ಸಿಲಿಕಾನ್ ಸಿಟಿ ಪೋಲೀಸ್ ಭರ್ಜರಿ ಕಾರ್ಯಾಚರಣೆ: 2 ಕೋಟಿ ಮೌಲ್ಯದ ನಕಲಿ ನೋಟು ವಶ, ಇಬ್ಬರ ಬಂಧನ

 ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ನಕಲಿ ನೋಟಿನ ಹಾವಳಿ ಪ್ರಾರಂಭವಾಗಿದೆ. ನಕಲಿ ನೋಟು ಜಾಲದ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೋಲೀಸರು ಬರೋಬ್ಬರಿ ಎರಡು ಕೋಟಿ ಮೌಲ್ಯದ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಲಿಕಾನ್ ಸಿಟಿ ಪೋಲೀಸ್ ಭರ್ಜರಿ ಕಾರ್ಯಾಚರಣೆ: 2 ಕೋಟಿ ಮೌಲ್ಯದ ನಕಲಿ ನೋಟು ವಶ, ಇಬ್ಬರ ಬಂಧನ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ನಕಲಿ ನೋಟಿನ ಹಾವಳಿ ಪ್ರಾರಂಭವಾಗಿದೆ. ನಕಲಿ ನೋಟು ಜಾಲದ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೋಲೀಸರು ಬರೋಬ್ಬರಿ ಎರಡು ಕೋಟಿ ಮೌಲ್ಯದ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಪಾದರಾಯನಪುರದ ಇಮ್ರಾನ್ ಹಾಗೂ ಮುಬಾರ್ ಎಂಬುವವರನ್ನು ಬಂಧಿಸಲಾಗಿದೆ, ಬಂಧಿತರಿಂದ ನಕಲಿ ನೋಟು ತಯಾರಿಕೆ ಯಂತ್ರ, 2000, 200 ಮುಖಬೆಲೆಯೆ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.

ನಗರದ ನಾಲ್ಕು ಕಡೆ ಇವರು ನಕಲಿ ನೋಟು ತಯಾರಿಸುತ್ತಿದ್ದರೆಂದು ಹೇಳಲಾಗಿದ್ದು ಪಾದರಾಯನಪುರದ ಅರಾಫತ್ ನಗರದಲ್ಲಿನ ನೋಟು ತಯಾರಿಕೆ ಘಟಕದ ಮೇಲೆ ವಿಲ್ಸನ್ ಗಾರ್ಡನ್ ಪೋಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. 

ಬೆಂಗಳೂರು ನಗರದಲ್ಲಿ ನಕಲಿ ನೋಟು ಹಾವಳಿ ಪ್ರಕರಣದಲ್ಲಿ ನಿನ್ನೆ ಜಮಾಲ್ ಎಂಬಾತನನ್ನು ಬಂಧಿಸಲಾಗಿತ್ತು. ಇದೀಗ ಇನ್ನಿಬ್ಬರನ್ನು ಬಂಧ್ಸಿಇದ ಪೋಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com