2030 ಸುಸ್ಥಿರ ಅಭಿವೃದ್ಧಿ ಗುರಿಗಳಿಂದ ಉತ್ತರ ಕರ್ನಾಟಕ ದೂರ!

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ಪ್ರಾದೇಶಿಕ ಅಸಮಾನತೆಯು ಪ್ರಮುಖ ತೊಡಕಾಗಿ ಪರಿಣಮಿಸಿದೆ. 2030ರೊಳಗೆ ಬಡತನ ಮುಕ್ತ ಗುರಿಯೊಂದಿಗಿನ ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕದಲ್ಲಿ ಕರ್ನಾಟಕ 52 ಅಂಕಗಳನ್ನು ಪಡೆದುಕೊಂಡಿದೆ.
2030 ಸುಸ್ಥಿರ ಅಭಿವೃದ್ಧಿ ಗುರಿಗಳ ಪಟ್ಟಿ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
2030 ಸುಸ್ಥಿರ ಅಭಿವೃದ್ಧಿ ಗುರಿಗಳ ಪಟ್ಟಿ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬೆಂಗಳೂರು: ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ಪ್ರಾದೇಶಿಕ ಅಸಮಾನತೆಯು ಪ್ರಮುಖ ತೊಡಕಾಗಿ ಪರಿಣಮಿಸಿದೆ. 2030ರೊಳಗೆ ಬಡತನ ಮುಕ್ತ ಗುರಿಯೊಂದಿಗಿನ ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕದಲ್ಲಿ ಕರ್ನಾಟಕ 52 ಅಂಕಗಳನ್ನು ಪಡೆದುಕೊಂಡಿದ್ದು, ರಾಷ್ಟ್ರೀಯ ಸರಾಸರಿ ಹಾಗೂ ತಮಿಳುನಾಡಿಗಿಂತ ಕಡಿಮೆ ಅಂಕಗಳನ್ನು  ಗಳಿಸಿದೆ.  ರಾಷ್ಟ್ರೀಯ ಸರಾಸರಿ 54ರಷ್ಟಿದ್ದರೆ, ತಮಿಳುನಾಡು 76 ಅಂಕಗಳನ್ನು ಪಡೆದುಕೊಂಡಿದೆ.

ಆದಾಗ್ಯೂ, ಕರ್ನಾಟಕ ಒಟ್ಟಾರೇ, ಕಾರ್ಯದಕ್ಷತೆಯಲ್ಲಿ 52 ರಷ್ಟು ಪ್ರಗತಿ ಸಾಧಿಸಿದೆ. ರಾಜ್ಯಾದ್ಯಂತ ಇರುವ ಪ್ರಾದೇಶಿಕ ಅಸಮಾನತೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ರೀತಿಯ ಕಾರ್ಯದಕ್ಷತೆ ಕಂಡುಬಂದಿದೆ.

ವಿಶೇಷ ಅಭಿವೃದ್ಧಿ ಯೋಜನೆಯ ಮೂಲಕ ಪ್ರಾದೇಶಿಕ ಅಸಮತೋಲನವನ್ನು ಪರಿಹರಿಸಲು ಪ್ರಯತ್ನಿಸುತ್ತಿರುವುದಾಗಿ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ರಚನೆಗಾಗಿ ಉನ್ನತ ಮಟ್ಟದ ಸಮಿತಿ ವರದಿ ಹೇಳಿದರೂ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಿಡುಗಡೆ ಮಾಡಿರುವ ಸುಸ್ಥಿರ ಅಭಿವೃದ್ದಿ ಗುರಿಗಳ ಮುನ್ನೋಟ 2020ರ ಕಾರ್ಯತಂತ್ರ ಮತ್ತು ಕ್ರಿಯಾ ಯೋಜನೆಯಲ್ಲಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ.

