ಸ್ನೇಹಿತನ ಮನೆಯಲ್ಲೇ ಕಳ್ಳತನ: ಮೂವರು ಸೆರೆ; 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಸ್ನೇಹಿತನ‌ ಮನೆಯಲ್ಲಿ ಕಳ್ಳತನ‌ ಮಾಡಲು ಸುಪಾರಿ ಕೊಟ್ಟವನಿಗೆ ಚಳ್ಳೆ ಹಣ್ಣು ತಿನಿಸಿ ನಗ, ನಾಣ್ಯ ದೋಚಿ ಪರಾರಿಯಾಗಿದ್ದ ಇಬ್ಬರು ಕಳ್ಳರು ಸೇರಿ ಮೂವರನ್ನು ಸದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿ, 4.50 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. 
ಸ್ನೇಹಿತನ ಮನೆಯಲ್ಲೇ ಕಳ್ಳತನ: ಮೂವರು ಸೆರೆ; 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಬೆಂಗಳೂರು: ಸ್ನೇಹಿತನ‌ ಮನೆಯಲ್ಲಿ ಕಳ್ಳತನ‌ ಮಾಡಲು ಸುಪಾರಿ ಕೊಟ್ಟವನಿಗೆ ಚಳ್ಳೆ ಹಣ್ಣು ತಿನಿಸಿ ನಗ, ನಾಣ್ಯ ದೋಚಿ ಪರಾರಿಯಾಗಿದ್ದ ಇಬ್ಬರು ಕಳ್ಳರು ಸೇರಿ ಮೂವರನ್ನು ಸದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿ, 4.50 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಬಿಸ್ಮಿಲ್ಲಾನಗರದ 3ನೆ ಮೈನ್, ಇ ಕ್ರಾಸ್ ನಿವಾಸಿ ಇಮ್ರಾನ್ ಅಹ್ಮದ್ (30), ಡಿ.ಜೆ.ಹಳ್ಳಿ ಮೈನ್ ರೋಡ್, ಹೊಂಗಸಂದ್ರ, ಎಸ್.ಆರ್. ನಾಯ್ಡು ಲೇಔಟ್, 10ನೇ ಎ ಮೈನ್ ರೋಡ್ ನಿವಾಸಿ ಸೈಯದ್ ಜಮೀರ್ ಅಹ್ಮದ್ (28) ಹಾಗೂ ಬಿಟಿಎಂ 1ನೇ ಹಂತ, 2ನೇ ಮೈನ್, 2ನೆ ಕ್ರಾಸ್ ನಿವಾಸಿ ಅತೀಕ್ ಪಾಷ (31) ಬಂಧಿತ ಆರೋಪಿಗಳು.

ಬಂಧಿತರಿಂದ‌ 4.50 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನ ನಗದನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ. 

ಡಿ.14 ರಂದು ಗುರಪ್ಪನಪಾಳ್ಯದ ನಿವಾಸಿ ಸಲೀಂ ಪಾಷ ಮನೆಗೆ ನಕಲಿ‌ ಕೀ ಬಳಸಿ ಸೈಯದ್ ಹಾಗೂ ಅತೀಕ್ ನುಗ್ಗಿ 100 ಗ್ರಾಂ ಚಿನ್ನ ಹಾಗೂ ನಗದು ದೋಚಿ ಪರಾರಿಯಾಗಿದ್ದರು. ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಲೀಂ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಮನೆ ಕಳ್ಳತನಕ್ಕೆ ಸಲೀಂ ಪಾಷನ ಸ್ನೇಹಿತ ಇಮ್ರಾನ್ ಪಾಷ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ. ಕೆಲಸವಿಲ್ಲ ಎಂದು ಆಪ್ತನ ಮನೆಯಲ್ಲೇ ಆತ ಕಳ್ಳತನ ಮಾಡಲು ಸಂಚು ರೂಪಿಸಿದ್ದ ಇಮ್ರಾನ್ ಇಬ್ಬರಿಗೆ ಸುಪಾರಿ ನೀಡಿದ್ದ.‌‌ ಆದರೆ, ಸುಪಾರಿ‌ ಕೊಟ್ಟ ಇಮ್ರಾನ್ ಪಾಷಗೆ ಚಳ್ಳೆ ಹಣ್ಣು ತಿನಿಸಿದ ಕಳ್ಳರು ನಗ, ನಾಣ್ಯ ದೋಚಿ ಪರಾರಿಯಾಗಿದ್ದರು.

ಕಳ್ಳತನವಾಗಿದ್ದ ದಿನ ಸಲೀಂ ಪಾಷ ಮನೆಗೆ ಹೋಗಿದ್ದ ಇಮ್ರಾನ್ ಪಾಷ, ಪುರಾವೆಗಳನ್ನು ನಾಶ ಮಾಡಲು ಯತ್ನಿಸಿದ್ದಾನೆ. ಆದರೆ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದಾಗ ಇಮ್ರಾನ್ ಪಾಷ ಫಿಂಗರ್ ಪ್ರಿಂಟ್ ಸಿಕ್ಕಿದ್ದು, ವಿಚಾರಣೆ ನಡೆಸಿದಾಗ ಕಳ್ಳತನ ಮಾಡಲು ಸುಪಾರಿ ಕೊಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ. ಸದ್ದಗುಂಟೆಪಾಳ್ಯ ಪೊಲೀಸರು ಎಲ್ಲರನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com