ರಾಜ್ಯಪಾಲರೇ ಭೂ ಸುಧಾರಣಾ ಕಾಯ್ದೆಗೆ ಸಹಿ ಹಾಕದಿರಿ: ಟ್ವಿಟರ್ ನಲ್ಲೂ ಧ್ವನಿ ಎತ್ತಿದ ರೈತರು

ಭೂ ಸುಧಾರಣಾ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ ತೀವ್ರಗೊಂಡಿದ್ದು, ಕಾಯ್ದೆಗೆ ಸಹಿಹಾಕದಂತೆ ಇದೀಗ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲೂ ರೈತರು ಧ್ವನಿ ಎತ್ತಿದ್ದಾರೆ. 
ಪ್ರತಿಭಟನಾನಿರತ ರೈತರು
ಪ್ರತಿಭಟನಾನಿರತ ರೈತರು

ಬೆಂಗಳೂರು: ಭೂ ಸುಧಾರಣಾ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ ತೀವ್ರಗೊಂಡಿದ್ದು, ಕಾಯ್ದೆಗೆ ಸಹಿಹಾಕದಂತೆ ಇದೀಗ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲೂ ರೈತರು ಧ್ವನಿ ಎತ್ತಿದ್ದಾರೆ. 

ರಾಜ್ಯಪಾಲರೇ ಭೂ ಸುಧಾರಣಾ ಕಾಯ್ದೆಗೆ ಸಹಿ ಹಾಕದಿರಿ ಎಂದು ಟ್ವಿಟರ್ ನಲ್ಲಿ ರೈತರು ಆಗ್ರಹಿಸುತ್ತಿದ್ದು, ಇದಕ್ಕೆ ಉತ್ತಮ ಬೆಂಬಲ ಕೂಡ ವ್ಯಕ್ತವಾಗುತ್ತಿದೆ. 

ಐಕ್ಯ ಹೋರಾಟ ಸಮಿತಿ ಮತ್ತು ನಮ್ಮೂರ ಭೂಮಿ ನಮಗಿರಳ್ಳಿಯ ಸದಸ್ಯ ನವೀನ್ ಎಸ್ ಅವರು ಮಾತನಾಡಿ, ರೈತರು ಹಾಗೂ ಭೂ ಸುಧಾರಣ ಕಾಯ್ದೆಗೆ ವಿರುದ್ಧವಿರುವವರಿಗಾಗಿ ಈ ಅಭಿಯಾನವನ್ನು ಆರಂಭಿಸಲಾಗಿದೆ. ರೈತರ ಈ ಹೋರಾಟಕ್ಕೆ 2,571 ಮಂದಿ ಬೆಂಬಲ ವ್ಯಕ್ತಪಡಿಸಿದ್ದು, ಟ್ವಿಟರ್ ನಲ್ಲಿ ಇದೀಗ #GovernorDontSignKLRA2020 ಟ್ರೆಂಡ್ ಆಗಿದೆ. 

ಅಭಿಯಾನದಲ್ಲಿ ಭಾಗಿಯಾದ ಜನರು ರಾಜ್ಯ ಸರ್ಕಾರಕ್ಕೆ ಕಾನೂನು ಜಾರಿಗೆ ತರದಂತೆ ಆಗ್ರಹಿಸುತ್ತಿದ್ದಾರೆ. ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ 2020 ಕಠಿಣವಾಗಿದ್ದು, ಕಾಯ್ದೆ ಜಾರಿಗೆಯಾಗಿದೇದ ಆದರೆ, ಅದು ಕರ್ನಾಟಕದ ರೈತರಿಗೆ ಮರಣದಂಡನೆ ನೀಡಿದಂತಾಗಲಿದೆ. 

ಈ ಮೂಲಕ ಕಾರ್ಪೊರೇಟ್‌ಗಳು ಕೃಷಿ ಭೂಮಿಯನ್ನು ಒಟ್ಟುಗೂಡಿಸಿಕೊಂಡು, ಅವುಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುತ್ತಾರೆ. ಆದ್ದರಿಂದ, ಗೌರವಾನ್ವಿತ ರಾಜ್ಯಪಾಲರು ಕಾಯ್ದೆ ಜಾರಿಗೊಳಿಸಲು ಅನುಮತಿ ನೀಡಬಾಹದು ಎಂದು ಆಗ್ರಹಿಸಲಾಗುತ್ತಿದೆ. 

"ಕೃಷಿ ಕೇವಲ ಬೆಳೆ ಅಲ್ಲ, ಇದು ಭಾರತದ ಪರಂಪರೆ ಮತ್ತು ಭವಿಷ್ಯ ಎಂದು ಹರ್ಷಿತಾ ಗೌಡ ಅವರು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com