ಇಂಧನ ಉಳಿತಾಯ: ವಿಜಯಪುರ ಕೆ.ಎಸ್. ಆರ್. ಟಿ. ಸಿ ಘಟಕ ದೇಶಕ್ಕೆ ಮಾದರಿ

 ದೇಶದಲ್ಲೇ ಅತೀ ಹೆಚ್ಚಿನ  ಇಂಧನ (ಡಿಸೇಲ್) ಉಳಿತಾಯ ಮಾಡಿದ ಕೀರ್ತಿ ವಿಜಯಪುರ ಕೆ ಎಸ್ ಆರ್ ಟಿ ಸಿ ವಿಭಾಗಕ್ಕೆ ಸಂದಿದೆ.
ಬಸ್
ಬಸ್

ವಿಜಯಪುರ: ದೇಶದಲ್ಲೇ ಅತೀ ಹೆಚ್ಚಿನ  ಇಂಧನ (ಡಿಸೇಲ್) ಉಳಿತಾಯ ಮಾಡಿದ ಕೀರ್ತಿ ವಿಜಯಪುರ ಕೆ ಎಸ್ ಆರ್ ಟಿ ಸಿ ವಿಭಾಗಕ್ಕೆ ಸಂದಿದೆ. ಈ ಹಿನ್ನಲೆಯಲ್ಲಿ ಪಿ.ಸಿ.ಆರ್.ಎ ಸಂಸ್ಥೆಯಿಂದ ಕೊಡ ಮಾಡುವ ಪ್ರಶಸ್ತಿಯನ್ನು ಈಶಾನ್ಯ ರಾಜ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪಡೆದುಕೊಂಡಿದೆ.‌ಇದರಲ್ಲಿ ವಿಜಯಪುರ ವಿಭಾಗೀಯ ಕಚೇರಿಗಳು ಡಿಸೇಲ್ ಉಳಿತಾಯ ಮಾಡಿ ರಾಜ್ಯಕ್ಕೆ ಮಾತ್ರವಲ್ಲ ದೇಶದಲ್ಲೇ ಪ್ರಥಮ‌ ಸ್ಥಾನ ಪಡೆದುಕೊಂಡಿದೆ.

ವಿಜಯಪುರ ‌ಜಿಲ್ಲೆಯದ್ದೇ ಮೂರು ಡಿಪೋಗಳು ಕಡಿಮೆ ಇಂಧನ  ಬಳಸಿ ಹೆಚ್ಚು ಮೈಲೇಜ್ ಪಡೆಯುವಲ್ಲಿಯೂ ಹೆಸರು ಪಡೆದು ಪ್ರಥಮ, ದ್ವೀತಿಯ, ಮತ್ತು ತೃತಿಯ ಬಹುಮಾನಗಳನ್ನು ಈ ಸಾರಿಗೆ ಘಟಕ ಪಡೆದುಕೊಂಡಿದೆ.  

ಈ ಕುರಿತು ಮಾತನಾಡಿದ ವಿಜಯಪುರ ಕೆ ಎಸ್ ಆರ್ ಟಿ ಸಿ‌ ವ್ಯವಸ್ಥಾಪಕ  ನಾರಾಯಣಪ್ಪ ಕುರುಬರ, ಕೊರೋನಾದಿಂದಾಗಿ ಸುಮಾರು ತಿಂಗಳಿನಿಂದ ಘಟಕ ನಷ್ಟದಲ್ಲಿತ್ತು. ನವೆಂಬರ್ ತಿಂಗಳಲ್ಲಿ ಚೇತರಿಕೆ ಕಂಡು ವಿಜಯಪುರ ಘಟಕಕ್ಕೆ 19 ಕೋಟಿ 17 ಲಕ್ಷ ರೂಪಾಯಿ ಆದಾಯ ಬಂದಿದೆ.

ಲಾಕ್ ಡೌನ್ ಸಮಯದಲ್ಲಿ 1 ಕಿಮೀ ಗೆ 24 ರೂಪಾಯಿ 13 ಪೈಸೆ ಆದಾಯ ಬರುತ್ತಿತ್ತು ಸದ್ಯ ಹೆಚ್ಚಳವಾಗಿ ಪ್ರತಿ ಕಿಲೋಮೀಟರ್ ಆದಾಯ 31 ರೂಪಾಯಿ 20 ಪೈಸೆಗೆ ಏರಿಕೆಯಾಗುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com