ವಿಸ್ಟ್ರಾನ್ ಕಂಪನಿಯ ಚಿತ್ರ
ವಿಸ್ಟ್ರಾನ್ ಕಂಪನಿಯ ಚಿತ್ರ

ನೌಕರರಿಗೆ ವೇತನ ಪಾವತಿಯಲ್ಲಿ ವಿಳಂಬ: ಆ್ಯಪಲ್ ಕಠಿಣಕ್ರಮ; ವಿಸ್ಟ್ರಾನ್ ಪ್ರೊಬೆಷನ್ ಗೆ!

ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಕಾರ್ಮಿಕರಿಗೆ ವೇತನ ಪಾವತಿಯಲ್ಲಿ ವಿಳಂಬ ಮತ್ತು ಅದರ ಪೂರೈಕೆದಾರರ ಸಂಹಿತೆಯಲ್ಲಿ ಉಲ್ಲಂಘನೆಯಾಗಿರುವುದು ಪ್ರಾಥಮಿಕ ತನಿಖೆ ವೇಳೆಯಲ್ಲಿ ಕಂಡುಬಂದ ನಂತರ ಪ್ರಮುಖ ಗುತ್ತಿಗೆ ತಯಾರಿಕಾ ಕಂಪನಿಯಾದ ವಿಸ್ಟ್ರಾನ್ ನೊಂದಿಗೆ  ಹೆಚ್ಚಿನ ವ್ಯವಹಾರವನ್ನು ನಿಲ್ಲಿಸಿದ್ದು, ಅದನ್ನುಪರೀಕ್ಷಣೆಗೆ ಒಳಪಡಿಸಲಾಗಿದೆ ಎಂದು ತಂತ್ರಜ್ಞಾನ ದೈತ್ಯ

ಬೆಂಗಳೂರು: ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಕಾರ್ಮಿಕರಿಗೆ ವೇತನ ಪಾವತಿಯಲ್ಲಿ ವಿಳಂಬ ಮತ್ತು ಅದರ ಪೂರೈಕೆದಾರರ ಸಂಹಿತೆಯಲ್ಲಿ ಉಲ್ಲಂಘನೆಯಾಗಿರುವುದು ಪ್ರಾಥಮಿಕ ತನಿಖೆ ವೇಳೆಯಲ್ಲಿ ಕಂಡುಬಂದ ನಂತರ ಪ್ರಮುಖ ಗುತ್ತಿಗೆ ತಯಾರಿಕಾ ಕಂಪನಿಯಾದ ವಿಸ್ಟ್ರಾನ್ ನೊಂದಿಗೆ  ಹೆಚ್ಚಿನ ವ್ಯವಹಾರವನ್ನು ನಿಲ್ಲಿಸಿದ್ದು, ಅದನ್ನುಪರೀಕ್ಷಣೆಗೆ ಒಳಪಡಿಸಲಾಗಿದೆ ಎಂದು ತಂತ್ರಜ್ಞಾನ ದೈತ್ಯ ಸಂಸ್ಥೆ ಆ್ಯಪಲ್ ತಿಳಿಸಿದೆ.

ಬೆಂಗಳೂರು ಹೊರವಲಯ ನರಸಾಪುರದಲ್ಲಿನ ಐಫೋನ್ ಕಾರ್ಖಾನೆಯಲ್ಲಿ ನಷ್ಟದಿಂದಾಗಿ ಕೆಲ ಕಾರ್ಮಿಕರ ವೇತನ ಪಾವತಿಯಲ್ಲಿ ವಿಳಂಬ ಹಾಗೂ ಕಡಿತಗೊಳಿಸಲಾಗಿದೆ ಎಂಬುದನ್ನು ವಿಸ್ಟ್ರಾನ್ ಒಪ್ಪಿಕೊಂಡಿದೆ. ಅಲ್ಲದೇ ವಿಸ್ಟ್ರಾನ್ ತನ್ನ ಭಾರತದ ಉಪಾಧ್ಯಕ್ಷ ವಿನ್ಸೆಂಟ್ ಲೀ ಅವರನ್ನು ವಜಾಗೊಳಿಸಿದ್ದು, ತಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳವುದಾಗಿ ತಿಳಿಸಿದೆ. 