ಬಹು ಆಯಾಮದ ಬಡತನ ಸೂಚ್ಯಂಕ ವಿಶ್ಲೇಷಣೆಯಲ್ಲಿ ಯಾದಗಿರಿ ( 23.3) ರಾಯಚೂರು (17. 7) ಕಲಬುರಗಿ (14.2) ಕೊಪ್ಪಳ (13.7) ವಿಜಯಪುರ (13.5) ಗದಗ ಮತ್ತು ಬಳ್ಳಾರಿಯಲ್ಲಿ (13.1) ಅಂಕಗಳನ್ನು ಪಡೆದುಕೊಂಡಿವೆ. ಶಿಕ್ಷಣ, ಆರೋಗ್ಯ ಮತ್ತು ಜೀವನಮಟ್ಟವನ್ನು ಆಧಾರವಾಗಿಟ್ಟುಕೊಂಡು ಬಡತನ ಸೂಚ್ಯಂಕವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಮನ್ರೇಗಾ ಮೂಲಕ  ರಾಜ್ಯದಲ್ಲಿ ಶೇ.59 ರಷ್ಟು ಬಡ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಿದ್ದರೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅಸಮಾನತೆ ಇರುವುದು ವರದಿಯಲ್ಲಿ ಕಂಡುಬಂದಿದೆ.

2022 ಮತ್ತು 2030ರೊಳಗೆ  ಅಗತ್ಯ ಸೇವೆಗಳಾದ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸುರಕ್ಷತ ಮೇಲೆ ಒಟ್ಟು ರಾಜ್ಯ ಉತ್ಪನ್ನದ  12.5 ರಷ್ಟನ್ನು ಸರ್ಕಾರ ವೆಚ್ಚ ಮಾಡಬೇಕು ಎಂದು ಯೋಜನಾ ಆಯೋಗ ಪ್ರಕಟಿಸಿರುವ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. 

ಹಸಿವು ಮುಕ್ತ ಸೂಚ್ಯಂಕದಲ್ಲಿ ಕರ್ನಾಟಕ ಶೇ,54 ರಷ್ಟು ಅಂಕಗಳನ್ನು ಪಡೆದುಕೊಂಡಿದ್ದು, ರಾಷ್ಟ್ರೀಯ ಸರಾಸರಿ 48ಗಿಂತ ಉತ್ತಮ ಪ್ರಗತಿ ಕಂಡುಬಂದಿದೆ. ಆದಾಗ್ಯೂ, ಗೋವಾ ಮತ್ತು ದೆಹಲಿ ರಾಜ್ಯಗಳಿಗಿಂತ ಕಡಿಮೆ ಸ್ಥಾನ ಪಡೆದುಕೊಂಡಿದೆ. ಗೋವಾ ಮತ್ತು ದೆಹಲಿ ಕ್ರಮವಾಗಿ 80 ಮತ್ತು 72 ಅಂಕಗಳನ್ನು ಪಡೆದುಕೊಂಡಿವೆ. 

ಹಸಿವು ಸೂಚ್ಯಂಕದಲ್ಲಿಯೂ ಉತ್ತರ ಕರ್ನಾಟಕದ ಹೆಚ್ಚಿನ ಜಿಲ್ಲೆಗಳು ಹೆಚ್ಚಿನ ರೀತಿಯ ಪರಿಣಾಮ ಎದುರಿಸುತ್ತಿವೆ. ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ಗದಗ, ಬಳ್ಳಾರಿ ಮತ್ತು ಬಾಗಲಕೋಟೆ ಜಿಲ್ಲೆಗಳು ಅಪಾಯಕಾರಿ ಜಿಲ್ಲೆಗಳ ಪಟ್ಟಿಯಲ್ಲಿದ್ದರೆ,  ಚಿತ್ರದುರ್ಗ, ಧಾರವಾಡ, ವಿಜಯಪುರ, ಬೆಳಗಾವಿ, ಬೀದರ್, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳು ಗಂಭೀರ ರೀತಿಯ ಪರಿಣಾಮ ಎದುರಿಸುತ್ತಿರುವ ಜಿಲ್ಲೆಗಳ ಪಟ್ಟಿಯಲ್ಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com