ಬೆಂಗಳೂರು: ಹೆಚ್ಚುತ್ತಿರುವ ಭೂಗತ ಲೋಕದ ಅಪರಾಧ ಪ್ರಕರಣಗಳಿಂದ ಪೊಲೀಸರಿಗೆ ಆತಂಕ

ರಾಜ್ಯದಲ್ಲಿ ಭೂಗತ ಲೋಕದ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕರ್ನಾಟಕ ಪೊಲೀಸರಲ್ಲಿ ಆತಂಕ ಮನೆ ಮಾಡಿದೆ. ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಡಾನ್ ರವಿ ಪೂಜಾರಿ ಸಹಚರರ ಕೈವಾಡವಿರುವುದು ಆತಂಕಕ್ಕೆ ಕಾರಣವಾಗಿದೆ.
ರವಿ ಪೂಜಾರಿ
ರವಿ ಪೂಜಾರಿ

ಬೆಂಗಳೂರು: ರಾಜ್ಯದಲ್ಲಿ ಭೂಗತ ಲೋಕದ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕರ್ನಾಟಕ ಪೊಲೀಸರಲ್ಲಿ ಆತಂಕ ಮನೆ ಮಾಡಿದೆ. ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಡಾನ್ ರವಿ ಪೂಜಾರಿ ಸಹಚರರ ಕೈವಾಡವಿರುವುದು ಆತಂಕಕ್ಕೆ ಕಾರಣವಾಗಿದೆ.

ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲಾರ ಪೊಲೀಸರು ಕವಿರಾಜ್ ಎಂಬಾತನನ್ನು ಬಂಧಿಸಿದ್ದಾರೆ. ಕರ್ನಾಟಕದ ಅಪರಾಧ ಜಗತ್ತಿನಲ್ಲಿ ಬಲವಾದ ಹೆಜ್ಜೆ ಗುರುತುಗಳನ್ನು ಕಾಣುತ್ತಿರುವ ನಾಲ್ಕನೇ ಪ್ರಕರಣ ಇದಾಗಿದೆ, ರಾಜ್ಯದಲ್ಲಿ ನಡೆದ ಮೂರು ಹತ್ಯೆಗಳು ಒಂದು ಮಾದರಿಯಲ್ಲಿವೆ. ಸೆಪ್ಟೆಂಬರ್ 24 ರಂದು ಉಡುಪಿಯಲ್ಲಿ ಕಿಶನ್ ಹೆಗ್ಡೆ, ಅಕ್ಟೋಬರ್ 15 ರಂದು ಬೆಂಗಳೂರಿನಲ್ಲಿ ಮನೀಶ್ ಶೆಟ್ಟಿ ಮತ್ತು ಅಕ್ಟೋಬರ್ 21 ರಂದು ಬಂಟ್ವಾಳದಲ್ಲಿ ನಡೆದ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣ ಮತ್ತು ಪ್ರಕಾಶ್ ಅಪಹರಣ ಪ್ರಕರಣದಲ್ಲಿ ಪೂಜಾರಿ ಮತ್ತು ಅವನ ಕೈ ಮಾಜಿ ಆಪ್ತ ವಿಕ್ಕಿ ಶೆಟ್ಟಿ ಕೈವಾಡವಿರುವುದನ್ನು ತಳ್ಳಿಹಾಕಲಾಗುವುದಿಲ್ಲ.

ವಿಕ್ಕಿ ಶೆಟ್ಟಿ, ರವಿ ಪೂಜಾರಿ ಜೊತೆಗಿನ ಭಿನ್ನಾಭಿಪ್ರಾಯದಿಂದ ಹಲವು ದಿನಗಳಿಂದ ಹೊರಗುಳಿದಿದ್ದ, ಮೇ ತಿಂಗಳಲ್ಲಿ ಮುತಪ್ಪ ರೈ ಅವರ ಮರಣದ ನಂತರ ಇಬ್ಬರು ಗ್ಯಾಂಗ್ ಸ್ಟರ್ ಗಳ ನಡುವೆ ಟರ್ಪ್ ವಾರ್ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ಇದು ಪೊಲೀಸರಿಗೆ ಕಳವಳಕಾರಿ ಸಂಗತಿಯಾಗಿದೆ, ಏಕೆಂದರೆ ಕೆಲವು ಸಮಯದಿಂದ ರಾಜ್ಯದಲ್ಲಿ ಯಾವುದೇ ದೊಡ್ಡ ಪ್ರಕರಣಗಳಲ್ಲಿ ಮಾಫಿಯಾ ಇರಲಿಲ್ಲ, ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದಲ್ಲಿ ರವಿ ಪೂಜಾರಿ  ಭಾಗಿಯಾಗಿದ್ದಾನೆ ಎಂಬುದರ ಬಗ್ಗೆ ಪೊಲೀಸರು ಪ್ರತಿಕ್ರಿಯೆ ನೀಡುತ್ತಿಲ್ಲ, ಆದರೆ ಮುತ್ತಪ್ಪ ರೈ ಮರಣದ ನಂತರ ಅದನ್ನು ಬಂಡವಾಳವಾಗಿಸಿಕೊಳ್ಳಲು ಮತ್ತು ತನ್ನ ಕಾನೂನು ಸಮರದ ಖರ್ಚಿಗಾಗಿ ಹಣದ ವ್ಯವಸ್ಥೆಗಾಗಿ ಈ ರೀತಿ ಮಾಡಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ತನ್ನ ಮಾಲೀಕನಿಗೆ ಹಣ ಒದಗಿಸಲು ಕವಿರಾಜ್ ವರ್ತೂರು ಪ್ರಕಾಶ್ ಕಿಡ್ನಾಪ್ ಮಾಡಿರಬಹುದು ಎಂದು ಮೂಲಗಳು ತಿಳಿಸಿವೆ. .ಕವಿರಾಜ್  ಪೂಜಾರಿಯ ಒಡನಾಟವು ಶಬ್ನಮ್ ಡೆವಲಪರ್ಸ್ ಪ್ರಕರಣಕ್ಕೆ ಹಿಂದಿರುಗುತ್ತದೆ, ಈ ಪ್ರಕರಣದಲ್ಲಿ ಮಾಜಿ ಕಾರ್ಪೋರೇಟರ್ ಮತ್ತು ಶಬ್ನಮ್ ಡೆವಲಪರ್ಸ್‌ನ ಮಾಲೀಕ ಶಮಿವುಲ್ಲಾ ಅವರನ್ನು 2007 ರಲ್ಲಿ ಕೊಲ್ಲಲು ಇಬ್ಬರು ಸಂಚು ಹೂಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com