ಬಳ್ಳಾರಿಗೆ ಅಮಿತ್ ಶಾ ಭೇಟಿ: ವಿಜಯನಗರ ಜಿಲ್ಲೆ ಘೋಷಣೆ ಸಾಧ್ಯತೆ

ಕೇಂದ್ರ ಗೃಹಸಚಿವ ಅಮಿತ್ ಶಾ ಎರಡು ದಿನಗಳ ಭೇಟಿಗಾಗಿ ಜನವರಿ ಮೂರನೇ ವಾರದಲ್ಲಿ ಕರ್ನಾಟಕಕ್ಕೆ ಬರಲಿದ್ದಾರೆ. ಈ ವೇಳೆ ಪ್ರಸಿದ್ಧ ಪ್ರವಾಸಿ ತಾಣ ಹಂಪಿಗೂ ಭೇಟಿ ನೀಡುವ ಸಾಧ್ಯತೆಯಿದ್ದು, ಅಗತ್ಯ ಭದ್ರತೆ ವ್ಯವಸ್ಥೆ ಶೀಘ್ರವೇ ಮಾಡಲಾಗುವುದು
ಅಮಿತ್ ಶಾ
ಅಮಿತ್ ಶಾ

ಬಳ್ಳಾರಿ: ಕೇಂದ್ರ ಗೃಹಸಚಿವ ಅಮಿತ್ ಶಾ ಎರಡು ದಿನಗಳ ಭೇಟಿಗಾಗಿ ಜನವರಿ ಮೂರನೇ ವಾರದಲ್ಲಿ ಕರ್ನಾಟಕಕ್ಕೆ ಬರಲಿದ್ದಾರೆ. ಈ ವೇಳೆ ಪ್ರಸಿದ್ಧ ಪ್ರವಾಸಿ ತಾಣ ಹಂಪಿಗೂ ಭೇಟಿ ನೀಡುವ ಸಾಧ್ಯತೆಯಿದ್ದು, ಅಗತ್ಯ ಭದ್ರತೆ ವ್ಯವಸ್ಥೆ ಶೀಘ್ರವೇ ಮಾಡಲಾಗುವುದು.

ಹಂಪಿ ಭೇಟಿ ವೇಳೆ ಅಮಿತ್ ಶಾ ವಿಜಯನಗರ ಹೊಸ ಜಿಲ್ಲೆ ರಚನೆ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಸ್ಥಳೀಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. 

ಹಲವು ದಿನಗಳಿಂದ ನಾವು ವಿಜಯನಗರ ಹೊಸ ಜಿಲ್ಲೆ ರಚನೆ ಘೋಷಣೆಗಾಗಿ ಕಾಯುತ್ತಿದ್ದೇವೆ, ಜನವರಿ 14 ರೊಳಗೆ ಆಕ್ಷೇಪ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ, ಹಂಪಿಗೆ ಅಮಿತ್ ಶಾ ಬಂದಾಗ ಪ್ರತ್ಯೇಕ ವಿಜಯನಗರ ಜಿಲ್ಲೆ ಘೋಷಣೆ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಜನವರಿ 16 ರಿಂದ 17 ರವರೆಗೆ ಅಮಿತ್ ಶಾ ಕರ್ನಾಟಕ ಪ್ರವಾಸ ಕೈಗೊಳ್ಳುವ ನಿರೀಕ್ಷೆಯಿದೆ. ಅವರು ಹೊಸಪೇಟೆಯಲ್ಲಿ ನಡೆಯುವ ಸರ್ಕಾರಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಹಂಪಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಹೀಗಾಗಿ ನಾವು ಸರ್ಕಾರದ ದೃಢೀಕರಣಕ್ಕಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮಿತ್ ಶಾ ಭೇಟಿ ವೇಳೆ ಪ್ರವಾಸಿಗರಿಗೆ ತೊಂದರೆಯಾದಂತೆ ಕ್ರಮ ಕೈಗೊಳ್ಳುತ್ತೇವೆ, ಸ್ಥಳೀಯ ಬಿಜೆಪಿ ಸದಸ್ಯರು ಅಮಿತ್ ಶಾ ಅವರು ಸ್ವಲ್ಪ ಸಮಯದವರೆಗೆ ಹಂಪಿಗೆ ಭೇಟಿ ನೀಡಲು ಬಯಸಿದ್ದರು ಎಂದು ತಿಳಿಸಿದ್ದರು.

ಶಿವಮೊಗ್ಗ ಜಿಲ್ಲೆಯ ಭದ್ರವತಿಯಲ್ಲಿರುವ ಕ್ಷಿಪ್ರ ಕ್ರಿಯಾ ಪಡೆ (ಆರ್‌ಎಎಫ್) ತರಬೇತಿ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಆದರೆ ಬಲ್ಲಾರಿ ಜಿಲ್ಲೆಗೆ ಭೇಟಿ ನೀಡುವ ಅವರ ಯೋಜನೆ ಇನ್ನೂ ದೃಢ ಪಟ್ಟಿಲ್ಲ ”ಎಂದು ಬಳ್ಳಾರಿಯ ಸ್ಥಳೀಯ ಬಿಜೆಪಿ ಮುಖಂಡರು ಹೇಳಿದ್ದಾರೆ. ಅಂಜನಾದ್ರಿ ಬೆಟ್ಟಕ್ಕೆ ಅಮಿತ್ ಶಾ ಭೇಟಿ ನೀಡಲಿದ್ದಾರೆ ಎಂದು ಸ್ಥಳೀಯರು ಆಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com