ಹೊಸ ಸ್ವರೂಪದ ಕೊರೋನಾ ವೈರಸ್ ಆತಂಕ: ಧಾರವಾಡ ಜಿಲ್ಲೆಯಲ್ಲಿ ಬ್ರಿಟನ್‍ನಿಂದ ಆಗಮಿಸಿದ ಐವರಿಗೆ ಕ್ವಾರಂಟೈನ್‍ 

ಬ್ರಿಟನ್‌ನಿಂದ ಆಗಮಿಸಿದ ಐವರು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಧಾರವಾಡ ಜಿಲ್ಲೆಯ ಅಧಿಕಾರಿಗಳು ಸೋಮವಾರ ಗೃಹ ಸಂಪರ್ಕತಡೆಗೆ ಕಳುಹಿಸಿದ್ದಾರೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹುಬ್ಬಳ್ಳಿ: ಬ್ರಿಟನ್‌ನಿಂದ ಆಗಮಿಸಿದ ಐವರು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಧಾರವಾಡ ಜಿಲ್ಲೆಯ ಅಧಿಕಾರಿಗಳು ಸೋಮವಾರ ಗೃಹ ಸಂಪರ್ಕತಡೆಗೆ ಕಳುಹಿಸಿದ್ದಾರೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆದರೂ, ಬ್ರಿಟನ್‍ ನಿಂದ ಈ ಐವರು ಪ್ರಯಾಣಿಕರು ಯಾವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಆಗಮಿಸಿದ್ದಾರೆ ಎಂಬ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ.

ಎಲ್ಲಾ ಐವರು ಪ್ರಯಾಣಿಕರಿಂದ ಗಂಟಲು ಧ್ರವ ಸಂಗ್ರಹಿಸಿ ಕೋವಿಡ್ -19 ಪರೀಕ್ಷೆಗೆ ಕಳುಹಿಸಲಾಗಿದೆ. ಐದು ಮಾದರಿಗಳ ಪೈಕಿ ಒಂದರ ಪರೀಕ್ಷಾ ವರದಿಯನ್ನು ಪಡೆಯಲಾಗಿದ್ದು, ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಉಳಿದ ನಾಲ್ಕು ಮಾದರಿಗಳ ವರದಿಯನ್ನು ಕಾಯಲಾಗುತ್ತಿದೆ. ಪರೀಕ್ಷಾ ವರದಿಗಳಿಗೆ ಅನುಗುಣವಾಗಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಬ್ರಿಟನ್ ನಿಂದ ಬಂದವರಿಗೆ ಕ್ವಾರಂಟೈನ್
ಬ್ರಿಟನ್‌ ನಲ್ಲಿ ರೂಪಾಂತರಗೊಂಡ ಕೊರೋನ ವೈರಸ್ ಮತ್ತೊಂದು ಸುತ್ತಿನ ಕೋವಿಡ್ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಬ್ರಿಟನ್ ನಿಂದ ಮಂಗಳೂರು ಮತ್ತು ಉಡುಪಿಗೆ ಬಂಧವರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿಡಲಾಗಿದೆ.

ಬ್ರಿಟನ್‌ನಿಂದ‌ 15 ಮಂದಿ ನಗರಕ್ಕೆ ಬಂದಿದ್ದು, ಎಲ್ಲರೂ‌ ಕೋವಿಡ್‌ ನೆಗೆಟಿವ್ ಪ್ರಮಾಣಪತ್ರ ಹೊಂದಿದ್ದಾರೆ. ಆದಾಗ್ಯೂ ಅವರನ್ನು ಮತ್ತೊಮ್ಮೆ‌ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು‌ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ‌ ತಿಳಿಸಿದ್ದಾರೆ.

ಬ್ರಿಟನ್ ಹಾಗೂ ಇತರ ದೇಶಗಳಿಂದ ಉಡುಪಿ ಜಿಲ್ಲೆಗೆ ಬಂದ ಎಂಟು ಮಂದಿಯನ್ನು ಇಂದು ಪರೀಕ್ಷೆಗೊಳಪಡಿಸಿದ್ದು, ಎಲ್ಲರನ್ನೂ ಸದ್ಯ ಹೋಮ್ ಕ್ವಾರಂಟೈನ್‌ ನಲ್ಲಿರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com