ಎಪಿಎಂಸಿ ಕಾಯ್ದೆಯನ್ನು ಕೆಲ ಸ್ವಾರ್ಥಿಗಳು ವಿರೋಧಿಸುತ್ತಿದ್ದಾರೆ: ಸಿಎಂ ಯಡಿಯೂರಪ್ಪ

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನ‌ದ ಅಂಗವಾಗಿ ಯಶವಂತಪುರದ ಎಪಿಎಂಸಿ ಯಾರ್ಡ್‌ನಲ್ಲಿ ಕಿಸಾನ್‌ ಸಮ್ಮಾನ್ ಯೋಜನೆ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯಮಂತ್ರಿ ಯಡಿಯೂರಪ್ಪ
ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನ‌ದ ಅಂಗವಾಗಿ ಯಶವಂತಪುರದ ಎಪಿಎಂಸಿ ಯಾರ್ಡ್‌ನಲ್ಲಿ ಕಿಸಾನ್‌ ಸಮ್ಮಾನ್ ಯೋಜನೆ ದಿನಾಚರಣೆಯನ್ನು ಆಚರಿಸಲಾಯಿತು.

ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ, ನಾನು ಕಳೆದ 50 ವರ್ಷದ ಹಿಂದೆ ಶಿಕಾರಿಪುರದ ಎಪಿಎಂಸಿಯಲ್ಲಿ ಧರಣಿ ಕೂತಿದ್ದೆ. ರೈತ ಬೆಳೆದಂಥ ಬೆಳೆ ಆತ ಎಲ್ಲಿ ಒಳ್ಳೆಯ ಬೆಲೆ ಸಿಗುತ್ತೆ ಅಲ್ಲಿ ಮಾರಾಟ ಮಾಡುವ ಸ್ವಾತಂತ್ರ ಸಿಗಬೇಕು. ಎಪಿಎಂಸಿಯಲ್ಲೇ ಮಾರಾಟ ಮಾಡಬೇಕು ಎಂಬ ನಿರ್ಬಂಧವನ್ನು ತೆಗೆದು ಹಾಕಬೇಕು ಎಂದು ಒಂದು ವಾರ ಸತ್ಯಾಗ್ರಹ ಮಾಡಿದ್ದೆ‌‌ ಎಂದು ಸ್ಮರಿಸಿದರು.

ಇಂದು ಪೂರ್ವ ಜನ್ಮದ ಪುಣ್ಯದ ಫಲವಾಗಿ ನಾನು ಮುಖ್ಯಮಂತ್ರಿಯಾಗುವ ವೇಳೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತ ಎಲ್ಲಿ ಬೇಕಾದರು ತಾನು ಬೆಳೆದ ಬೆಳೆಯನ್ನು ಮಾರಾಟ ಮಾಡುವ ಅವಕಾಶವನ್ನು ಪ್ರಧಾನಿ ಮೋದಿ ನೀಡಿದರು. ಆದರೆ ಇದನ್ನು ಕೆಲ ಸ್ವಾರ್ಥಿಗಳು ವಿರೋಧಿಸುತ್ತಿದ್ದಾರೆ. 99% ರೈತರು ಇದನ್ನು ಸ್ವಾಗತಿಸಿದ್ದಾರೆ. ರೈತರ ಕಣ್ಣೀರನ್ನು ಒರೆಸಿ, ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ‌‌ ನೀಡಿ, ರೈತ ನೆಮ್ಮದಿಯಿಂದ ಗೌರವದಿದಂದ, ಸ್ವಾಭಿಮಾನದಿಂದ ಬಾಳುತ್ತಾರೆ ಎಂದು ನಾನು ಭರವಸೆ ನೀಡುತ್ತೇನೆ ಎಂದರು.

