ಕಳೆದ 9 ತಿಂಗಳಲ್ಲಿ ಕರ್ನಾಟಕದಲ್ಲಿ 2,401.52 ಟನ್ ಕೋವಿಡ್-19 ತ್ಯಾಜ್ಯ ಉತ್ಪತ್ತಿ!

ಮಾರ್ಚ್ ತಿಂಗಳಲ್ಲಿ ಕೋವಿಡ್-19 ಸೋಂಕು ಲಗ್ಗೆಯಿಟ್ಟ ಮೇಲೆ ಕೊರೋನಾ ರೋಗಿಗಳ ಚಿಕಿತ್ಸೆ, ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್, ಔಷಧೋಪಚಾರದ ತ್ಯಾಜ್ಯ ವಸ್ತುಗಳೆಲ್ಲಾ ಸೇರಿ ಇಲ್ಲಿಯವರೆಗೆ 2 ಸಾವಿರದ 401.52 ಟನ್ ಗಳನ್ನು ಕೋವಿಡ್ ಬಯೊಮೆಡಿಕಲ್ ತ್ಯಾಜ್ಯ ಉತ್ಪತ್ತಿಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಾರ್ಚ್ ತಿಂಗಳಲ್ಲಿ ಕೋವಿಡ್-19 ಸೋಂಕು ಲಗ್ಗೆಯಿಟ್ಟ ಮೇಲೆ ಕೊರೋನಾ ರೋಗಿಗಳ ಚಿಕಿತ್ಸೆ, ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್, ಔಷಧೋಪಚಾರದ ತ್ಯಾಜ್ಯ ವಸ್ತುಗಳೆಲ್ಲಾ ಸೇರಿ ಇಲ್ಲಿಯವರೆಗೆ 2 ಸಾವಿರದ 401.52 ಟನ್ ಗಳನ್ನು ಕೋವಿಡ್ ಬಯೊಮೆಡಿಕಲ್ ತ್ಯಾಜ್ಯ ಉತ್ಪತ್ತಿಯಾಗಿದೆ.

ಇವುಗಳನ್ನೆಲ್ಲಾ ವೈಜ್ಞಾನಿಕ ಮಾದರಿಯಲ್ಲಿ ದಹಿಸಲಾಗಿದೆ ಇಲ್ಲವೇ ಮಣ್ಣಿನೊಳಗೆ ಹೂತು ಹಾಕಲಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಪಿಎಸ್ ಬಿ) ಅಂಕಿಅಂಶ ಪ್ರಕಾರ, 2,401.52 ಟನ್ ಗಳಷ್ಟು ತ್ಯಾಜ್ಯಗಳು ಉತ್ಪತ್ತಿಯಾದುದ್ದರಲ್ಲಿ 2,400.83 ಟನ್ ಗಳಷ್ಟು ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ. 

ಕೋವಿಡ್ ತ್ಯಾಜ್ಯವನ್ನು ಸುಡುವ ಪ್ರಕ್ರಿಯೆಯನ್ನು ಡ್ಯುಯಲ್ ಚೇಂಬರ್ ದಹನಕಾರಕದಲ್ಲಿ ನಡೆಸಲಾಗುತ್ತದೆ, ಅಲ್ಲಿ ತಾಪಮಾನವನ್ನು 850 ಡಿಗ್ರಿ ಸೆಂಟಿಗ್ರೇಡ್ ಮತ್ತು 1,050 ಡಿಗ್ರಿ ಸೆಂಟಿಗ್ರೇಡ್ ನಡುವೆ ನಿರ್ವಹಿಸಲಾಗುತ್ತದೆ.'ಸ್ಕ್ರಬ್ಬಿಂಗ್' ಎಂಬ ಪ್ರಕ್ರಿಯೆಯ ಮೂಲಕ ಹೊಗೆಯನ್ನು ಶುದ್ಧೀಕರಿಸಲು ಹೆಚ್ಚುವರಿ ಮುನ್ನೆಚ್ಚರಿಕೆ ವಹಿಸಲಾಗುತ್ತದೆ, ನಂತರ 30 ಮೀಟರ್ ಎತ್ತರದಲ್ಲಿ ಚಿಮಣಿ ಮೂಲಕ ಹೊಗೆಯನ್ನು ವಾತಾವರಣಕ್ಕೆ ಬಿಡುಗಡೆ ಮಾಡಲಾಗುತ್ತದೆ.

ಕರ್ನಾಟಕದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಕೋವಿಡ್-19 ತ್ಯಾಜ್ಯ ಉತ್ಪತ್ತಿಯಾಗಿದ್ದು 476 ಟನ್ ಗಳಷ್ಟಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಅತಿ ಕಡಿಮೆ 7.1 ಟನ್ ಗಳಷ್ಟು ಉತ್ಪತ್ತಿಯಾಗಿದೆ. ಚಿಕ್ಕಬಳ್ಳಾಪುರ ಮತ್ತು ರಾಮನಗರಗಳಲ್ಲಿ ಕ್ರಮವಾಗಿ 8.1 ಟನ್ ಹಾಗೂ 10.7 ಟನ್ ಗಳಷ್ಟು ತ್ಯಾಜ್ಯ ಕಳೆದ ನವೆಂಬರ್ ವರೆಗೆ ಉತ್ಪತ್ತಿಯಾಗಿದೆ. ನವೆಂಬರ್ ನಂತರ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಇಳಿಮುಖಗೊಂಡ ನಂತರ ತ್ಯಾಜ್ಯಗಳು ಕೂಡ ಕಡಿಮೆಯಾಗಿದೆ. ನವೆಂಬರ್ 7ರಂದು ರಾಜ್ಯದಲ್ಲಿ ಕೋವಿಡ್ ತ್ಯಾಜ್ಯಗಳು ರಾಜ್ಯದಲ್ಲಿ ಉತ್ಪತ್ತಿಯಾಗಿದ್ದು 595 ಕೆಜಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com