ಕಸ ಸಂಗ್ರಹಕ್ಕೆ ಶುಲ್ಕ ವಿಧಿಸಲ್ಲ: ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ

ಸಾರ್ವಜನಿಕರ ತೀವ್ರ ವಿರೋಧಕ್ಕೆ ಮಣಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕಸ ಸಂಗ್ರಹಣೆಗಾಗಿ ಮಾಸಿಕ ಶುಲ್ಕ ವಿಧಿಸುವ ಪ್ರಸ್ತಾಪವನ್ನು ಕೈಬಿಟ್ಟಿದೆ.
ಗೌರವ್ ಗುಪ್ತಾ
ಗೌರವ್ ಗುಪ್ತಾ

ಬೆಂಗಳೂರು: ಸಾರ್ವಜನಿಕರ ತೀವ್ರ ವಿರೋಧಕ್ಕೆ ಮಣಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಸ ಸಂಗ್ರಹಣೆಗಾಗಿ ಮಾಸಿಕ ಶುಲ್ಕ ವಿಧಿಸುವ ಪ್ರಸ್ತಾಪವನ್ನು ಕೈಬಿಟ್ಟಿದೆ.

ಈ ಕುರಿತಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಸ್ಪಷ್ಟನೆ ನೀಡಿದ್ದು "ಸರ್ಕಾರ ಅಥವಾ ಪಾಲಿಕೆ ಮುಂದೆ ಇಂತಹಾ ಪ್ರಸ್ತಾವನೆ ಸಧ್ಯಕ್ಕಿಲ್ಲ. ಹಾಗಾಗಿ ಬೆಂಗಳೂರು ನಿವಾಸಿಗಳಿಗೆ ಕಸ ಸಂಗ್ರಹಕ್ಕಾಗಿ ಯಾವ ರೀತಿಯ ಶುಲ್ಕವನ್ನೂ ವಿಧಿಸಲ್ಲ" ಎಂದು ತಿಳಿಸಿದ್ದಾರೆ.

ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯ ನಿವಾಸಿಗಳಿಗೆ ಕಸ ಸಂಗ್ರಹಣೆಗಾಗಿ ಶುಲ್ಕ ವಿಧಿಸಲಾಗುತ್ತದೆ ಎನ್ನುವ ಬಗ್ಗೆ ಮಾದ್ಯಮಗಳಲ್ಲಿ ವರದಿ ಪ್ರಸಾರವಾಗಿದ್ದವು. ಆದರೆ ಈ ಬಗ್ಗೆ ಇದ್ದ ಪ್ರಸ್ತಾವನೆ ಕೈಬಿಟ್ಟಿರುವ ಬಿಬಿಎಂಪಿ ಕ್ರಮದಿಂದ ಬೆಂಗಳೂರು ನಗರ ವಾಸಿಗಳು ನಿರಾಳವಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com