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಸುಳ್ಯ ತಾಲೂಕಿನಲ್ಲಿ ನಡೆದಿದೆ.

ಡಿಸೆಂಬರ್ 10 ರಂದು ಘಟನೆ ನಡೆದಿದ್ದು, ಸುಳ್ಯ ತಾಲೂಕಿನ ದೇವಚಲ್ಲ ಗ್ರಾಮದ ಅನಿಲ್ ಅಮಾನತುಗೊಂಡಿರುವ ಸಿಬ್ಬಂದಿ, ಬಾಲಕಿಗೆ ಹೊಸ ಬೈಸಿಕಲ್ ತಂದು ಕೊಡುವ ಭರವಸೆ ನೀಡಿ, ಬೈಸಿಕಲ್ ತುಳಿಯುವುದು ಹೇಗೆ ಎಂದು ಹೇಳಿಕೊಡುವುದಾಗಿ ತಿಳಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸುಬ್ರಮಣ್ಯ ಪೊಲೀಸರು ತಿಳಿಸಿದ್ದಾರೆ.

ಯೆಲಿಮಲೆಯಲ್ಲಿರುವ ಖಾಸಗಿ ಶಾಲೆಯಲ್ಲಿ ಅನಿಲ್ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದಾನೆ,  ಅನಿಲ್ ಮತ್ತು ಬಾಲಕಿ ತಂದೆ ಸ್ನೇಹಿತರಾಗಿದ್ದಾರೆ. ಮನೆಗೆ ಬಂದ ನಂತರ ಬಾಲಕಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾಳೆ,  ನಂತರ ಪೋಷಕರು ಶಾಲಾ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದಾರೆ. ಬಾಲಕಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದ್ದಾರೆ ಎಂಬುದನ್ನು ತಿಳಿದ ಶಾಲಾ ಆಡಳಿತ ಮಂಡಳಿ ಅನಿಲ್ ನನ್ನು ಅಮಾನತು ಮಾಡಿದೆ. 

ಇದೇ ವೇಳೆ ಬಾಲಕಿ ತಾಯಿ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಸೆಕ್ಷನ್ 376, 5,6,10 ರ ಅಡಿಯಲ್ಲಿ 2012ರ ಪೊಸ್ಕೋ ಕಾಯಿದೆಯಡಿ ದೂರು ದಾಖಲಿಸಲಾಗಿದೆ. ಸುಬ್ರಮಣ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com