ಬೆಂಗಳೂರು: ಬ್ರಿಟನ್ ನಲ್ಲಿ ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆಯಾಗಿ, ಬ್ರಿಟನ್ ನಿಂದ ಬರುವ ಪ್ರಯಾಣಿಕರಿಗೆ ಕೆಲವು ಮಾರ್ಗಸೂಚಿಗಳನ್ನು ವಿಧಿಸಲಾಗಿದೆ.
ಬ್ರಿಟನ್ ನಿಂದ ಆಗಮಿಸುವ ಎಲ್ಲಾ ಪ್ರಯಾಣಿಕರೂ ಆಗಮಿಸುತ್ತಿದ್ದಂತೆಯೇ ವಿಮಾನ ನಿಲ್ದಾಣದಲ್ಲಿ ಆರ್ ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕಿದೆ, ಆರ್ ಟಿ-ಪಿಸಿಆರ್ ನೆಗೆಟೀವ್ ಬಂದರೂ 14 ದಿನಗಳ ಹೋಮ್ ಕ್ವಾರಂಟೈನ್ ನಲ್ಲಿರಬೇಕು ಎಂಬ ನಿಯಮಗಳನ್ನು ವಿಧಿಸಲಾಗಿದೆ.
ಬಿಎಲ್ ಆರ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಈ ಮಾರ್ಗಸೂಚಿಗಳು ಅನ್ವಯವಾಗಲಿದೆ.
ಕರ್ನಾಟಕದಿಂದ ಬೇರೆಡೆಗೆ ಹಾಗೂ ಬೇರೆಡೆಯಿಂದ ರಾಜ್ಯಕ್ಕೆ ಮಾರ್ಗ ಬದಲಾಯಿಸುವ ಪ್ರಯಾಣಿಕರು
ಬ್ರಿಟನ್ ನಿಂದ ಬರುವ ಎಲ್ಲಾ ವಿಮಾನಗಳಿಗೂ ನಿರ್ಬಂಧವೇ?
ಡಿ.21 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಸುತ್ತೋಲೆಯ ಪ್ರಕಾರ, ಡಿ.31, 2020 ರ 23:59 ಗಂಟೆಗಳ ವರೆಗೆ ಬ್ರಿಟನ್ ನಿಂದ ಭಾರತಕ್ಕೆ, ಭಾರತದಿಂದ ಬ್ರಿಟನ್ ಗೆ ಪ್ರಯಾಣಿಸುವ ಎಲ್ಲಾ ವಿಮಾನಗಳಿಗೂ ನಿರ್ಬಂಧ ವಿಧಿಸಲಾಗಿದೆ.
ಏರ್ ಬಬ್ಬಲ್ ಪ್ಲೈಟ್ ಅಂದರೇನು?
ಕೆಲವು ನಿರ್ಬಂಧ ಹಾಗೂ ನಿಯಂತ್ರಣಗಳೊಂದಿಗೆ ದ್ವಿಪಕ್ಷೀಯ ಒಪ್ಪಂದದ ಮೇರೆಗೆ ಉಭಯ ದೇಶಗಳ ನಡುವೆ ಸಂಚರಿಸುವ ಅಂತಾರಾಷ್ಟ್ರೀಯ ವಿಮಾನಗಳಿಗೆ ಏರ್ ಬಬ್ಬಲ್ ಫ್ಲೈಟ್ ಎನ್ನಲಾಗುತ್ತದೆ.
ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಕಡ್ಡಾಯ
ವಿದೇಶದಿಂದ ಆಗಮಿಸುವ ಪ್ರತಿಯೊಬ್ಬರಿಗೂ ಕೋವಿಡ್ ಸೋಂಕು ಪರೀಕ್ಷೆ ಕಡ್ಡಾಯವಾಗಿದ್ದು, ಎಲ್ಲೆ ಪ್ರಯಾಣಿಸಲಿ, ಈ ಕುರಿತ ಪ್ರಮಾಣ ಪತ್ರವನ್ನು ಹೊಂದುವುದು ಅಗತ್ಯವಾಗಿದೆ. ರಾಜ್ಯಕ್ಕೆ ಆಗಮಿಸುವ 72 ಗಂಟೆಗಳಿಗೆ ಮುನ್ನ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಬೇಕು.
- ಬಿ.ಎಸ್ ಯಡಿಯೂರಪ್ಪ
Advertisement