ಜ.6ರ ಹೊತ್ತಿಗೆ ಕಡಿತಗೊಂಡ 10ನೇ ತರಗತಿ ಪಠ್ಯಕ್ರಮ ಪ್ರಕಟ: ಶಿಕ್ಷಣ ಸಚಿವ ಸುರೇಶ್ ಕುಮಾರ್ 

ಈ ಬಾರಿ ಕಡಿತಗೊಳಿಸಿದ 10ನೇ ತರಗತಿ ಪಠ್ಯಕ್ರಮ ಮತ್ತು 10 ಮತ್ತು 12ನೇ ತರಗತಿಯ ವಾರ್ಷಿಕ ಪರೀಕ್ಷೆಗಳ ಸಮಯ ವೇಳಾಪಟ್ಟಿಯನ್ನು ಜನವರಿ 6ರಂದು ಘೋಷಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಸ್ ತಿಳಿಸಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕಚೇರಿಗೆ ನಿನ್ನೆ ಆಗಮಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಸ್
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕಚೇರಿಗೆ ನಿನ್ನೆ ಆಗಮಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಸ್

ಬೆಂಗಳೂರು: ಈ ಬಾರಿ ಕಡಿತಗೊಳಿಸಿದ 10ನೇ ತರಗತಿ ಪಠ್ಯಕ್ರಮ ಮತ್ತು 10 ಮತ್ತು 12ನೇ ತರಗತಿಯ ವಾರ್ಷಿಕ ಪರೀಕ್ಷೆಗಳ ಸಮಯ ವೇಳಾಪಟ್ಟಿಯನ್ನು ಜನವರಿ 6ರಂದು ಘೋಷಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಸ್ ತಿಳಿಸಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕಚೇರಿಗೆ ನಿನ್ನೆ ಆಗಮಿಸಿದ್ದ ವೇಳೆ ವಿಶೇಷ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎನ್ ಸಿಇಆರ್ ಟಿ ಪಠ್ಯಕ್ರಮದ ಆಧಾರದ ಮೇಲೆ 12ನೇ ತರಗತಿಯ ಪಠ್ಯಕ್ರಮವನ್ನು ಈಗಾಗಲೇ ಶೇಕಡಾ 30ರಷ್ಟು ಕಡಿತ ಮಾಡಿಲಾಗಿದೆಯಾದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 10ನೇ ತರಗತಿಯ ಪಠ್ಯಕ್ರಮವನ್ನು ಎಷ್ಟು ಕಡಿತಗೊಳಿಸಬೇಕೆಂಬ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತಿಳಿಸಲಾಗುವುದು ಎಂದರು.

ಪಠ್ಯ ಕಡಿತಗೊಳಿಸಲು ಇಷ್ಟೊಂದು ಸಮಯ ಏಕೆ ಎಂದು ಕೇಳಿದಾಗ, 10ನೇ ತರಗತಿಯ ಮಕ್ಕಳು ಎಷ್ಟು ಕಲಿಯಬೇಕು ಎಂಬುದಕ್ಕೆ ಧಕ್ಕೆಯುಂಟಾಗಬಾರದು ಇನ್ನೊಂದು ಪಿಯುಸಿಗೆ ಮಕ್ಕಳು ಹೋಗುವಾಗ ಅವರು ಪಠ್ಯದಲ್ಲಿ, ಪಾಠದಲ್ಲಿ ಓದಿನಲ್ಲಿ ಕಳೆದುಕೊಂಡಿದ್ದೇವೆ ಎಂಬ ಭಾವನೆ ಅವರಿಗೆ ಮತ್ತು ಅವರ ಪೋಷಕರಿಗೆ ಬರಬಾರದು ಎಂಬ ಸದುದ್ದೇಶದಿಂದ ಯೋಚನೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

8,9 ಮತ್ತು 10ನೇ ತರಗತಿಯಲ್ಲಿ ಕಲಿತ ವಿಷಯಗಳಿಗೆ ಕತ್ತರಿ ಹಾಕಬೇಕೆಂದು ಭಾವಿಸಿದ್ದೇವೆ. ಆದರೆ ಆಳವಾಗಿ ಅಧ್ಯಯನ ಮಾಡಬೇಕಾದ ವಿಷಯಗಳಿಗೆ ಕತ್ತರಿ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜನವರಿ 1ರಂದು 10ನೇ ತರಗತಿ ಆರಂಭವಾದರೂ ಕೂಡ ವಿದ್ಯಾರ್ಥಿಗಳು ಕೇವಲ 4 ಗಂಟೆಗಳ ಕಾಲ ಮಾತ್ರ ಪ್ರತಿದಿನ ತರಗತಿಯಲ್ಲಿ ಇರಬೇಕಾಗುತ್ತದೆ. 10ನೇ ತರಗತಿಗೆ ಪ್ರತಿವರ್ಷ 220 ದಿನಗಳ ತರಗತಿಗಳು ಸಿಗುತ್ತಿತ್ತು. ಇನ್ನು ಜನವರಿ 1ರಿಂದ ಎಷ್ಟು ತರಗತಿಗಳು ಸಿಗುತ್ತವೆ ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಈ ವರ್ಷ ಕೊರೋನಾ ಕಾರಣದಿಂದ ಮಾರ್ಚ್-ಏಪ್ರಿಲ್ ನಲ್ಲಿ ಪರೀಕ್ಷೆಯಿಲ್ಲ. ಸಾಕಷ್ಟು ಸಮಯಗಳನ್ನು ಮಕ್ಕಳಿಗೆ ನೀಡಿ ಅವರಲ್ಲಿ ಆತ್ಮವಿಶ್ವಾಸ ತುಂಬಿಸಲಾಗುತ್ತದೆ. ಅವರ ಜೀವನದ ಜೊತೆ ಚೆಲ್ಲಾಟವಾಡುವುದಿಲ್ಲ ಎಂದು ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com