ವಿಸ್ಟ್ರನ್ ಜೊತೆಗಿನ ಒಪ್ಪಂದವನ್ನು ಆ್ಯಪಲ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸಾಧ್ಯತೆ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಗುರುವಾರ ವರದಿ ಪ್ರಕಟವಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದ ನಂತರ ಮತ್ತೊಂದು ಗುತ್ತಿಗೆದಾರರ ಪೂರೈಕೆ ಕಂಪನಿ ಚೀನಾದ ಪೆಗಾಟ್ರಾನ್ ಕಂಪನಿಯನ್ನು ಸಹ ಕಳೆದ ತಿಂಗಳು  ಪರೀಕ್ಷಣೆಗೆ ಆ್ಯಪಲ್ ಗುರಿಪಡಿಸಿತ್ತು. ವಿದ್ಯಾರ್ಥಿ ಕೆಲಸಗಾರರ ವಿಚಾರದಲ್ಲಿ ಉಲ್ಲಂಘನೆಯಾದದ್ದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದ ನಂತರ ಈ ಕ್ರಮ ಕೈಗೊಳ್ಳಲಾಗಿತ್ತು.

ತನಿಖೆಗಳು ನಡೆಯುತ್ತಿರುವಾಗ ಸರಿಯಾದ ಕೆಲಸದ ಸಮಯ ನಿರ್ವಹಣಾ ಪ್ರಕ್ರಿಯೆಗಳನ್ನು ಕಾರ್ಯಗತಗೊಳಿಸಲು ವಿಫಲವಾಗುವ ಮೂಲಕ ಪೂರೈಕೆದಾರರ ನೀತಿ ಸಂಹಿತೆಯ ಉಲ್ಲಂಘನೆಯಾಗಿರುವುದು ಪ್ರಾಥಮಿಕ ಅಂಶಗಳಿಂದ ತಿಳಿದುಬಂದಿದೆ. ಇದು ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಕೆಲ ಕಾರ್ಮಿಕರ ವೇತನ ಪಾವತಿಯಲ್ಲಿ ವಿಳಂಬಕ್ಕೆ ಕಾರಣವಾಗಿದೆ ಎಂದು ತಂತ್ರಜ್ಞಾನ ದೈತ್ಯ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಈ ಸಮಸ್ಯೆಯನ್ನು ಬಗೆಹರಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು, ವಿಸ್ಟ್ರಾನ್ ನ್ನು ಪರೀಕ್ಷಣೆಗೊಳಪಡಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವವರೆಗೂ ಆ್ಯಪಲ್ ನಿಂದ ಹೊಸ ವ್ಯವಹಾರವನ್ನು ಅವರು ಪಡೆದುಕೊಳ್ಳುವುದಿಲ್ಲ, ಅವರ ಪ್ರಗತಿಯನ್ನು ಆ್ಯಪಲ್ ನೌಕರರು, ಆಡಿಟರ್ ಗಳು  ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ಆ್ಯಪಲ್ ಹೇಳಿದೆ.

ಈ ಮಧ್ಯೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಪತ್ರ ಬರೆದಿದ್ದು, ಕೆಲಸಗಾರರಿಗೆ ವೇತನ ಪಾವತಿಸದ ವಿಸ್ಟ್ರಾನ್ ಕಂಪನಿಯನ್ನು ದೂಷಿಸಿದೆ. ನೌಕರರು ಕೆಲಸಕ್ಕೆ ಹಾಜರಾಗಿದ್ದರೂ ಕೆಲ ದಿನಗಳವರೆಗೆ ಗೈರು ಹಾಜರಿಯನ್ನು ತೋರಿಸಲಾಗಿದೆ. ಸೂಕ್ತ ಸಂದರ್ಭದಲ್ಲಿ ಅವರಿಗೆ ನೀಡಿಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Related Stories

No stories found.

Advertisement

X
Kannada Prabha
www.kannadaprabha.com