ಬಳಿಕ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸ್ವಾತಂತ್ರ್ಯದ ಬಳಿಕ ಯಾವ ಉದ್ದೇಶಕ್ಕಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಲಿದಾನ ಮಾಡಿದ ದೇಶದ ಹಿರಿಯರ ಮನಸ್ಸಿಗೆ ನೆಮ್ಮದಿ ಕೊಡುವ ರಾಜಕೀಯ ನಡೆದಿಲ್ಲ. ದೇಶ ಮೊದಲು ಎಂಬ ಶಬ್ದಕ್ಕೆ ಅರ್ಥ ಬರುವಂಥ ರೀತಿಯಲ್ಲಿ ದೇಶದಲ್ಲಿ ರಾಜಕಾರಣ‌ ಮಾಡಿಲ್ಲ. ಕಾಂಗ್ರೆಸ್ ನವರು ದೇಶವನ್ನು ಲೂಟಿ ಮಾಡುವ ಕೆಲಸ‌ ಮಾಡಿದರು ಎಂದು ಕಿಡಿ ಕಾರಿದರು. 

ಅನ್ನದಾನತನಿಗೆ‌ ಗೌರವ ಬರುವ ರೀತಿಯಲ್ಲಿ ದೇಶದ ರಾಜನೀತಿ ನಡೆಯಲಿಲ್ಲ. ‌ಅಟಲ್ ಅವರು ಹೊಸ‌ ಪಕ್ಷ ಕಟ್ಟಿದರು. ದೇಶದ ರೈತನಿಗೆ ಎಲ್ಲಾ ಗೌರವ ಸಿಗುವ ನಿಟ್ಟಿನಲ್ಲಿ ಮೋದಿ ಕೆಲಸ‌ ಮಾಡುತ್ತಿದ್ದಾರೆ. ಅನ್ನದಾತನಿಗೆ ಬೇಕಾದ ಕೆಲಸ‌ ಮಾಡಬೇಕು. ಸ್ವಾತಂತ್ರ್ಯ ಬಂದ ಬಳಿಕವೂ ಆತ ಸ್ವಾಭಿಮಾನದಿಂದ ಬದುಕಲು ಸಾಧ್ಯವಿಲ್ಲ. ರೈತರ ಬೆಳೆದ ಉತ್ಪನ್ನಗಳು ರೈತನದ್ದಾಗಿರಲಿಲ್ಲ. ಅದು ದಲ್ಲಾಳಿಗಳದ್ದಾಗಿತ್ತು. ಅದರಿಂದ ಹೊರಗೆ ತರಬೇಕು ಎಂದು ಕಾನೂನು ತಿದ್ದುಪಡಿ ತರಲಾಗಿದೆ ಎಂದು ಅವರು ವಿವರಿಸಿದರು.

ವಿರೋಧಿಗಳು ನಮ್ಮ ರೈತರು ಸ್ವಾಭಿಮಾನಿಯಾಗಿರಬಾರದು ಎಂಬ ದೃಷ್ಟಿಯಿಂದ ಅವರ ಮೇಲೆ ಹತೋಟಿ‌ ಮಾಡುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ನಿಮ್ಮ ಪರವಾಗಿದೆ. ‌ಮೋದಿ ನಿಮ್ಮನ್ನು ಸ್ವಾಭಿಮಾನಿ ರೈತನಾಗಿ ಪರಿವರ್ತನೆ ಮಾಡುವ ಕೆಲಸ‌ ಮಾಡಿದ್ದಾರೆ ಎಂದು ತಿಳಿಸಿದರು.

ಪ್ರಧಾನಮಂತ್ರಿಯವರಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಹಾಗೂ ವಿವಿಧ ಯೋಜನೆಗಳ ಲೋಕಾರ್ಪ ಣೆಯ ವರ್ಚುವಲ್ ಕಾರ್ಯಕ್ರಮದಲ್ಲೂ ಸಿಎಂ ಭಾಗಿಯಾದರು. ಪ್ರಧಾನಿ ಮೋದಿ ಜೊತೆಗಿನ‌ ರೈತರ ಸಂವಾದವನ್ನು ಆಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com