ಲಾಲ್ ಬಾಗ್ ನಲ್ಲಿ 209 ಮಳೆ ನೀರು ಕೊಯ್ಲು ಹೊಂಡಗಳು!

ಬಾಸ್ ಮತ್ತು ಯೂನೈಟೆಡ್ ವೇ ಆಪ್ ಬೆಂಗಳೂರು ಸ್ವಯಂ ಸೇವಾ ಸಂಸ್ಥೆಯ ಸಹಭಾಗಿತ್ವದಲ್ಲಿ ಲಾಲ್ ಬಾಗ್ ಸಸ್ಯೋದ್ಯಾನದಲ್ಲಿ ನಿರ್ಮಿಸಲಾಗಿರುವ 209 ಮಳೆ ನೀರು ಕೊಯ್ಲು ಹೊಂಡಗಳನ್ನು ತೋಟಗಾರಿಕೆ ಇಲಾಖೆ ಗುರುವಾರ ಉದ್ಘಾಟಿಸಿತು.
ಲಾಲ್ ಬಾಗ್
ಲಾಲ್ ಬಾಗ್

ಬೆಂಗಳೂರು: ಬಾಸ್ ಮತ್ತು ಯೂನೈಟೆಡ್ ವೇ ಆಪ್ ಬೆಂಗಳೂರು ಸ್ವಯಂ ಸೇವಾ ಸಂಸ್ಥೆ ಸಹಭಾಗಿತ್ವದಲ್ಲಿ ಲಾಲ್ ಬಾಗ್ ಸಸ್ಯೋದ್ಯಾನದಲ್ಲಿ ನಿರ್ಮಿಸಲಾಗಿರುವ 209 ಮಳೆ ನೀರು ಕೊಯ್ಲು ಹೊಂಡಗಳನ್ನು ತೋಟಗಾರಿಕೆ ಇಲಾಖೆ ಗುರುವಾರ ಉದ್ಘಾಟಿಸಿತು.

ಈ 209 ಮಳೆ ನೀರು ಕೊಯ್ಲು ಹೊಂಡಗಳ ಪೈಕಿಯಲ್ಲಿ 124ನ್ನು ಬಾಸ್ ಕಂಪನಿ ಸಿಎಸ್ ಆರ್ ಚಟುವಟಿಕೆಯಡಿ ಪ್ರಯೋಜಿಸಿದ್ದರೆ , 85 ಹೊಂಡಗಳನ್ನು ತೋಟಗಾರಿಕೆ ಇಲಾಖೆ ಅನುದಾನ ಒದಗಿಸಿದೆ. ಇನ್ನೂ 50 ಹೂಂಡಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಹೆಚ್ಚಿನ ಮರಗಳಿದ್ದರೂ ಸಹ ನಾಗರಿಕ ಕಾರ್ಯಗಳು ಪ್ರಗತಿಯಲ್ಲಿರುವುದರಿಂದ ಲಾಲ್ ಬಾಗ್ ಮಾತ್ರವಲ್ಲದೇ, ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ  ತೀವ್ರ ಮಟ್ಟದಲ್ಲಿ ಕುಸಿದಿದ್ದು, ಈ ಪ್ರದೇಶದಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಸಸ್ಯೋದ್ಯಾನಕ್ಕೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಲಾಲ್ ಬಾಗ್ ನಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಈ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಲಾಲ್ ಬಾಗ್ ಉಪ ನಿರ್ದೇಶಕಿ ಜಿ. ಕುಸುಮಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com