ಬೆಂಗಳೂರು: ಸ್ನೇಹಿತನ ಮನೆಯಲ್ಲಿ ಮಹಿಳಾ ಸಿಐಡಿ ಡಿವೈಎಸ್ ಪಿ ಲಕ್ಷ್ಮೀ ಶವ ಪತ್ತೆ; ಆತ್ಮಹತ್ಯೆ ಶಂಕೆ

ನಗರದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಸ್ನೇಹಿತನ ಮನೆಯಲ್ಲಿ ಬುಧವಾರ ರಾತ್ರಿ ಪತ್ತೆಯಾಗಿದೆ. 
ಆತ್ಮಹತ್ಯೆಗೆ ಶರಣಾಗಿರುವ ಡಿವೈಎಸ್'ಪಿ ಲಕ್ಷ್ಮೀ
ಆತ್ಮಹತ್ಯೆಗೆ ಶರಣಾಗಿರುವ ಡಿವೈಎಸ್'ಪಿ ಲಕ್ಷ್ಮೀ

ಬೆಂಗಳೂರು: ನಗರದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಸ್ನೇಹಿತನ ಮನೆಯಲ್ಲಿ ಬುಧವಾರ ರಾತ್ರಿ ಪತ್ತೆಯಾಗಿದೆ. 

ಅನ್ನಪೂರ್ಣೇಶ್ವರಿ ನಗರದ ವಿನಾಯಕ್ ಲೇಔಟ್ ನಲ್ಲಿ ಸಿಐಡಿ ಡಿವೈಎಸ್ ಪಿ ಲಕ್ಷ್ಮೀ (33) ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಬುಧವಾರ ಸಂಜೆ 7 ರ ಸುಮಾರಿಗೆ ಲಕ್ಷ್ಮೀ ಅವರು ತಮ್ಮ ಸ್ನೇಹಿತನಾದ ಗುತ್ತಿಗೆದಾರ ಮನು ಎಂಬವರ ಮನೆಯಲ್ಲಿ ಪಾರ್ಟಿ ಮಾಡಿ, ಅಲ್ಲಿಯೇ ಕೋಣೆಯೊಂದಕ್ಕೆ ತೆರಳಿದ್ದರು. ಸುಮಾರು ಹೊತ್ತು ಹೊರಗೆ ಬಾರದ ಹಿನ್ನೆಲೆಯಲ್ಲಿ 10 ಗಂಟೆಗೆ ಮನು ಅವರು ಬಾಗಿಲು ತೆರೆದು ನೋಡಿದಾಗ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಅಷ್ಟೊತ್ತಿಗೆ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಮೂಲತಃ ಲಕ್ಷ್ಮೀ ಕೋಲಾರದವರಾಗಿದ್ದು, ನಗರದ ಕೋಣನಕುಂಟೆಯಲ್ಲಿ ವಾಸವಾಗಿದ್ದರು. ವಿವಾಹವಾಗಿ 8 ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ. ಹೀಗಾಗಿಯೇ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆ ಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com