ಆನ್ ಲೈನ್ ಲೋನ್ ಆ್ಯಪ್ ಕಂಪನಿಗಳ ವಿರುದ್ಧ ಎಫ್ಐಆರ್

ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿದ್ದ ಮೂರು ಆನ್ಲೈನ್ ಲೋನ್ ಆ್ಯಪ್ ಕಂಪನಿಗಳ ವಿರುದ್ಧ ಸಿಸಿಬಿ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
ಆನ್ ಲೈನ್ ಲೋನ್ ಆ್ಯಪ್ ಕಂಪನಿಗಳ ವಿರುದ್ಧ ಎಫ್ಐಆರ್

ಬೆಂಗಳೂರು: ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿದ್ದ ಮೂರು ಆನ್ಲೈನ್ ಲೋನ್ ಆ್ಯಪ್ ಕಂಪನಿಗಳ ವಿರುದ್ಧ ಸಿಸಿಬಿ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆಲವು ಆನ್ಲೈನ್ ಲೋನ್ ಆ್ಯಪ್ ಗಳು ಆರ್ ಬಿಐ ನಿಯಮ ಉಲ್ಲಂಘಿಸಿ ಮುಂಗಡ ಹಣ ಸಾಲ ನೀಡುತ್ತಿದ್ದವು. ಮರುಪಾವತಿ ವೇಳೆ ಗ್ರಾಹಕರಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿತ್ತು. ಅಲ್ಲದೇ ಗ್ರಾಹಕರ ಕಾಂಟ್ಯಾಕ್ಟ್ಸ್, ಫೋಟೋ ದುರ್ಬಳಕೆ ಬಗ್ಗೆ ದೂರುಗಳು ಕೇಳಿ ಬಂದಿದ್ದವು.

ಈ ರೀತಿಯ ಆ್ಯಪ್ ಗಳಿಂದ ಕಿರುಕುಳವಿದ್ದರೆ, ದೂರು ನೀಡುವಂತೆ ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸಾರ್ವಜನಿಕರಿಗೆ ಟ್ವಿಟರ್ ಮೂಲಕ ಸೂಚನೆ ನೀಡಿದ್ದಾರೆ. ದೂರು ಬಂದ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com