ಮುಂದಿನ ವಾರ ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಪಿ.ರವಿಕುಮಾರ್ ನೇಮಕ ಸಾಧ್ಯತೆ?

ಮುಂದಿನ ವಾರ ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯೊಂದಿಗೆ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳ ಮಟ್ಟದಲ್ಲಿ ಪುನರ್ ವ್ಯವಸ್ಥೆಗೊಳಿಸಲಾಗುತ್ತಿದೆ. 
ರಾಜ್ಯದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್
ರಾಜ್ಯದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್

ಬೆಂಗಳೂರು: ಮುಂದಿನ ವಾರ ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯೊಂದಿಗೆ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳ ಮಟ್ಟದಲ್ಲಿ ಪುನರ್ ವ್ಯವಸ್ಥೆಗೊಳಿಸಲಾಗುತ್ತಿದೆ. ಹಾಲಿ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯ್ ಭಾಸ್ಕರ್ ನಿವೃತ್ತಿಗೆ ಸಿದ್ಧತೆ ನಡೆದಿದ್ದು, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗುವ ಸಾಧ್ಯತೆಯಿದೆ.
 
1984ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ರವಿಕುಮಾರ್ ಕರ್ನಾಟಕ್ ಕೇಡರ್ ನಲ್ಲಿ ಎರಡನೇ ಅತಿ ಹಿರಿಯ ಐಎಎಸ್ ಅಧಿಕಾರಿಯಾಗಿದ್ದಾರೆ.ಐಪಿಎಸ್ ಕೇಡರ್ನಲ್ಲಿ ರಾಜ್ಯ ಪೊಲೀಸ್ ವಸತಿ ನಿಗಮದ ಮುಖ್ಯಸ್ಥರು ಆಗಿರುವ ಡಿಜಿಪಿ ಆರ್ ಪಿ ಶರ್ಮಾ ಕೂಡಾ ಡಿಸೆಂಬರ್ 31 ರಂದು ಪದವಿ ತ್ಯಜಿಸಲಿದ್ದಾರೆ.

1989ರ ಬ್ಯಾಚಿನ್ ಅರಣ್ಯ ಘಟಕದ ಹಿರಿಯ ಎಡಿಜಿಪಿ ಪಿ. ರವೀಂದ್ರನಾಥ್ ಅವರು ಡಿಜಿಪಿಯಾಗಿ ಬಡ್ತಿ ಪಡೆಯುವ ಸಾಧ್ಯತೆಯಿದೆ. ಅಕ್ಟೋಬರ್ ತಿಂಗಳಲ್ಲಿ ಕಿರುಕುಳದ ಆರೋಪದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತದನಂತರ ರಾಜೀನಾಮೆಯನ್ನು ವಾಪಾಸ್ ಪಡೆದುಕೊಂಡಿದ್ದರು.

ಇದಲ್ಲದೇ, ನಾಲ್ಕು ಐಜಿಪಿಗಳಿಗೆ ಡಿಸೆಂಬರ್ 31ರಂದು ಬಡ್ತಿ ದೊರೆಯುವ ಸಾಧ್ಯತೆಯಿದೆ. ಇವರಲ್ಲಿ ಸೀಮಾಂತ್ ಕುಮಾರ್ ಸಿಂಗ್ ( ಸೆಂಟ್ರಲ್ ರೆಂಜ್ ) ಆರ್ ಹಿತೇಂದ್ರ ( ಪ್ರಧಾನ ಕಚೇರಿ) ಹರಿಶೇಖರನ್ (ತರಬೇತಿ) ಮತ್ತು ಬಿ. ಕೆ. ಸಿಂಗ್ . ಪ್ರಸ್ತುತ ರಾಜ್ಯದಲ್ಲಿ 17 ಮಂದಿ ಎಡಿಜಿಪಿಗಳಿದ್ದಾರೆ. ಸಿಂಗ್ ಪ್ರಸ್ತುತ ನವದೆಹಲಿಯ ಭಾರತೀಯ ಆಹಾರ ನಿಗಮದ ಕಾರ್ಯನಿರ್ವಹಕ ನಿರ್ದೇಶಕರಾಗಿದ್ದಾರೆ. ಡಿಐಜಿ ಪವರ್ ಅವರಿಗೂ ಐಜಿಪಿಯಾಗಿ ಬಡ್ತಿ ದೊರೆಯಬೇಕಾಗಿದೆ. 

ಈ ಮಧ್ಯೆ  ನೂತನ ಮುಖ್ಯ ಕಾರ್ಯದರ್ಶಿ ನೇಮಕದೊಂದಿಗೆ ಕೆಲ ಹಿರಿಯ ಐಎಎಸ್ ಅಧಿಕಾರಿಗಳ ಹುದ್ದೆಯ ಮೇಲೆ ಪರಿಣಾಮ  ಬೀರುವ ಸಾಧ್ಯತೆಯಿದೆ. 1986ನೇ ಬ್ಯಾಚಿನ ವಂದಿತಾ ಶರ್ಮಾ, ಪಿ. ರವಿಕುಮಾರ್ ನಿರ್ವಹಿಸುತ್ತಿದ್ದ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗುವ ಸಾಧ್ಯತೆಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com