ವಿವಾದ ಸಂಬಂಧ ರೈತರು ನ್ಯಾಯಾಲಯಕ್ಕೆ ಹೋಗಬಹುದು: ನಳಿನ್ ಕುಮಾರ್ ಕಟೀಲ್

ಯಾವುದೇ ತರಹದ ವಿವಾದಗಳನ್ನು ಬಗೆಹರಿಸಲು ರೈತರಿಗೆ ನ್ಯಾಯಾಲಯಕ್ಕೆ ಹೋಗುವ ಅವಕಾಶ ಇರಲಿದೆ. ರಾಜ್ಯಗಳಿಗೆ ಕೃಷಿ ಒಪ್ಪಂದಗಳನ್ನು ನೋಂದಣಿ ಮಾಡಿಕೊಳ್ಳುವ ಅಧಿಕಾರವಿರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಯಾವುದೇ ತರಹದ ವಿವಾದಗಳನ್ನು ಬಗೆಹರಿಸಲು ರೈತರಿಗೆ ನ್ಯಾಯಾಲಯಕ್ಕೆ ಹೋಗುವ ಅವಕಾಶ ಇರಲಿದೆ. ರಾಜ್ಯಗಳಿಗೆ ಕೃಷಿ ಒಪ್ಪಂದಗಳನ್ನು ನೋಂದಣಿ ಮಾಡಿಕೊಳ್ಳುವ ಅಧಿಕಾರವಿರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಇದರಿಂದ, ಗ್ರಾಹಕ ಮತ್ತು ರೈತರಿಬ್ಬರೂ ಕಾನೂನಿನ ಚೌಕಟ್ಟಿನೊಳಗೇ ವ್ಯವಹರಿಸುವುದು ಸಾಧ್ಯವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಅನೇಕ ರಾಜ್ಯಗಳು ಈಗಾಗಲೇ ಗುತ್ತಿಗೆ ಕೃಷಿಯನ್ನು ಅನುಮೋದಿಸಿವೆ. ಅನೇಕ ರಾಜ್ಯಗಳು ಕಾಂಟ್ರಾಕ್ಟ್ ಫಾರ್ಮಿಂಗ್ ಕಾನೂನುಗಳನ್ನು ಸಹ ಹೊಂದಿದ್ದು, ಕೇಂದ್ರ ಸರಕಾರದ ವತಿಯಿಂದ ಸ್ಥೂಲವಾಗಿ ಗುತ್ತಿಗೆ ಕೃಷಿ ಮತ್ತು ಕಾನೂನುಗಳನ್ನು ಅಧ್ಯಯನ ಮಾಡಿಯೇ, ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com