ಬೆಂಗಳೂರು: ಕೀನ್ಯಾದ ಇಬ್ಬರು ವ್ಯಕ್ತಿಗಳ ಬಂಧನ, 55 ಲಕ್ಷ ಮೌಲ್ಯದ ಕೊಕೇನ್ ವಶ

ಖಚಿತ ಮಾಹಿತಿ ಆಧಾರದ ಮೇಲೆ ನಗರದಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಜಾಲದ ಮೇಲೆ ದಾಳಿ ನಡೆಸಿದ ನಾರ್ಕೋಟಿಕ್ಸ್  ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಅಧಿಕಾರಿಗಳು 610 ಗ್ರಾಮ್ ತೂಕದ 3000 ಎಂಡಿಎಂಎ ಮಾತ್ರೆಗಳು ಮತ್ತು 235 ಗ್ರಾಮ್ ಕೊಕೋನ್ ನ್ನು ವಶಪಡಿಸಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಖಚಿತ ಮಾಹಿತಿ ಆಧಾರದ ಮೇಲೆ ನಗರದಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಜಾಲದ ಮೇಲೆ ದಾಳಿ ನಡೆಸಿದ ನಾರ್ಕೋಟಿಕ್ಸ್  ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಅಧಿಕಾರಿಗಳು 610 ಗ್ರಾಮ್ ತೂಕದ 3000 ಎಂಡಿಎಂಎ ಮಾತ್ರೆಗಳು ಮತ್ತು 235 ಗ್ರಾಮ್ ಕೊಕೋನ್ ನ್ನು ವಿದೇಶಿ ಪೋಸ್ಟ್ ಆಫೀಸ್ ನಿಂದ ವಶಪಡಿಸಿಕೊಂಡಿದ್ದಾರೆ ಎಂದು ಎನ್ ಸಿಬಿ ಬೆಂಗಳೂರು ವಲಯ ಘಟಕದ ನಿರ್ದೇಶಕ ಅಮಿತ್ ಗಾವಟೆ ತಿಳಿಸಿದ್ದಾರೆ.

ಹೆಚ್ಚು ವ್ಯಸನಕಾರಿ ಉತ್ತೇಜಕ ಔಷಧಿಯ ಮಾರುಕಟ್ಟೆಯ ಮೌಲ್ಯ 55 ಲಕ್ಷ ರೂ. ಆಗಿದೆ. ಎನ್ ಡಿಪಿಎಸ್ ಕಾಯ್ದೆಯಡಿ ಕಿನ್ಯಾದ ಇಬ್ಬರು ಪ್ರಜೆಗಳನ್ನು ಬಂಧಿಸಲಾಗಿದೆ. ರಾಮ್ಲಾ ಶೆಡಾಫಾ ನ್ಯಾನ್ಸಿ ಮತ್ತು ಎಮ್ಯಾನುಯೆಲ್ ಮೈಕೆಲ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳಾಗಿ ಪ್ರವಾಸ ವೀಸಾ ಆಧಾರದ ಮೇಲೆ ಭಾರತಕ್ಕೆ ಬಂದಿದ್ದ ಈ ಇಬ್ಬರೂ, ನಿಷೇಧಿತ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿರುವುದು ಕಂಡುಬಂದಿದ್ದು, ಅವರ ಪಾಸ್ ಪೋರ್ಟ್ ನ್ನು ಎನ್ ಸಿಬಿ ವಶಕ್ಕೆ ಪಡೆದುಕೊಂಡಿದೆ. ಪ್ರಾಥಮಿಕವಾಗಿ ನಕಲಿ ಎಂಬುದು ತೋರಿಸುತ್ತಿದೆ. ಇವರನ್ನು ಬೆನ್ನಟ್ಟಿದ್ದಾಗ ವಿಚಾರಣಾಧಿಕಾರಿ ಸುನೀಲ್ ಪರೆವಾ ಗಾಯಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಪ್ರಾಥಮಿಕ ವಿಚಾರಣೆ ಪ್ರಕಾರ ಎಂಡಿಎಂಎ ಮಾತ್ರೆಗಳು ನೆದರ್ ಲ್ಯಾಂಡ್ ನಿಂದ  ಬೆಂಗಳೂರಿಗೆ ಕಳ್ಳಸಾಗಣೆ ಮೂಲಕ ಪೂರೈಸಲಾಗಿತ್ತು. ನಂತರ ಡಿಸೆಂಬರ್ 10 ರಂದು ಪಾರ್ಸೆಲ್ ಸಂಗ್ರಹಿಸಲು ಬಂದ  ನ್ಯಾನ್ಸಿ ಹಾಗೂ ಮೈಕೆಲ್ ನನ್ನು ಬಂಧಿಸಲಾಯಿತು. ಆರೋಪಿಗಳ ಮುಂದಿನ ವಿಚಾರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com