ಪಲ್ಸ್ ಪೊಲಿಯೋ ಅಭಿಯಾನದ ಮೇಲೆ ಕೋವಿಡ್-19 ಕರಿನೆರಳು

ಕಳೆದ 25 ವರ್ಷಗಳಿಂದ ಪ್ರತಿ ವರ್ಷ ಸುಮಾರು 17 ಕೋಟಿ ರು ಮಕ್ಕಳಿಗೆ ರಾಜ್ಯ ಮತ್ತು ಕೇಂದ್ರ ಆರೋಗ್ಯ ಇಲಾಖೆ ಪಲ್ಸ್ ಪೊಲಿಯೋ ಲಸಿಕೆಯನ್ನು ನೀಡುತ್ತಾ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ 25 ವರ್ಷಗಳಿಂದ ಪ್ರತಿ ವರ್ಷ ಸುಮಾರು 17 ಕೋಟಿ ರು ಮಕ್ಕಳಿಗೆ ರಾಜ್ಯ ಮತ್ತು ಕೇಂದ್ರ ಆರೋಗ್ಯ ಇಲಾಖೆ ಪಲ್ಸ್ ಪೊಲಿಯೋ ಲಸಿಕೆಯನ್ನು ನೀಡುತ್ತಾ ಬಂದಿದೆ.

ಮುಂದಿನ ಜನವರಿ 17 ಕ್ಕೆ ಪಲ್ಸ್ ಪೊಲೀಯೋ ಲಸಿಕಾ ಕಾರ್ಯಕ್ರಮ ನಿಗದಿಯಾಗಿದೆ, ಆದರೆ ಕೊರೋನಾ ಕಾರಣದಿಂದಾಗಿ ತಜ್ಞರು ಮುಂದೆ ಎದುರಾಗುವ ಸವಾಲುಗಳ ಬಗ್ಗೆ ಆತಂಕಕ್ಕೀಡಾಗಿದ್ದಾರೆ.  ಆದರೆ ಕೊರೋನಾ ಮುಂಜಾಗ್ರತಾ ಕ್ರಮ ಕೈಗೊಂಡು ಪಲ್ಸ್ ಪೊಲಿಯೋ ಲಸಿಕೆ ಕಾರ್ಯಕ್ರಮ ನಡೆಸುವುದಾಗಿ ಸರ್ಕಾರ ಭರವಸೆ ನೀಡಿದೆ.

ಸಮೀಕ್ಷೆಗಳು, ಕಾಂಟ್ರಾಕ್ಟ್ ಟ್ರೇಸಿಂಗ್ ಮತ್ತು ಕೌನ್ಸೆಲಿಂಗ್ ಮೂಲಕ ಮಾರ್ಚ್‌ನಿಂದ SARS-CoV-2 ಹರಡುವುದನ್ನು ನಿಭಾಯಿಸುವಲ್ಲಿ ಮುಂಚೂಣಿಯಲ್ಲಿರುವವರು - ರೋಗನಿರೋಧಕ ಶಿಬಿರಗಳಿಗೆ ಭೇಟಿ ನೀಡುವ ತಾಯಂದಿರು ಮತ್ತು ಐದು ವರ್ಷದೊಳಗಿನ ಮಕ್ಕಳಿಗೆ ಅಪಾಯದ ಬಗ್ಗೆ ಆಶಾ ಕಾರ್ಯಕರ್ತರು ಕಾಳಜಿ ವಹಿಸಬೇಕಾಗಿದೆ.

ಈ ವರ್ಷ ಪಲ್ಸ್ ಪೊಲಿಯೋ ಕಾರ್ಯಕ್ರಮದ  ಬಗ್ಗೆ ನಾವು ಖಂಡಿತವಾಗಿ ಕಾಳಜಿ ವಹಿಸುತ್ತೇವೆ. ಕೊರೋನಾ ಪಾಸಿಟಿವ್ ಇರುವ ಅನೇಕ ಮನೆಗಳು ಇರಬಹುದು ಹೀಗಾಗಿ ನಾವು ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ.

ಸರಿಯಾದ ಮಾರ್ಗಸೂಚಿಗಳನ್ನು ಹೊರಡಿಸಿ ಮತ್ತು ಅನುಸರಿಸಲು ರಾಜ್ಯ ಸರ್ಕಾರ ಖಚಿತಪಡಿಸಿದರೆ ನಾವು  ಅದನ್ನು ಫಾಲೋ ಮಾಡುತ್ತೇವೆ ಎಂದು ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ರಮಾ ತಿಳಿಸಿದ್ದಾರೆ. ಕೋವಿಡ್ -19 ಅನ್ನು ನಿಭಾಯಿಸಲು ಆಶಾ ಕಾರ್ಯಕರ್ತೆರು  ತೆಗೆದುಕೊಂಡ ಅಪಾಯಗಳು ಮತ್ತು ಸೇವೆಗಳಿಗೆ ಬಾಕಿ ಸಿಗದಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ದೊಡ್ಡ  ಮಟ್ಟದ ರೋಗನಿರೋಧಕ ಶಿಬಿರಗಳನ್ನು ಈಗ ನಡೆಸಬಹುದೇ ಎಂದು ತರ ಆರೋಗ್ಯ ಕಾರ್ಯಕರ್ತರು ಪ್ರಶ್ನೆ ಎತ್ತಿದ್ದಾರೆ. ದೊಡ್ಡ ಶಿಬಿರಗಳು ಈ ಸಮಯದಲ್ಲಿ  ಸೂಕ್ತವಲ್ಲ ಮತ್ತು ಮಕ್ಕಳನ್ನು ಅಲ್ಲಿಗೆ ಕರೆತರುವುದು ಅಪಾಯಕಾರಿ. ಆ ಆದ್ದರಿಂದ ನಾವು ಲಸಿಕೆ ನೀಡಲು ವೈಯಕ್ತಿಕ ರಕ್ಷಣಾ ಸಾಧನಗಳನ್ನು ಧರಿಸಿದ ಮನೆಗಳಿಗೆ ಭೇಟಿ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.

"ರೋಗನಿರೋಧಕ ಸೇವೆಗಳು ಮತ್ತು ಇತರ ತಾಯಿ-ಮಕ್ಕಳ ಸಂಬಂಧಿತ ಯೋಜನೆಗಳು ರಾಜ್ಯದ ಅನೇಕ ಭಾಗಗಳಲ್ಲಿ ವಿನಾಶದ ಅಂಚು ಸೇರಿವೆ, ನಾವು ಏನನ್ನೂ ಮಾಡಲು ಸಾಧ್ಯವಿಲ್ಲ ಆದರೆ ಪೋಲಿಯೊ ಹನಿಗಳನ್ನು ತೆಗೆದುಕೊಳ್ಳಲು ಜನರು ಮುಂದೆ ಬರಲು ನಾವು ಪ್ರೋತ್ಸಾಹಿಸುತ್ತೇವೆ. ಇದು ಬಹಳ ಮುಖ್ಯ,ಎಂದು  ಮಕ್ಕಳ ತಜ್ಞ ವಿ ಗೋಪಾಲ ಕೃಷ್ಣ   ಹೇಳಿದ್ದಾರೆ. 

ವಿಶ್ವ ಆರೋಗ್ಯ ಸಂಸ್ಥೆ 2014 ರಲ್ಲಿ ಭಾರತವನ್ನು ಪೋಲಿಯೋ ಮುಕ್ತ ಎಂದು ಘೋಷಿಸಿತು, ಆದರೆ ಪ್ರತಿ ವರ್ಷ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳ ರೋಗನಿರೋಧಕ ಶಕ್ತಿಯನ್ನು ಮುಂದುವರೆಸುವುದು ಅನಿವಾರ್ಯ ಎಂದು ಹೇಳಿದ್ದಾರೆ.

ಆದಾಗ್ಯೂ, ಆರೋಗ್ಯ ರಕ್ಷಣೆ ಯೋಜನೆಗಳನ್ನು ನಡೆಸಲು ಬಳಸುವ ಜನಸಂಖ್ಯೆ ಆಧಾರಿತ ಘಟಕಗಳನ್ನು ಪರಿಷ್ಕರಿಸಬೇಕು ಎಂದು ಹಿರಿಯ ಸಾರ್ವಜನಿಕ ಆರೋಗ್ಯ ತಜ್ಞರು ಹೇಳಿದ್ದಾರೆ. ರಾಜ್ಯ ಆರೋಗ್ಯ ಇಲಾಖೆ ಜಾಗೃತಿ ಅಭಿಯಾನಗಳನ್ನು ಪ್ರಾರಂಭಿಸಬೇಕು ಮತ್ತು ಆರೋಗ್ಯ ಕಾರ್ಯಕರ್ತರನ್ನು ಮೊದಲೇ ಸಜ್ಜುಗೊಳಿಸಬೇಕು. ಅಂತಹ ರೋಗನಿರೋಧಕ ಕಾರ್ಯಕ್ರಮಗಳ ಕೇಂದ್ರಬಿಂದುವಾಗಿ ವಲಸಿಗರು ಮತ್ತು ಕೊಳೆಗೇರಿಗಳಲ್ಲಿ ವಾಸಿಸುವವರ ಬಗ್ಗೆ ಗಮನ ಹರಿಸಬೇಕು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com